Advertisement

ಮರದ ಕೆಳಗೆ ಸಂಧಾನ! ಕುಮಟಳ್ಳಿ, ರಮೇಶ್ ಗೆ ಮಂತ್ರಿಗಿರಿ ಆಫರ್ ಕೊಟ್ಟ HDK, ಪರಂ!

09:53 AM May 28, 2019 | Team Udayavani |

ಬೆಂಗಳೂರು: ಆಪರೇಶನ್ ಕಮಲ, ಸರ್ಕಾರಕ್ಕೆ ಡೆಡ್ ಲೈನ್ ಹಿನ್ನೆಲೆಯಲ್ಲಿ ಬಿಜೆಪಿಗೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಸೋಮವಾರ ವಿಧಾನಸೌಧ ಆವರಣದ ಮರದ ಕೆಳಗೆ ಕಾಂಗ್ರೆಸ್ ಬಂಡಾಯ ಶಾಸಕ ಮಹೇಶ್ ಕುಮಟಳ್ಳಿ ಜೊತೆ ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

Advertisement

ಮಹೇಶ್ ಕುಮಟಳ್ಳಿ ಮೂಲಕ ಅತೃಪ್ತ ಶಾಸಕರ ಮನವೊಲಿಕೆಗೆ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಗನ್ ಮ್ಯಾನ್ ಹಾಗೂ ಬೆಂಬಲಿಗರನ್ನು ದೂರ ಇಟ್ಟು, ಮರದ ಕೆಳಗೆ ಸಮಾಲೋಚನೆ ನಡೆಸಿದ್ದರು. ಅಷ್ಟೇ ಅಲ್ಲ ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡುವ ಭರವಸೆಯೂ ನೀಡಿದ್ದಾರೆನ್ನಲಾಗಿದೆ.

ಈ ಮಾತುಕತೆ ಬಳಿಕ ಮಹೇಶ್ ಕುಮಟಳ್ಳಿ, ಮತ್ತೊಬ್ಬ ಕಾಂಗ್ರೆಸ್ ಪಕ್ಷದ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಮನೆಗೆ ತೆರಳಿದ್ದು, ಸಿಎಂ ಕುಮಾರಸ್ವಾಮಿ ನೀಡಿರುವ ಆಫರ್ ಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿ, ಕುಮಟಳ್ಳಿ 45 ನಿಮಿಷಗಳ ಕಾಲ ಚರ್ಚೆ ನಡೆಸಿದ ಬಳಿಕ ಕುಮಟಳ್ಳಿ ಮತ್ತೆ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಲು ತೆರಳಿದ್ದಾರೆ.

ಸತೀಶ್ ಮತ್ತು ರಮೇಶ್ ಜಾರಕಿಹೊಳಿಗೂ ಮಂತ್ರಿಗಿರಿ ನೀಡಲಿ ಎಂದು ಬೆಂಗಳೂರಿನ ರಮೇಶ್ ಜಾರಕಿಹೊಳಿ ನಿವಾಸದ ಬಳಿ ಮಹೇಶ್ ಕುಮಟಳ್ಳಿ ಸುದ್ದಿಗಾರರ ಜೊತೆ ಮಾತನಾಡುತ್ತ ತಿಳಿಸಿದ್ದಾರೆ. ರಮೇಶ್ ಜಾರಕಿಹೊಳಿ ಜೊತೆ ಮಾತುಕತೆ ನಡೆಸಿದ ನಂತರ ಈ ಪ್ರತಿಕ್ರಿಯೆ ನೀಡಿದ್ದಾರೆ. ಸತೀಶ್, ರಮೇಶ್ ಇಬ್ಬರೂ ಸಂಘಟನಾ ಚತುರರು, ಮಂತ್ರಿಗಿರಿ ಬಗ್ಗೆ ಚರ್ಚಿಸುವಷ್ಟು ನಾನು ದೊಡ್ಡವನಲ್ಲ ಎಂದು ಹೇಳಿದರು!

Advertisement
Advertisement

Udayavani is now on Telegram. Click here to join our channel and stay updated with the latest news.

Next