Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರೋಪಿಯನ್ನು ರಾಜ್ಯ ಸರ್ಕಾರ ಆರೋಪಿ ಸ್ಥಾನದಲ್ಲಿಯೇ ನೋಡಲಿದೆ. ಆತನಿಗೂ, ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ನಮ್ಮ ಸರ್ಕಾರ ಆಗಿದ್ದಕ್ಕೆ ಅವನನ್ನು ಬಂಧಿಸಿದೆ. ಬೇರೆ ಸರ್ಕಾರ ಇದ್ದಿದ್ದರೆ ಅವನನ್ನು ಮುಗ್ಧನ ಸ್ಥಾನದಲ್ಲಿ ಕೂರಿಸುತ್ತಿದ್ದರು ಎಂದರು.
Related Articles
Advertisement
ಇದೊಂದು ಭದ್ರತಾ ವೈಫಲ್ಯವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದನ್ನು ಭದ್ರತಾ ವೈಫಲ್ಯ ಅಂತ ಹೇಳಲು ಆಗುವುದಿಲ್ಲ. ಪ್ರತಿ ವ್ಯಕ್ತಿಗೂ ಪೊಲೀಸರನ್ನು ಕೊಡುವುದು ಸುಲಭವಲ್ಲ. ಅನೇಕ ವಿದ್ವಂಸಕ ಕೃತ್ಯಗಳಲ್ಲಿ ನೆರೆಯ ಕೇರಳ ರಾಜ್ಯದವರು ಭಾಗಿಯಾಗಿದ್ದಾರೆಂಬ ಶಂಕೆ ಖಚಿತವಾಗಿ ಇದ್ದು, ಈ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ ಎಂದು ಹೇಳಿದರು.
ಮುಸ್ಲಿಮನಾಗಿದ್ದರೆ ಬಿಜೆಪಿ ವರ್ತನೆ ಬೇರೆಯಾಗುತ್ತಿತ್ತುಬೆಂಗಳೂರು: ಮಂಗಳೂರು ಬಾಂಬ್ ಸ್ಫೋಟ ಪ್ರಕರಣದ ಆರೋಪಿ ರಾವ್ ಅಲ್ಲದೇ ಬೇರೆ ಯಾರಾದರೂ ಆಗಿದಿದ್ದರೆ ಬಿಜೆಪಿ ನಾಯ ಕರ ವರ್ತನೆಯೇ ಬೇರೆಯಾಗಿರುತ್ತಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ. ಬುಧವಾರ ಸುದ್ದಿಗಾರ ರೊಂದಿಗೆ ಮಾತನಾಡಿ,ಆರೋಪಿ ಆದಿತ್ಯರಾವ್ ಹಿಂದೆಯೂ ಕೆಲವು ಘಟನೆ ಗಳಲ್ಲಿ ಭಾಗಿಯಾಗಿದ್ದರಂತೆ. ಆತನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪೊಲೀಸರು ಕಲೆ ಹಾಕಬೇಕಿದೆ. ಆದಿತ್ಯರಾವ್ ಬಂಧನದ ಸುದ್ದಿ ಬಿಜೆಪಿಯವರಿಗೆ ಸಂತೋಷ ತಂದಿರಲಿಕ್ಕಿಲ್ಲ ಎಂದರು. ಆದಿತ್ಯರಾವ್ ಜಾಗದಲ್ಲಿ ಬೇರೆಯ ವರಿದ್ದರೆ ಬಿಜಿಪಿ ನಾಯಕರ ಅಭಿಪ್ರಾಯಗಳೇ ಬೇರೆಯಾಗಿರುತ್ತಿತ್ತು. ಈಗ ರಾವ್ ಇರುವುದರಿಂದ ಬಿಜೆಪಿ ನಾಯಕರಿಂದ ಯಾವ ಹೇಳಿಕೆಯೂ ಹೊರ ಬೀಳುವುದಿಲ್ಲ. ಆರೋಪಿ ತಾನಾಗಿಯೇ ಬಂದು ಪೊಲೀಸರಿಗೆ ಶರಣಾಗಿರುವ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಸಾಹಿತಿ ಎಂ.ಎಂ. ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಪಾತ್ರವಿದೆ ಎನ್ನುವುದು ಪತ್ತೆಯಾಗಿದೆ. ಬಿಜೆಪಿಯವರು ಅವರನ್ನು ಸಮರ್ಥನೆ ಮಾಡಿಕೊಂಡಿದ್ದರು. ಈಗ ಗೊತ್ತಿದ್ದರೂ ಏನೂ ಆಗಿಲ್ಲದಂತೆ ಸುಮ್ಮನಿದ್ದಾರೆ. ಆದರೆ, ಮುಸ್ಲಿಮರಿದ್ದರೆ ದೊಡ್ಡ ರಂಪಾಟ ಮಾಡುತ್ತಿದ್ದರು ಎಂದರು.