Advertisement
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸಂವಾದ ನಡೆಸಿ, ನಾನು ಜೆಡಿಎಸ್‌ನಲ್ಲಿದ್ದಾಗ ಪಕ್ಷ ಸಂಘಟಿಸಿದ್ದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾರ್ಯಕ್ರಮ ವೇದಿಕೆ ನಿರ್ಮಾಣ, ಶಾಮಿಯಾನ ಹಾಕುವುದು, ಬಂಟಿಂಗ್ ಕಟ್ಟುವುದು, ಕಾರ್ಯಕರ್ತರನ್ನು ಸೇರಿಸುವ ಕೆಲಸವನ್ನು ನಾವು ಮಾಡುತ್ತಿದ್ದೆವು. ಅವರು ಕಾರ್ಯಕ್ರಮಕ್ಕೆ ಬಂದು ಭಾಷಣ ಬಿಗಿಯುತ್ತಿದ್ದರು. ಅದೇ ಅವರು ಪಕ್ಷ ಸಂಘಟಿಸಿದ ಪರಿ. ಒಮ್ಮೆ ಪಕ್ಷದ ಕಾರ್ಯಕ್ರಮವೊಂದರ ಬ್ಯಾನರ್‌ನಲ್ಲಿ ಅವರ ಫೋಟೊ ಇಲ್ಲದ್ದಕ್ಕೆ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಬಳಿಕ ಕೆ. ವೆಂಕಟೇಶ್ ಅವರನ್ನು ಸಂಧಾನಕ್ಕೆ ದೊಡ್ಡಗೌಡರು ಕಳುಹಿಸಿಕೊಟ್ಟಿದ್ದರು. ಇಂಥ ವ್ಯಕ್ತಿ ಮುಖ್ಯಮಂತ್ರಿ ಸ್ಥಾನವನ್ನು ಬೇರೊಬ್ಬರಿಗೆ ಬಿಟ್ಟುಕೊಡುತ್ತಾರ ಎಂದು ಪ್ರಶ್ನಿಸಿದರು.
Related Articles
Advertisement
ನಾನು ಇತ್ತೀಚೆಗೆ ಆರೆಸ್ಸೆಸ್ ಬಗ್ಗೆ ಮಾತನಾಡಿದ್ದನ್ನೇ ದೊಡ್ಡದು ಮಾಡಿದರು. ಆದರೆ ಅವರ ಪಕ್ಷದ ಪ್ರಧಾನಿಗಳೇ ಜಮ್ಮ ಕಾಶ್ಮೀರದಲ್ಲಿ ನೇಮಿಸಿರುವ ರಾಜ್ಯಪಾಲರು ಯಾವುದೋ ಅರ್ಜಿ ವಿಲೇವಾರಿಗೆ 300 ಕೋಟಿ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಇದು ಅವರ ಸಿದ್ಧಾಂತವೇ? ದೇಶದಲ್ಲಿ ಹಿಂದುತ್ವ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಹಿಂದುತ್ವ ಈ ದೇಶದ ಬ್ರಾಂಡ್.– ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ