Advertisement

ಎಚ್ಡಿಕೆ ಮೂರ್ಖ ಸಿಎಂ

06:00 AM Dec 28, 2018 | |

ಬಾಗಲಕೋಟೆ: “ಮುಖ್ಯಮಂತ್ರಿ ಕುಮಾರಸ್ವಾಮಿ ಮೂರ್ಖ ಸಿಎಂ. ಉತ್ತರ ಕರ್ನಾಟಕದವರು ನನಗೆ ಮತ ಹಾಕಿಲ್ಲ ಎಂದು ಅವಮಾನ ಮಾಡಿದರು. ಅವರಂತಹ ಅಳುವ ಸಿಎಂ ನಮಗೆ ಬೇಕಾಗಿಲ್ಲ. ನಗುವ, ಜನರ ಕಷ್ಟ ದೂರ ಮಾಡಿ, ನಗಿಸುವ ಮುಖ್ಯಮಂತ್ರಿ ಬೇಕು’ ಎಂದು ಧಾರವಾಡ ಮನಸೂರ ಮಠದ ಬಸವರಾಜ ದೇವರು ಹೇಳಿದರು.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗೆ ಎಲ್ಲರೂ ಮತ ಹಾಕಿದ್ದಾರೆ. ಮುಖ್ಯಮಂತ್ರಿಗೆ ಗಂಭೀರತೆ, ಚೈತನ್ಯ ಮೂಡಿಸುವ ವ್ಯಕ್ತಿತ್ವ ಬೇಕು. ಪ್ರಾಂತ್ಯವಾರು ತಾರತಮ್ಯ ಮಾಡುವ ಸಿಎಂ ಬೇಡ. ಸರ್ಕಾರ ಎಲ್ಲ ಉತ್ಸವಗಳನ್ನು ದಕ್ಷಿಣ ಕರ್ನಾಟಕದಲ್ಲೇ ನಡೆಸುತ್ತದೆ. ಮೈಸೂರು ಉತ್ಸವ, ಭರಚುಕ್ಕಿ, ಅವರಪ್ಪ, ಅವರವ್ವ ಎಂದು ಉತ್ಸವ ಮಾಡುತ್ತಾರೆ. ಅವು ಮನಿ (ದುಡ್ಡು) ಉತ್ಸವ. ಉತ್ತರ ಕರ್ನಾಟಕದ ಐಹೊಳೆ, ಪಟ್ಟದಕಲ್ಲು, ಬಾದಾಮಿ ಉತ್ಸವ ಏಕೆ ಮಾಡುವುದಿಲ್ಲ ಎಂದರು.

ಸಿದ್ದರಾಮಯ್ಯ ಕುರಿ ಆಗಬೇಡಿ, ಟಗರು ಆಗಬೇಕು. ನಾವೆಲ್ಲ ಅವರನ್ನು ಟಗರಿನಂತೆ ಬೆಳೆಸಿದ್ದೇವೆ. ಆದರೆ, ಟಗರು ನಮಗೇ ಗುಧ್ದೋಕೆ ಬರುತ್ತಿದೆ. ಟಗರು ಆಡಿಸೋನಿಗೆ ಟಗರು ಎದುರು ಬಿದ್ದರೆ, ಟಗರು ಆಡಿಸುವವನು ಇರುವುದಿಲ್ಲ. ಟಗರೂ ಇರೋದಿಲ್ಲ. ಟಗರು ಆಗಿ ಮನೆತನಕ್ಕೆ ಹೆಸರು ತಗೆದುಕೊಂಡು ಬಾ ಎಂದು ನಾವು ಹೇಳುತ್ತೇವೆ. ಆದರೆ, ಸಿದ್ದರಾಮಯ್ಯ ಅದನ್ನು ಮಾಡುತ್ತಿಲ್ಲ. ಅವರಿಗೆ ತನ್ನ ಮಗನಿಗೆ ಒಂದು ಸ್ಥಾನಮಾನ ಕೊಡಿಸಲು ಆಗಲಿಲ್ಲ. ಸಮಾಜವನ್ನು ಎಸ್‌ಟಿ ಮೀಸಲಾತಿಗೆ ಸೇರಿಸಿ ಎಂದು ಕೇಳಿದರೂ ಕಡೆಗಣಿಸಿದರು ಎಂದರು.

ಎಂ.ಟಿ.ಬಿ. ನಾಗರಾಜ ಅವರಿಗೆ ಸಚಿವ ಸ್ಥಾನ ನೀಡಿರುವುದು ಪೇಮೆಂಟ್‌ ಸೀಟೋ ಏನೋ ಗೊತ್ತಿಲ್ಲ ಎಂದ ಅವರು,  ಮಾಜಿ ಸಚಿವ ಎಚ್‌.ವೈ. ಮೇಟಿ ಅವರನ್ನು ನೆನೆದು, ಪಾಪ ಮೇಟಿ ತರಹ ಯಾವುದಾದರೊಂದು ಪ್ರಕರಣದಲ್ಲಿ ಸಿಲುಕಿಸಿ ಕುರುಬ ಸಮುದಾಯದ ಸಚಿವರನ್ನು ತೆಗೆದು ಹಾಕುವಂತಹ ವ್ಯಕ್ತಿಗಳು ಉತ್ತರ ಕರ್ನಾಟಕದಲ್ಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next