Advertisement

ಅಂಚೆ ಮತಪತ್ರ ಪಡೆದ ಎಚ್ಡಿಕೆ PA: ವೀಡಿಯೋ ವೈರಲ್‌

11:38 PM May 04, 2023 | Team Udayavani |

ರಾಮನಗರ: ಚುನಾವಣ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸರಕಾರಿ ನೌಕರನಿಂದ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಆಪ್ತ ಸಹಾಯಕ ಕೆಂಚೇಗೌಡ ಅವರು ಅಂಚೆ ಮತಪತ್ರ ಪಡೆದು ಗುರುತು ಮಾಡುತ್ತಿದ್ದಾರೆ ಎನ್ನಲಾದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಬಿಜೆಪಿ ಚುನಾವಣಾಧಿಕಾರಿಗೆ ದೂರು ನೀಡಿದೆ.

Advertisement

ಬುಧವಾರ ಅಂಚೆ ಮತಪತ್ರಕ್ಕೆ ಸಂಬಂಧಿಸಿದಂತೆ ಚನ್ನಪಟ್ಟಣ ತಾಲೂಕು ಕಚೇರಿ ಎದುರು ಜೆಡಿಎಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿತ್ತು. ಈ ಬೆನ್ನಲ್ಲೇ ಬುಧವಾರ ಅಂಚೆ ಮತದಾನ ಮಾಡಲು ಬಂದ ಅಧಿಕಾರಿಯೊಬ್ಬರ ಮತಪತ್ರವನ್ನು ಕುಮಾರಸ್ವಾಮಿ ಅವರ ಆಪ್ತ ಸಹಾಯಕ ಕೆಂಚೇಗೌಡ ಪಡೆದುಕೊಂಡು ಅದಕ್ಕೆ ಗುರುತು ಹಾಕಿ ನೀಡುತ್ತಿರುವ ವೀಡಿಯೋ ವೈರಲ್‌ ಆಗಿದೆ. ಈ ಸಂಬಂಧ ಚುನಾವಣಾಧಿಕಾರಿಗೆ ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್‌ ಅವರ ಚುನಾವಣ ಏಜೆಂಟ್‌ ದಿಲೀಪ್‌ ದೂರು ಸಲ್ಲಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next