Advertisement
ಈ ರೀತಿಯಾಗಿ ವಿಲೀನಗೊಂಡಿರುವುದರಿಂದಾಗಿ ಅಮೆರಿಕ ಮತ್ತು ಚೀನಾದ ಹಣಕಾಸು ಸಂಸ್ಥೆಗಳಿಗೆ ಸಮಾನವಾಗಿ ಭಾರತದ ವಿತ್ತೀಯ ಸಂಸ್ಥೆಯೊಂದು ಬೆಳೆದಿರುವುದು ಹೆಗ್ಗಳಿಕೆಯೇ ಆಗಿದೆ ಎಂದು “ಬ್ಲೂಮ್‌ಬರ್ಗ್’ ವರದಿ ಮಾಡಿದೆ.
ವಿಲೀನಗೊಂಡಿರುವ ಎರಡೂ ವಿತ್ತೀಯ ಸಂಸ್ಥೆಗಳ ಒಟ್ಟು ವಹಿವಾಟು ಪ್ರಸಕ್ತ ವರ್ಷ ಮಾ.31ರ ಅಂತ್ಯಕ್ಕೆ 41 ಲಕ್ಷ ಕೋಟಿ ರೂ. ಆಗಿದೆ. ಸದ್ಯ ವಿಲೀನ ಪ್ರಕ್ರಿಯೆ ಪೂರ್ಣಗೊಂಡು ಎರಡೂ ಸಂಸ್ಥೆಗಳ ಮೌಲ್ಯ 4.14 ಲಕ್ಷ ಕೋಟಿ ರೂ. ಆಗಿದೆ. ಎರಡೂ ಸಂಸ್ಥೆಗಳ ಲಾಭ ಮಾ.31ರ ಮುಕ್ತಾಯದಲ್ಲಿ 60 ಸಾವಿರ ಕೋಟಿ ರೂ. ಆಗಿದ್ದರೆ, ಒಟ್ಟು ಆಸ್ತಿ 18 ಲಕ್ಷ ಕೋಟಿ ರೂ. ಆಗಲಿದೆ. ಹೆಚ್ಚಿನ ಶಾಖೆಗಳು:
ಇದೀಗ ದೇಶಾದ್ಯಂತ 8,300ಕ್ಕೂ ಅಧಿಕ ಶಾಖೆಗಳನ್ನು ಹೊಂದಿ, ದೇಶದ ದೊಡ್ಡ ಬ್ಯಾಂಕಿಂಗ್ ಜಾಲ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಜತೆಗೆ 1,77,000 ಮಂದಿ ಉದ್ಯೋಗಿಗಳೂ ಇದ್ದಾರೆ.
Related Articles
ಬ್ಯಾಂಕ್‌ನ ಗ್ರಾಹಕರ ಸಂಖ್ಯೆ 12 ಕೋಟಿ ಆಗಲಿದೆ. ಅಂದರೆ ಜರ್ಮನಿಯ ಒಟ್ಟು ಜನಸಂಖ್ಯೆಯನ್ನೂ ಅದು ಮೀರಿಸಿದೆ ಎಂಬ ಅಂಶ ಕುತೂಹಲಕ್ಕೆ ಕಾರಣವಾಗಿದೆ. ಜಗತ್ತಿನ ಪ್ರಮುಖ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಾಗಿರುವ ಜೆ.ಪಿ.ಮಾರ್ಗನ್ ಚೇಸ್ ಆ್ಯಂಡ್ ಕೊ, ಇಂಡಸ್ಟ್ರಿಯಲ್ ಆ್ಯಂಡ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ ಲಿಮಿಟೆಡ್, ಬ್ಯಾಂಕ್ ಆಫ್ ಅಮೆರಿಕ ಕಾರ್ಪ್‌ಗಳಿಗೆ ಸಮನಾಗಿ ವಿಲೀನಗೊಂಡ ಸಂಸ್ಥೆ ನಿಲ್ಲಲಿದೆ. ದೇಶದ ಬ್ಯಾಂಕ್‌ಗಳಾಗಿರುವ ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌ಗಳನ್ನು ಕೂಡ ಮಾರುಕಟ್ಟೆ ಬಂಡವಾಳದಲ್ಲಿ ಹಿಂದಿಕ್ಕಿದೆ.
Advertisement
ಎಚ್‌ಡಿಎಫ್ಸಿ ಸೆಕ್ಯುರಿಟೀಸ್ ಲಿ., ಎಚ್‌ಡಿಬಿ ಫೈನಾನ್ಶಿಯಲ್ ಸರ್ವಿಸಸ್ ಲಿ., ಎಚ್‌ಡಿಎಫ್ಸಿ ಅಸೆಟ್ ಮ್ಯಾನೇಜ್‌ಮೆಂಟ್ ಕಂ.ಲಿ., ಎಚ್‌ಡಿಎಫ್ಸಿ ಎರ್ಗೊ ಜನರಲ್ ಇನ್ಶೂರೆನ್ಸ್ ಕಂ. ಲಿ., ಎಚ್‌ಡಿಎಫ್ಸಿ ಕ್ಯಾಪಿಟಲ್ ಅಡ್ವೆ„ಸರ್ಸ್ ಲಿಮಿಟೆಡ್ ಮತ್ತು ಎಚ್‌ಡಿಎಫ್ಸಿ ಲೈಫ್ ಇನ್ಶೂರೆನ್ಸ್ ಕಂ. ಲಿ ಕೂಡ ಈ ಪ್ರಕ್ರಿಯೆಯಲ್ಲಿ ಒಳಗೊಂಡಿವೆ.