Advertisement

ಚಾಮರಾಜೇಶ್ವರ ಸ್ವಾಮಿ ದೊಡ್ಡ ರಥ ಭಾಗಶಃ ಭಸ್ಮ

03:45 AM Feb 20, 2017 | Team Udayavani |

ಚಾಮರಾಜನಗರ: ನಗರದ ಚಾಮರಾಜೇಶ್ವರ ಸ್ವಾಮಿ ದೊಡ್ಡ ರಥಕ್ಕೆ ಭಾನುವಾರ ಬೆಳಗಿನ ಜಾವ ಬೆಂಕಿ ಬಿದ್ದ ಪರಿಣಾಮ ಭಾಗಶಃ ಸುಟ್ಟು ಕರಕಲಾಗಿದೆ.

Advertisement

ನಗರದ ಹೃದಯ ಭಾಗದಲ್ಲಿರುವ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಎದುರಿನ ಅರಳಿ ಕಟ್ಟೆ ಬಳಿ ನಿಲ್ಲಿಸಿದ್ದ
ದೊಡ್ಡ ರಥಕ್ಕೆ ತಾತ್ಕಾಲಿಕವಾಗಿ ಹಾಕಿದ್ದ ತೆಂಗಿನ ಗರಿ ಹೊದಿಕೆ ಸಂಪೂರ್ಣವಾಗಿ ಸುಟ್ಟುಹೋಗಿದೆ. ರಥಕ್ಕೆ ಬೆಂಕಿ ಬಿದ್ದಿರುವುದನ್ನು ನೋಡಿದ ಸಮೀಪದಲ್ಲಿದ್ದ ಬ್ಯಾಂಕ್‌ಗಳ ಸೆಕ್ಯುರಿಟ್‌ ಗಾರ್ಡ್‌ಗಳು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ಆರಿಸಿದ್ದಾರೆ. ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ.

ಪೊಲೀಸರು ದೇವಸ್ಥಾನದ ಸುತ್ತಮತ್ತಲಿನ ಸಿಸಿ ಕ್ಯಾಮರಾ ಪರಿಶೀಲಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸ್ಥಳಕ್ಕೆ ಎಎಸ್ಪಿ ಮುತ್ತುರಾಜ್‌ಗೌಡ, ಡಿವೈಎಸ್ಪಿಗಂಗಾಧರಸ್ವಾಮಿ ಹಾಗೂ ಸಿಬ್ಬಂದಿ ಶ್ವಾನದಳದೊಂದಿಗೆ ಆಗಮಿಸಿ
ಪರಿಶೀಲನೆ ನಡೆಸಿದರು. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜುಲೈನಲ್ಲಿ ಚಾಮರಾಜೇಶ್ವರ ರಥೋತ್ಸವ ನಡೆಯುತ್ತದೆ. ಈಗ ರಥ ಸುಟ್ಟು ಹೋಗಿರುವುದರಿಂದ ಇದನ್ನೇ ದುರಸ್ತಿ ಪಡಿಸಿ ರಥೋತ್ಸವ ನಡೆಸಬಾರದು. ಅದು ಶುಭಕರವಲ್ಲ. ಹಾಗಾಗಿ ಹೊಸ ರಥವನ್ನೇ ನಿರ್ಮಿಸಬೇಕೆಂದು ದೇವಸ್ಥಾನದ
ಸರ್ವಕೋಮಿನ ಸಮಿತಿ ಒತ್ತಾಯಿಸಿದೆ. ಘಟನೆ ಖಂಡಿಸಿ ಸೋಮವಾರ ಪಟ್ಟಣ ಬಂದ್‌ಗೆ ಕರೆ ನೀಡಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next