Advertisement
ಇದರಲ್ಲಿ ಪ್ರಮುಖವಾದುದೆಂದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಅತೀ ಕಿರಿಯ ಆಟಗಾರನೆಂಬ ದಾಖಲೆ ಸ್ವಲ್ಪದರಲ್ಲೇ ಕೈತಪ್ಪಿದ್ದು.
‘ಆಗಷ್ಟೇ ಪಾಕಿಸ್ಥಾನ ಪ್ರವಾಸ ಮುಗಿಸಿದ ತೆಂಡುಲ್ಕರ್ ನ್ಯೂಜಿಲ್ಯಾಂಡಿಗೆ ಆಗಮಿಸಿದ್ದರು. ಈ ಹುಡುಗನ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಅಭ್ಯಾಸ ತಂಡದ ನಾಯಕ ಕೆನ್ ರುದರ್‌ಫೋರ್ಡ್ ಎಚ್ಚರಿಸಿದ್ದರು.
ನನಗೂ 16ರ ಹರೆಯದ ಸಚಿನ್ ಬಗ್ಗೆ ಕುತೂಹಲ ಮೂಡಿತ್ತು. ಆವರು ರಿಚರ್ಡ್ ಹ್ಯಾಡ್ಲಿ ಎಸೆತಗಳನ್ನೂ ದಿಟ್ಟ ರೀತಿಯಲ್ಲಿ ನಿಭಾಯಿಸುತ್ತಿದ್ದರು…’ ಎಂದು ಮಾರಿಸನ್ 1990ರ ಘಟನೆಯನ್ನು ಮೆಲುಕು ಹಾಕಿದ್ದಾರೆ.
Related Articles
ಪ್ರಥಮ ಪಂದ್ಯದಲ್ಲಿ ಸೊನ್ನೆ ಮತ್ತು 24 ರನ್ ಮಾಡಿದ ಸಚಿನ್, ನೇಪಿಯರ್‌ನ ದ್ವಿತೀಯ ಟೆಸ್ಟ್‌ನಲ್ಲಿ ಶತಕದತ್ತ ದೌಡಾಯಿಸಿದ್ದರು. ಇದನ್ನು ಸಾಧಿಸಿದ್ದೇ ಆದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ವಿಶ್ವದ ಅತೀ ಕಿರಿಯ ಆಟಗಾರನೆಂಬ ವಿಶ್ವ ದಾಖಲೆ ನಿರ್ಮಾಣಗೊಳ್ಳುತ್ತಿತ್ತು. 1961ರಷ್ಟು ಹಿಂದೆ ಪಾಕಿಸ್ಥಾನದ ಮುಷ್ತಾಕ್ ಮೊಹಮ್ಮದ್ 17 ವರ್ಷ, 78ನೇ ದಿನದಲ್ಲಿ ಬಾರಿಸಿದ ಶತಕದ ದಾಖಲೆ ಪತನಗೊಳ್ಳುತ್ತಿತ್ತು.
Advertisement
88ಕ್ಕೆ ಕೊನೆಗೊಂಡ ಆಟ’88 ರನ್ ಮಾಡಿ ಆಡುತ್ತಿದ್ದ ತೆಂಡುಲ್ಕರ್‌ಗೆ ನಾನು ಬೌಲಿಂಗ್ ಮಾಡಲಿಳಿದಿದ್ದೆ. ನನಗೆ 3 ಬೌಂಡರಿಗಳ ರುಚಿ ತೋರಿಸಿ ಶತಕ ಪೂರ್ತಿ ಮಾಡುತ್ತಾರೇನೋ ಎಂಬ ಆತಂಕ ಮನೆಮಾಡಿತ್ತು. ಆದರೆ ಅದೇ ಮೊತ್ತಕ್ಕೆ ನಾನು ಅವರ ವಿಕೆಟ್ ಹಾರಿಸಿದೆ. ಮಿಡ್ ಆಫ್ನಲ್ಲಿದ್ದ ಜಾನ್ ರೈಟ್ ಕ್ಯಾಚ್ ಪಡೆದಿದ್ದರು. ನಾನೊಂದು ದೊಡ್ಡ ಸಾಹಸ ಮಾಡಿದ್ದೆ’ ಎಂದು ಮಾರಿಸನ್ ಖುಷಿಯಿಂದ ಹೇಳಿದರು.