ಚನ್ನಪಟ್ಟಣ: ಬಿರುಗಾಳಿ ಮಳೆಗೆ ಹಾನಿಗೀಡಾಗಿರುವ ಬೆಳೆಗಳಿಗೆ ಪ್ರಕೃತಿ ವಿಕೋಪ ನಿಧಿಯಿಂದ ನೀಡುವ ಪರಿಹಾರದ ಜತೆಗೆ ಹೆಚ್ಚಿನ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ವೈಯಕ್ತಿಕವಾಗಿ ಹಾನಿ ಯಾಗಿರುವ ಪ್ರತಿ ಎಕರೆಗೆ 10 ಸಾವಿರ ರೂ. ಪರಿಹಾರ ನೀಡುತ್ತೇನೆ ಎಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಗೋವಿಂದಹಳ್ಳಿ ಗ್ರಾಮದಲ್ಲಿ ಬಿರುಗಾಳಿಯಿಂದ ನೆಲಕಚ್ಚಿರುವ ಬಾಳೆ ತೋಟಕ್ಕೆ ಭೇಟಿ ನೀಡಿ ಮಾತನಾಡಿದರು. ಪ್ರಕೃತಿ ವಿಕೋಪ ನಿಧಿಯಲ್ಲಿ ಹಾನಿಗೀಡಾದ ಪ್ರತಿ ಹೆಕ್ಟೇರ್‌ಗೆ 18 ಸಾವಿರ ರೂ. ನೀಡುವ ನಿಯಮವಿದೆ. ಆದರೆ ಪಾರಿಹಾರ ಸಾಲುವು ದಿಲ್ಲ. ಒಂದು ಎಕರೆಯಲ್ಲಿ ಬಾಳೆ ಬೆಳೆಯಲು ಕನಿಷ್ಠ 80 ರಿಂದ 1 ಲಕ್ಷ ರೂ. ಅಗತ್ಯವಿದೆ.
ಹೂ ವಿನ ಬೆಳೆಗಾರರಿಗೆ 25 ಸಾವಿರ ರೂ. ಪರಿಹಾರ ಘೋಷಣೆ ಮಾಡಿರುವಂತೆ ಇದಕ್ಕೂ ನೀಡಲು ಸರ್ಕಾರ ಮುಂದಾಗಬೇಕು ಎಂದರು. ಸುಮಾರು 150 ಎಕರೆ ಪ್ರದೇಶದಲ್ಲಿ ಬೆಳೆದ ಬಾಳೆ ನಾಶವಾಗಿದೆ, 2 ಸಾವಿರ ತೆಂಗು ನೆಲ ಕಚ್ಚಿದೆ, ಸಾಕಷ್ಟು ಮನೆಗಳಿಗೆ ಹಾನಿಯಾಗಿವೆ. ಪ್ರತಿ ಎಕರೆಗೆ ಸುಮಾರು 8ರಿಂದ 10 ಲಕ್ಷ ರೂ. ಆದಾಯ ನಷ್ಟವಾಗಿದೆ.
ಹಿಂದಿನ ಸರ್ಕಾರದಲ್ಲಿ ತೆಂಗು ಬೆಳೆಗೆ ಎಕರೆಗೆ 20 ಸಾವಿರ ರೂ. ಪರಿ ಹಾರ ಕೊಡಲಾಗಿತ್ತು. ಅದೇ ರೀತಿ ಮುಂದು ವರಿಸಬೇಕು ಎಂದು ಆಗ್ರಹಪಡಿಸಿದರು. ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಎಸ್ ಡಿಆರ್‌ಎಫ್‌ನಿಂದ 18 ಸಾವಿರ ರೂ. ಪರಿಹಾರ ನೀಡುವ ನಿಯಮವಿದ್ದು, ಅದನ್ನು ಹೆಚ್ಚಿಸುವಂತೆ ಈಗಾಗಲೇ ಮನವಿ ಮಾಡ ಲಾಗಿದೆ.
ಸರ್ಕಾರಕ್ಕೆ ತರ ಬಗ್ಗೆ ಕಾಳಜಿ ಯಿದ್ದರೆ, ಪರಿಶೀಲಿಸಿ ಪರಿಹಾರ ಮಂಜೂರು ಮಾಡಬೇಕು ಎಂದರು. ಮುದಗೆರೆ, ಬೆಳಕೆರೆ, ಕೋಲೂರು, ಸೀಬನಹಳ್ಳಿ ಸೇರಿದಂತೆ ಹಾನಿಗೀಡಾಗಿರುವ ಗ್ರಾಮಗಳಿಗೆ ಉಭಯ ನಾಯಕರು ಭೇಟಿ ನೀಡಿ ರೈತರಿಂದ ಮನವಿ ಆಲಿಸಿದರು. ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.
ಜಿಪಂ ಅಧ್ಯಕ್ಷ ಬಸಪ್ಪ, ಸದಸ್ಯ ಎಸ್. ಗಂಗಾಧರ್, ಪ್ರಸನ್ನ, ಸಿ.ಪಿ.ರಾಜೇಶ್, ತಾಪಂ ಅಧ್ಯಕ್ಷ ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಸಿ.ವೀರೇಗೌಡ, ಶಿವಮಾದು, ಟಾಸ್‌ಫೋರ್ಸ್ ಅಧ್ಯಕ್ಷ ಶರತ್‌ಚಂದ್ರ, ಕಾಂಗ್ರೆಸ್ ಮುಖಂಡ ಆರ್.ನವ್ಯಶ್ರೀ, ಚಂದ್ರಸಾಗರ್, ಜೆಡಿಎಸ್ ತಾಲೂಕು ಅಧ್ಯಕ್ಷ ಜಯಮುತ್ತು, ನಗರಾಧ್ಯಕ್ಷ ರಾಜಣ್ಣ ಸೇರಿದಂತೆ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.