Advertisement
ನನ್ನ ಪ್ರಾಥಮಿಕ ಶಿಕ್ಷಣದ ದಿನಗಳವು. ಆಗೆಲ್ಲಾ ಶಾಲೆಗೆ ಕಾಲ್ನಡಿಗೆಯಲ್ಲೇ ಸಾಗುತ್ತಿದ್ದೆವು. ಶಾಲೆಗೆ ತಲುಪುವ ಆ ಮೂರು ನಾಲ್ಕು ಮೈಲುಗಳ ಹಾದಿಯನ್ನು ನಿತ್ಯ ಕ್ರಮಿಸುವುದೆಂದರೆ ನಮಗೊಂಥರ ಖುಷಿಯ ಸಂಗತಿ. ತೋಟ, ಗದ್ದೆಯ ಬದು, ಸಂಕ, ಕೆರೆಯ ಏರಿ, ಕಾಡಿನ ನಡುವಿನ ನಿರ್ಜನ ಹಾದಿ…
Related Articles
Advertisement
ಆತ ಶಾಲೆ ತಲುಪಿದವನೇ ನೇರ ಮುಖ್ಯೋಪಾಧ್ಯಾಯರತ್ತ ಹೆಜ್ಜೆ ಹಾಕಿದ. ಆತ ದೂರು ಕೊಡುತ್ತಾನೆ ಎನ್ನುವುದು ನನಗೆ ನಿಕ್ಕಿಯಾಗಿತ್ತು. ನಾನೂ ಅತ್ತ ಧಾವಿಸಿದೆ. ಆ ಮುಖ್ಯೋಪಾಧ್ಯಾಯರು ನಮ್ಮಿಬ್ಬರಿಗೂ ನೆರೆಮನೆಯವರೇ ಆಗಿದ್ದರು. ಹಾಗಾಗಿ ಈ ಜಗಳದಲ್ಲಿ ನನ್ನದೇನೂ ತಪ್ಪಿಲ್ಲದ ಕಾರಣ ಸತ್ಯಾಂಶವನ್ನು ಅವರಿಗೆ ಮನದಟ್ಟು ಮಾಡಬಹುದೆಂಬ ವಿಶ್ವಾಸದಲ್ಲಿ ನಾನಿದ್ದೆ. ಆದರೆ ನಾನು ಅಲ್ಲಿಗೆ ತಲುಪುವುದರೊಳಗೆ ಆತ ಗೋಳ್ಳೋ ಎಂದು ಕಣ್ಣೀರು ಹಾಕುತ್ತಾ ಒಂದಕ್ಕೆ ನಾಲ್ಕು ಸೇರಿಸಿ ನನ್ನ ಮೇಲೆ ದೂರು ಕೊಟ್ಟಿದ್ದ. ಆ ಶಿಕ್ಷಕರು ನನಗೆ ಬಾಯಿತೆರೆಯಲೂ ಅವಕಾಶ ಕೊಡದೆ, ಆತ ಚಿಕ್ಕವನು ಎಂಬ ನೆಪವನ್ನು ಮುಂದೊಡ್ಡಿ ಒಮ್ಮಿಂದೊಮ್ಮೆಗೇ, ಎರಡೂ ಕೈ ಮೇಲಕ್ಕೆತ್ತಿಕೊಂಡು ಶಾಲೆಯ ಸುತ್ತ ಹತ್ತು ಸುತ್ತು ಓಡು ಎಂದು ತಾಕೀತು ಮಾಡಿಬಿಟ್ಟರು!
ಎರಡೇಟು ಹಾಕಿದ್ದರೂ ಸಹಿಸಿಕೊಳ್ಳುತ್ತಿದ್ದೆ, ಆದರೆ ಕ್ಲಾಸಿನಲ್ಲಿ ಹುಷಾರಿನ, ಒಳ್ಳೆಯ ಹುಡುಗ ಎನಿಸಿಕೊಂಡಿದ್ದ ನನಗೆ ಶಾಲೆಗೆ ಸುತ್ತು ಹೊಡೆಯುವ ಆ ಶಿಕ್ಷೆ ಘೋರ ಅವಮಾನದಂತೆ ಕಂಡಿತು. ಎಲ್ಲರೂ ನೋಡಿ ಕುಹಕವಾಡುತ್ತಾರೆಂಬ ನಾಚಿಕೆ. ದೊಡ್ಡ ಕ್ಲಾಸಿನಲ್ಲಿದ್ದ ಅಣ್ಣಂದಿರ ಕಣ್ಣಿಗೆ ಬಿದ್ದರೆ ಏನು ಕಥೆ? ಎಂಬ ಆತಂಕ ಇನ್ನೊಂದೆಡೆ. ಆದರೆ ಕೆಂಡದ ಉಂಡೆಯಂತಿದ್ದ ಅವರ ಕಣ್ಣುಗಳು ನನ್ನನ್ನು ಬಿಡದೆ ಶಾಲೆಯ ಸುತ್ತ ಅಟ್ಟಿಸಿಬಿಟ್ಟವು.
ನನಗೇನೂ ಮಾತನಾಡಲು ಅವಕಾಶ ಕೊಡದೆ ಅವರೇಕೆ ಇಂಥ ಶಿಕ್ಷೆಗೆ ಗುರಿಪಡಿಸಿದರೆಂದು ಯೋಚಿಸಿದೆ. ಉತ್ತರವೂ ಸಿಕ್ಕಿತ್ತು. ಆತನ ತಾಯಿ- ತಂದೆ ಆ ಮೇಷ್ಟ್ರ ಮನೆಯಲ್ಲಿ ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದರು. ಹಾಗಾಗಿ ಶಿಕ್ಷಕರಿಗೆ ಆತನ ಬಗ್ಗೆ ಅಗತ್ಯಕ್ಕಿಂತಲೂ ಹೆಚ್ಚೇ ಮೃದು ಧೋರಣೆ ಇತ್ತು. ಅನವಶ್ಯಕ ಕಿತ್ತಾಟಕ್ಕಿಳಿದಿದ್ದ ಆತ ಆ ಶಿಕ್ಷಕರ ಕೃಪಾಕಟಾಕ್ಷದಿಂದಾಗಿ ಗೆದ್ದೆನೆಂಬ ಹುರುಪಿನಲ್ಲಿ ತಣ್ಣಗೆ ಹೋಗಿ ತರಗತಿಯಲ್ಲಿ ಕುಳಿತ. ಏನೂ ತಪ್ಪಿಲ್ಲದೆಯೂ ಅಪಮಾನಕಾರಿ ಶಿಕ್ಷೆಗೆ ತುತ್ತಾಗಿ ಅಳುತ್ತಾ ಶಾಲೆಗೆ ಹತ್ತು ಸುತ್ತು ಬಂದಿದ್ದ ನಾನು ಅವರ ವೈಯಕ್ತಿಕ ಹಿತಾಸಕ್ತಿಯ ಲೆಕ್ಕಾಚಾರಕ್ಕೆ ಬಲಿಪಶುವಾಗಿದ್ದೆ!
ಹೀಗೆ ವೃಥಾ ಶಿಕ್ಷೆಗೆ ಒಳಪಡಿಸಿದ್ದಕ್ಕೆ ಆ ಶಿಕ್ಷಕರ ವಿರುದ್ಧ ಕೋಪಿಸಿಕೊಂಡು ಖಂಡಿಸುವ ಪ್ರಚೋದನೆಗೊಳಪಡಬೇಕೊ ಅಥವಾ ಅವರೇ ಮುಂದೆ ಮಾಡಿದ ಕಾರಣದಂತೆ ಪ್ರಾಯದಲ್ಲಿ(ದೈಹಿಕವಾಗಿ ಅಲ್ಲ) ಚಿಕ್ಕವನಾದ ಹುಡುಗನ ಜೊತೆಗೆ ಕೈ ಮಿಲಾಯಿಸಿದ್ದಕ್ಕೆ ಪಶ್ಚಾತ್ತಾಪ ಪಡಬೇಕೋ ಎಂಬ ಗೊಂದಲಕ್ಕೆ ಬಿದ್ದೆ. ಕೊನೆಗೆ ಎರಡನೆಯದ್ದೇ ಸೂಕ್ತವೆನಿಸಿತು. ಅದರಲ್ಲೂ ಒಂದು ಸಕಾರಾತ್ಮಕ ಪಾಠ ಕಲಿಯುವುದರೊಂದಿಗೆ ಮರೆತು ಮುನ್ನಡೆದೆ. ಅಸಲಿಗೆ ಅದೂ ಕೂಡಾ ಆ ಶಿಕ್ಷಕರೇ ನನಗೆ ಕಲಿಸಿದ ಶಿಕ್ಷಣದ ಬುನಾದಿಯ ಮೇಲೆ ರೂಪುಗೊಂಡಿದ್ದ ಗುಣವಿಶೇಷವೇ ಆಗಿತ್ತಲ್ಲವೇ? ಹಾಗಾಗಿ ಶಿಕ್ಷೆಗಿಂತಲೂ ಅವರು ಕೊಟ್ಟ ಶಿಕ್ಷಣವೇ ನನಗೆ ಮುಖ್ಯವೆನಿಸಿತು.
– ಸಂದೇಶ್ ಎಚ್. ನಾಯ್ಕ, ಕುಂದಾಪುರ