Advertisement

ಸಾವಿಗೆ ಸವಾಲೊಡ್ಡಿದ ಯೋಗ ತಪಸ್ವಿ

01:11 PM Jun 21, 2019 | Suhan S |

ಹಾಸನ: ಯೋಗ ಶಿಕ್ಷಕ ಎಚ್.ಬಿ.ರಮೇಶ್‌ ಅವರು ಕಳೆದ 6 ವರ್ಷಗಳಿಂದ ವ್ಯಾಯಾಮ ಶಿಕ್ಷಕರಾಗಿ, 5 ದಶಕಗ‌ಳಿಂದ ಯೋಗ ಶಿಕ್ಷಕರಾಗಿಯೂ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಯೋಗದ ಮಹತ್ವ ಸಾರುತ್ತಾ 800ಕ್ಕೂ ಹೆಚ್ಚು ಯೋಗ ಶಿಬಿರಗಳನ್ನು ನಡೆಸಿಕೊಂಡು ಬಂದಿರುವ ಅವರು ಯೋಗದಿಂದಲೇ ಆಯಸ್ಸು ವೃದ್ಧಿಸಿಕೊಂಡಿದ್ದಾರೆ.

Advertisement

ಯೋಗದಿಂದ ದೂರಾದ ರೋಗ: 3 ವರ್ಷಗಳ ಹಿಂದೆ ನೀರು ಹಾಗೂ ಆಹಾರದ ವ್ಯತ್ಯಾಸದಿಂದಾಗಿ ಶ್ವಾಸಕೋಶ ಹಾಗೂ ಹೃದ ಯದ ಸಮಸ್ಯೆಗೀಡಾಗಿ ತೀವ್ರ ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದಿದ್ದರು. ಆದರೆ ಯೋಗದ ಸಾಮರ್ಥ್ಯದಿಂದಾಗಿ ಮೃತ್ಯು ಬಾಗಿಲನ್ನು ಬಡಿದು ಬಂದಿರುವ ಅವರು ಮತ್ತೆ ಯೋಗ ಶಿಬಿರ ಗಳನ್ನು ಮುಂದುವರಿಸಿದ್ದಾರೆ. ಆವರ ಮನೋ ಸಾಮರ್ಥ್ಯವನ್ನು ಸ್ವತಃ ವೈದ್ಯರೇ ಅಚ್ಚರಿಪಟ್ಟಿದ್ದಾರೆ. ಅವರ ಆರೋಗ್ಯ ಸುಧಾರಣೆ ವಿಷಯ ಕೇಳಿದ ಹಲವರು ಈಗ ಅವರ ಬಳಿ ಯೋಗಾಭ್ಯಾಸ ಆರಂಭಿಸಿದ್ದಾರೆ.

ಬಹುಮುಖ ಪ್ರತಿಭೆ: 86 ವರ್ಷ ವಯಸ್ಸಿನ ಎಚ್.ಬಿ. ರಮೇಶ್‌ ಅವರು 1942ರಲ್ಲಿ ರಂಗಭೂಮಿ ನಟನಾಗಿ, 1947 ರಲ್ಲಿ ಮೈಸೂರು ಚಲೋ ಸ್ವಾತಂತ್ರ್ಯ ಚಳುವಳಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಿ, 1951ರಲ್ಲಿ ವ್ಯಾಯಾಮ ಶಿಕ್ಷಕರಾಗಿ, 1974 ರಿಂದ ಇಂದಿನವರೆಗೆ ಯೋಗ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಹಾಸನವು ಸೇರಿ 800ಕ್ಕೂ ಹೆಚ್ಚು ಯೋಗ ಶಿಕ್ಷಣ ಶಿಬಿರವನ್ನು ಶಾಲೆ ಕಾಲೇಜುಗಳಲ್ಲಿ 536 ಪ್ರಾತ್ಯಕ್ಷಿಕೆ ಪ್ರದರ್ಶನಗಳನ್ನು ಉಚಿತವಾಗಿ ನೀಡಿರುವುದಲ್ಲದೆ 18 ನಾಟಕ, 6 ರೇಡಿಯೋ ನಾಟಕ ಹಾಗೂ ಇತರೆ ಸಾಮಾಜಿಕ ಕಳಕಳಿಯ 30 ಕೃತಿಗಳನ್ನು ರಚಿಸಿದ್ದಾರೆ.

ಯೋಗಾಭ್ಯಾಸ ದಿವ್ಯೌಷಧಿ: ಪಾಶ್ಚಾತ್ಯರನ್ನು ಅನು ಕರಿಸಿಕೊಂಡು ಹೋಗುತ್ತಿರುವ ಇಂದಿನ ಧಾವಂತದ ಬದುಕಿನಲ್ಲಿ ಜರ್ಝರಿತಗೊಳ್ಳುತ್ತಿರುವ ಮನಸ್ಸು ಮತ್ತು ದೇಹಗಳಿಗೆ ಯೋಗಾಭ್ಯಾಸವೊಂದು ದಿವ್ಯ ಔಷಧಿಯೇ ಸರಿ. ಈ ನಿಟ್ಟಿನಲ್ಲಿ ಹಾಸನದ ಮಹಾ ರಾಜ ಉದ್ಯಾನವನದಲ್ಲಿ ವಿವೇಕಾನಂದ ಯೋಗ ಶಾಲೆ ತೆರೆದು ಉಚಿತ ಯೋಗಶಿಕ್ಷಣ ಶಾಲೆಯ ಸೇವೆಯ ಅವರ ನಿಸ್ವಾರ್ಥ ಸೇವೆ ಮಹತ್ವಪೂರ್ಣ ದ್ದಾಗಿದೆ. ಹಾಸನ ನಗರಸಭೆಯ ಸಹಕಾರದಿಂದ ಎರಡು ದಶಕಗಳ ಹಿಂದೆ ಆರಂಭಗೊಂಡ ಈ ಯೋಗಶಾಲೆ ಸಾವಿರಾರು ಮಂದಿಗೆ ಯೋಗ ಶಿಕ್ಷಣ ನೀಡಿರುವುದಲ್ಲದೇ , ಅಸ್ತಮಾ, ಸೈನಸ್‌, ತಲೆ ನೋವಿನಂತಹ ತೀವ್ರತರ ವ್ಯಾಧಿಗಳಿಂದ ಬಳಸುತ್ತಿÃ‌ುವವರಿಗೆ ಅವುಗಳಿಂದ ಮುಕ್ತಿ ನೀಡಿದೆ. ಮುಂಜಾನೆ ಐದರಿಂದ ಏಳೂವರೆಯ ತನಕ ಇಲ್ಲಿ ಉಚಿತ ಯೋಗಾಭ್ಯಾಸ ತರಬೇತಿಗಳು ನಡೆಯು ತ್ತಿವೆ. ಅಲ್ಲಿ ಪ್ರತಿದಿನ ನಡೆಯುವ ಯೋಗ ತರಬೇತಿ ಮತ್ತು ಯೋಗ ಶಿಕ್ಷಕ ಎಚ್.ಬಿ.ರಮೇಶ್‌ ಅವರ ಆತ್ಮಸ್ಥೈರ್ಯ ಯೋಗಾಭ್ಯಾಸಿಗಳಿಗೆ ಮಾರ್ಗದರ್ಶಕವಾಗಿದೆ ಎಂದು ಯೋಗಾಭ್ಯಾಸಿಯೂ ಆಗಿರುವ ಉಪನ್ಯಾಸಕ ಗೊರೂರು ಶಿವೇಶ್‌ ಅವರು ಪ್ರಂಶಂಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next