ಶನಿವಾರ ಸುದ್ದಿಗಾರರ ಜತೆ ಮಾತ ನಾಡಿದ ಅವರು, ಹಿಂದೆ ಈ ಪಕ್ಷ ಗಳು ಸಮ್ಮಿಶ್ರ ಸರಕಾರ ರಚಿಸಿದ್ದವು. ಅಧಿಕಾರ ಹಸ್ತಾಂತರಿಸದ ಕುಮಾರಸ್ವಾಮಿ ವಚನ ಭ್ರಷ್ಟರು ಎಂದು ಆರೋಪಿಸಿ ಅವರ ಮೇಲೆ ಯಡಿಯೂರಪ್ಪ ದ್ವೇಷ ಸಾಧಿ ಸಲು ಹೊರಟ್ಟಿದ್ದರು.
Advertisement
ಆದರೆ ಕುಮಾರಣ್ಣ ಭ್ರಷ್ಟಾಚಾರ ಸುಳಿಯಲ್ಲಿ ಬಿಎಸ್‌ವೈ ಅವರನ್ನೇ ಸಿಲುಕಿಸಿ ಜೈಲಿಗೆ ಕಳಿಸಿದ್ದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ವ್ಯಂಗ್ಯವಾಡಿದರು. ಆದರೆ ಅ ಧಿಕಾರ ಇದ್ದರೆ ಮಾತ್ರ ಬದುಕುತ್ತೇವೆ ಎಂಬ ಮನೋಭಾವದಿಂದ ಬಿಜೆಪಿ-ಜೆಡಿಎಸ್ ಇಂದು ಮತ್ತೆ ಒಂದಾಗುತ್ತಿವೆ. ಇವರನ್ನು ನೋಡಿ ಜನರು ನಗುತ್ತಿದ್ದಾರೆ. ಅಧಿಕಾರಕ್ಕೋಸ್ಕರ ಯಾರ್ಯಾರು ಏನೇನೋ ಮಾಡಲು ಹೊರಟಿದ್ದಾರೆ ಎಂದು ಜನರು ಕಟ್ಟೆ ಮೇಲೆ ಕುಳಿತು ಮಾತನಾಡುತ್ತಿದ್ದಾರೆ ಎಂದು ಹೇಳಿದರು.