Advertisement
ಮೊದಲ ಸಲ ರಣಜಿ ಸೆಮಿಫೈನಲ್ ಕಾಣುತ್ತಿರುವ ಝಾರ್ಖಂಡ್‌ಗೆ ಗುಜರಾತ್ ದಾಳಿಯನ್ನು ಎದುರಿಸಿ ನಿಲ್ಲಲು ಈವರೆಗೆ ಸಾಧ್ಯವಾಗಿಲ್ಲ. ಸೌರಭ್ ತಿವಾರಿ ಪಡೆ 5 ವಿಕೆಟ್ ನಷ್ಟಕ್ಕೆ 214 ರನ್ ಮಾಡಿ ಸೋಮವಾರದ ಆಟ ಮುಗಿಸಿದೆ. ಇನ್ನೂ 176 ರನ್ನುಗಳ ಹಿನ್ನಡೆಯಲ್ಲಿದೆ.
Related Articles
Advertisement
ಜಾರತೊಡಗಿದ ಝಾರ್ಖಂಡ್ಜವಾಬು ನೀಡತೊಡಗಿದ ಝಾರ್ಖಂಡ್ ಮೊದಲ ಓವರಿನಿಂದಲೇ ಜಾರತೊಡಗಿತು. ಆರಂಭಕಾರ ಸುಮಿತ್ ಕುಮಾರ್ (2) ಅವರನ್ನು ಆರ್‌ಪಿ ಸಿಂಗ್ ವಾಪಸ್ ಕಳುಹಿಸಿದರು. ಬಳಿಕ ಪ್ರತ್ಯೂಷ್ ಸಿಂಗ್ (27) ಮತ್ತು ವಿರಾಟ್ ಸಿಂಗ್ (34) ಸಣ್ಣ ಮಟ್ಟದ ಹೋರಾಟ ಸಂಘಟಿಸಿ 45 ರನ್ ಒಟ್ಟುಗೂಡಿಸಿದರು. ಆದರೆ ಹಂತ ಹಂತವಾಗಿ ವಿಕೆಟ್ ಕೀಳುತ್ತಲೇ ಹೋದ ಗುಜರಾತ್ ಮೇಲುಗೈ ಸೂಚನೆ ನೀಡಿತು. ಸ್ಕೋರ್ 121 ರನ್ ಆಗುವಷ್ಟರಲ್ಲಿ ನಾಯಕ ಸೌರಭ್ ತಿವಾರಿ ಸಹಿತ 4 ವಿಕೆಟ್ ಉದುರಿಸಿಕೊಂಡ ಝಾರ್ಖಂಡ್ ತೀವ್ರ ಒತ್ತಡಕ್ಕೆ ಸಿಲುಕಿತು. ಈ ಹಂತದಲ್ಲಿ ಜತೆಗೂಡಿದ ಇಶಾಂಕ್ ಜಗ್ಗಿ ಮತ್ತು ಇಶಾನ್ ಕಿಶನ್ 5ನೇ ವಿಕೆಟಿಗೆ 92 ರನ್ ಪೇರಿಸಿ ತಂಡಕ್ಕೆ ಆಸರೆಯಾದರು. ಕಿಶನ್ ಆಟವಂತೂ ಅತ್ಯಂತ ಆಕ್ರಮಣಕಾರಿ ಯಾಗಿತ್ತು. 59 ಎಸೆತಗಳಿಂದ, 9 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 61 ರನ್ ಸಿಡಿಸಿದರು. ದಿನದಾಟದ ಮುಕ್ತಾಯಕ್ಕೆ ಕೇವಲ ಒಂದು ಓವರ್ ಇರುವಾಗ ಕಿಶನ್ ವಿಕೆಟ್ ಹಾರಿಸಿದ ಆರ್‌ಪಿ ಸಿಂಗ್ ಗುಜರಾತ್‌ಗೆ
ಮೇಲುಗೈ ಒದಗಿಸಿದ್ದಾರೆ. ಸಂಕ್ಷಿಪ್ತ ಸ್ಕೋರ್: ಗುಜರಾತ್-390 (ಪಾಂಚಾಲ್ 149, ಪಾರ್ಥಿವ್ 62, ಆರ್‌ಪಿ ಸಿಂಗ್ 40, ಯಾದವ್ 67ಕ್ಕೆ 3, ಶುಕ್ಲಾ 71ಕ್ಕೆ 3, ವಿಕಾಶ್ 59ಕ್ಕೆ 2). ಝಾರ್ಖಂಡ್-5 ವಿಕೆಟಿಗೆ 214 (ಕಿಶನ್ 61, ಜಗ್ಗಿ ಬ್ಯಾಟಿಂಗ್ 40, ತಿವಾರಿ 39, ಆರ್‌ಪಿ ಸಿಂಗ್ 48ಕ್ಕೆ 3).