Advertisement

ಗೈರಾದ ಅಧಿಕಾರಿಗಳ ಮನವೊಲಿಸಿ ಸಭೆಗೆ ಕರೆಸಿದ್ರು

06:02 PM Sep 16, 2017 | |

ಶಿಕಾರಿಪುರ: ತಾಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಾದ ಹಿನ್ನೆಲೆಯಲ್ಲಿ ಸಾಮಾನ್ಯ ಸಭೆ ಬಹಿಷ್ಕರಿಸಿ ಹೊರನಡೆದ ತಾಪಂ ಸದಸ್ಯರಾದ ಸುರೇಶ್‌ ನಾಯ್ಕ, ಶಂಭು, ಕವುಲಿ ಸುಬ್ರಮಣ್ಣ , ಜಯಣ್ಣ ಅವರನ್ನು ತಾಪಂ ಅಧ್ಯಕ್ಷ ಪರಮೇಶ್ವರಪ್ಪ ಮನವೊಲಿಸಿ ಸಭೆಗೆ ಕರೆತಂದ ಘಟನೆ ನಡೆಯಿತು.

Advertisement

ತಾಲೂಕು ಆಸ್ವತ್ರೆಯಲ್ಲಿ ವೈದ್ಯರು ರೋಗಿಗಳನ್ನು ಸರಿಯಾಗಿ ಗಮನಿಸುತ್ತಿಲ್ಲ ಹೊರಗಡೆ ಔಷಧಿಗೆ ಚೀಟಿ ಬರೆದು ಕೊಡುತ್ತಿದ್ದು ಜೊತೆಗೆ ಸಿಬ್ಬಂದಿಯವರು ರೋಗಿಗಳ ಬಳಿ ಸರಿಯಾಗಿ ವರ್ತಿಸುತ್ತಿಲ್ಲ. ಕಳೆದ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಿದರೂ ಈ ಪ್ರಕ್ರಿಯೆ ಇನ್ನೂ ನಿಂತಿಲ್ಲ ಎಂದು ತಾಪಂ ಸದಸ್ಯ ಸುರೇಶ್‌ ನಾಯ್ಕ ಆರೋಪಿಸಿದರು.

ತಾಪಂ ಸಂಭಾಗಣದಲ್ಲಿ ನಡೆದ ತಾಪಂ ಸಮಾನ್ಯ ಸಭೆಯಲ್ಲಿ ತಾಲೂಕಿನ ಜೋಗಿಹಳ್ಳಿ ಗ್ರಾಮದ ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಸಿಬ್ಬಂದಿ ಕೊರತೆ ಇದೆ ಎಂದು ಆಪಾದಿಸಿದ ಅವರು ಗರ್ಭಿಣಿಯರು ಹಾಗೂ ರೋಗಿಗಳು ತುರ್ತು ಚಿಕಿತ್ಸೆಗೆ 108 ಸರ್ಕಾರದ ವಾಹನದ ಸೌಲಭ್ಯ ದೊರಕದೆ ಖಾಸಗಿ ವ್ಯಕ್ತಿಗಳ ವಾಹನಕ್ಕೆ ಮೊರೆ ಹೋಗುವಂತಾಗಿದೆ. ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅವರ ಮಾತಿಗೆ ಧ್ವನಿಗೂಡಿಸಿದ ಇನ್ನೋರ್ವ ಸದಸ್ಯ ಜಯಣ್ಣ ಸಾಮಾನ್ಯವಾಗಿ ತಾಲೂಕಿನ ಹಲವು ಆಸ್ಪತ್ರೆಯಲ್ಲಿ ಈ ರೀತಿ ಪಕ್ರಿಯೆ ಕಂಡುಬರುತ್ತಿದ್ದು ಸಿಬ್ಬಂದಿ ಹಾಗೂ ವೈದ್ಯರು ಬಡರೋಗಿಗಳಿಗೆ ಸ್ಪಂದಿಸಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ವೈದ್ಯಾಧಿಕಾರಿ  ಡಾ| ಶ್ರೀನಿವಾಸ ಯಾವುದೇ ರೋಗಿಗಳಿಗೆ ಹೊರಗಿನಿಂದ ಔಷಧಿ ತರಲು ಯಾವುದೇ ರೀತಿ ಚೀಟಿ ಕೊಡುವುದಿಲ್ಲ. ನಮ್ಮ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನರಿಕ್‌ ಔಷಧಿ ಬಂದ ಮೇಲೆ
ಸಾಮಾನ್ಯ ಜನರಿಗೆ ತುಂಬಾ ಸಹಕಾರಿಯಾಗಿದ್ದು ಕೇವಲ 220 ಬಗೆಯ ಔಷಧಿ ಲಭ್ಯವಿದೆ. ಆದರೆ ಇನ್ನೂ ಪೂರ್ಣ ಪ್ರಮಾಣದ ಜನರಿಕ್‌ ಔಷಧಿ ಲಭ್ಯವಾಗಿಲ್ಲ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದರು.

ಸರ್ಕಾರಿ ಇಲಾಖೆಗೆ ಸೀಮಿತವಾಗಿರುವ ಅಂಜನಾಪುರ ಮೀನು ಮರಿ ಸಾಕಣೆ ಕೊಳದಲ್ಲಿ ಮೀನುಗಾರಿಕೆ ಇಲಾಖೆಯಿಂದ ಖಾಸಗಿ ವ್ಯಕ್ತಿಗಳಿಗೆ ಮೀನಿನ ಮರಿ ಸಾಕಲು ಏಕೆ ಆಸ್ಪದ ನೀಡಿದ್ದೀರಾ? ಎಂದು ಪ್ರಶ್ನೆಸಿದ ತಾಪಂ ಸದಸ್ಯರಾದ ಸುರೇಶ್‌ ಅವರನ್ನು ಬೆಂಬಲಿಸಿದ ಶಂಭು ಇದರಿಂದ ಇಲಾಖೆಗೆ ಲಕ್ಷಂತರ ರೂ. ನಷ್ಟವಾಗಿದೆ. ಇದಕ್ಕೆ ಇಲಾಖೆ ಅಧಿಕಾರಿಗಳು ಸಮಜಾಯಿಶಿ ನೀಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾಪಂ ಅಧ್ಯಕ್ಷ ಪರಮೇಶ್ವರಪ್ಪ ಅಧಿಕಾರಿಗಳು ಬೇಜವಾಬ್ದಾರಿಯಿಂದ ನಡೆದು ಕೊಳ್ಳಬಾರದು. ಫಲಾನುಭವಿಗಳಿಗೆ ಸಕಾರದ ಸೌಲಭ್ಯಗಳು ಸಿಗಬೇಕು. ಈ ಬಗ್ಗೆ ಮುಂದಿನ ದಿನಗಳಲ್ಲಿ ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಮೀನುಗಾರಿಕೆ ಸಹಾಯಕ ನಿರ್ದೇಶಕರಿಗೆ ತಿಳಿಸಿದರು.

Advertisement

ಬರಗಾಲದ ಬಗ್ಗೆ ಪ್ರಸ್ತಾಪಿಸಿದ ಸದಸ್ಯರಿಗೆ ಕೃಷಿ ಇಲಾಕೆಯ ಸಹಾಯಕ ನಿರ್ದೇಶಕ  ಡಾ| ಪ್ರಭಾಕರ್‌ ಉತ್ತರಿಸಿ, ಕಳೆದ ವರ್ಷಕ್ಕಿಂದ ಈ ಬಾರಿ ಶೇ. 20ಮಳೆ ಕಡಿಮೆ ಇದೆ. ಹಿಂಗಾರು ಮಳೆ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಪ್ರಾರಂಭವಾಗಿದ್ದು ಅದು ಕೂಡ ಶೇ. 27 ರಷ್ಟು ಕೊರತೆ ಇದೆ. ರೈತರು ಭತ್ತದ ಹೊರತಾಗಿ ಪಯಾಯ ಬೆಳೆಗೆ ಗಮನ ಹರಿಸಬೇಕು. ಕಳೆದ ಬಾರಿಗಿಂತ ಈ ಬಾರಿ ಅತೀ ಹೆಚ್ಚು ಪ್ರಮಾಣದಲ್ಲಿ ಮೆಕ್ಕೆ ಜೋಳ ಬೆಳೆಯಲಾಗುತ್ತಿದ್ದು ಭತ್ತದ ಪ್ರಮಾಣ ಕಡಿಮೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಲ್ಲಿ ಭಾರೀ ಮಳೆಯಿಂದ ಅಪಾರ ಪ್ರಮಾಣದ ಮೆಕ್ಕೆಜೋಳ ನಾಶವಾಗಿದೆ. ಲಕ್ಷಂತರ ರೂ. ಮೌಲ್ಯದ ಅಡಿಕೆ,ಬಾಳೆ, ತೆಂಗು ಕೂಡ ಹಾಳಾಗಿದೆ ಎಂದರು.

ತಾಪಂ ಇಒ ಆನಂದಕುಮಾರ, ಉಪಾಧ್ಯಕ್ಷೆ ರೂಪಾ, ಸದಸ್ಯರಾದ ಗೀತಾ ವಿಜಯಲಕ್ಷ್ಮೀ, ಶಿಲ್ಪಾ, ಪ್ರಕಾಶ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next