Advertisement

ಎಚ್‌ಡಿಕೆ ರಾಜೀನಾಮೆ ನೀಡುವುದೇ ಒಳಿತು

02:20 AM Jul 19, 2019 | Sriram |

ಧಾರವಾಡ: ‘ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಇಲ್ಲದಿದ್ದರೆ ಸಿಎಂ ಕುಮಾರಸ್ವಾಮಿ ಗೌರವದಿಂದ ರಾಜೀನಾಮೆ ನೀಡು ವುದೇ ಒಳಿತು’ ಎಂದು ಸಮಾಜ ಪರಿವರ್ತನ ಸಮುದಾಯ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ ಹೇಳಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಹಣ ಹಾಗೂ ಅಧಿಕಾರದ ಅಮಲಿನಲ್ಲಿ ರಾಜ್ಯ ರಾಜಕಾರಣದಲ್ಲಿ ದೊಂಬರಾಟ ನಡೆಯುತ್ತಿದೆ. ಹಣ-ಅಧಿಕಾರಕ್ಕಾಗಿ ಶಾಸಕರು ರಾಜೀನಾಮೆ ನೀಡಿದ್ದರೆ, ಅಧಿಕಾರ ಉಳಿಸಿಕೊಳ್ಳಲು ಸಿಎಂ ತಂತ್ರ ಹೂಡಿದ್ದಾರೆ. ಇನ್ನು ವಿರೋಧ ಪಕ್ಷದಲ್ಲಿ ಕುಳಿತವರು ಆಪರೇಷನ್‌ ಕಮಲ ಮಾಡುತ್ತಿದ್ದಾರೆ. ಇದು ರಾಜಕೀಯ ಬಿಕ್ಕಟ್ಟು ಅಲ್ಲ, ಸಂವಿಧಾನದ ಬಿಕ್ಕಟ್ಟು. ಇದಕ್ಕೆ ಕಾರಣರಾದ ಶಾಸಕರಿಗೆ ತಕ್ಕ ಕ್ರಮ ಆಗಬೇಕು. ರಾಜೀನಾಮೆ ನೀಡಿದವರು 6 ವರ್ಷಗಳ ಕಾಲ ಯಾವುದೇ ಚುನಾವಣೆಗೂ ನಿಲ್ಲಬಾರದು. ಯಾವುದೇ ಅಧಿಕಾರದ ಸ್ಥಾನ ಹೊಂದಬಾರದು ಎಂಬ ನಿಯಮವಿದ್ದು, ಇದು ಜಾರಿಯಾಗಬೇಕು’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next