Advertisement

ದೇವೇಗೌಡರ ಕಣ್ಣೀರ ಶಾಪ ತುಮಕೂರಿಗೆ ತಟ್ಟುತ್ತೆ: ಎಚ್‌.ಡಿ.ರೇವಣ್ಣ

10:36 AM Dec 05, 2020 | sudhir |

ಚನ್ನರಾಯಪಟ್ಟಣ: ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಕಣ್ಣೀರು ಹಾಕಿಸಿದ ಶಾಪ ಶೀಘ್ರದಲ್ಲಿ ತುಮಕೂರಿಗೆ ತಟ್ಟಲಿದೆ ಎಂದು ಶಾಸಕ ಎಚ್‌.ಡಿ.ರೇವಣ್ಣ ಹೇಳಿದರು. ಪಟ್ಟಣದ ಕೃಷಿ ಉತ್ಪನ್ನ ಮಾರು ಕಟ್ಟೆ ಸಮಿತಿ ಆವರಣದಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯನ್ನು
ಸಂಪೂರ್ಣ ನೀರಾವರಿ ಮಾಡಲು ಮಾಜಿ ಪ್ರಧಾನಿ ದೇವೇಗೌಡರು ಹಗಲಿರುಳು ಶ್ರಮಿಸಿದ್ದರು. ಆದರೆ, ಅಲ್ಲಿನ ಮುಖಂಡರು ಅವರನ್ನೇ ಕಣಕ್ಕೆ ಇಳಿಸಿ, ವಿಶ್ವಾಸ ದ್ರೋಹ ಮಾಡಿದ್ದಾರೆ. ಅವರಿಗೆ ಆ ದೇವರೇ ಶಿಕ್ಷೆಕೊಡುತ್ತಾನೆ ಎಂದುಹೇಳಿದರು.

Advertisement

ದೇವೇಗೌಡರು ತುಮಕೂರಿನಿಂದ ಲೋಕಸಭೆಗೆ ಹೋದರೆ ಹೇಮಾವತಿ ನೀರು ಹರಿಸುವುದಿಲ್ಲ ಎಂದು ತಪ್ಪು ಸಂದೇಶ ಸಾರಿದಲ್ಲದೆ, ಜೆಡಿಎಸ್‌ ಪಕ್ಷದ ಕೆಲ ಮುಖಂಡರು ವಿರೋಧ ಪಕ್ಷದೊಂದಿಗೆ ಚುನಾವಣೆ ವೇಳೆ ಕೈ ಜೋಡಿಸಿದ್ದರಿಂದ ‌ ಸೊಲುವಂತಾಯಿತು, ಇದರಿಂದ ಅವರು ಕುಗ್ಗಿ ಹೋಗಿದ್ದಾರೆ, ಜಿಲ್ಲೆಗೆ ಹೋಲಿಸಿದರೆ ತುಮಕೂರಿಗೆ ಹೆಚ್ಚು ನೀರು ಹೇಮಾವತಿ
ಅಣೆಕಟ್ಟೆಯಿಂದ ಹರಿಯುತ್ತಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಪಕ್ಕಗಳ ಒಳ ಒಪ್ಪಂದ: ಪಕ್ಷದ ವರಿಷ್ಠ ದೇವೇಗೌಡರು ಹಾಗೂ ಜೆಡಿಎಸ್‌ ಪಕ್ಷವನ್ನು ಮುಗಿಸಲು ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿವೆ. ಇದು ಹೆಚ್ಚು ದಿನ ನಡೆಯುವುದಿಲ್ಲ, ದೇವೇಗೌಡರ ಮಾರ್ಗದರ್ಶನ, ಯುವಕರಾದ ನಿಖೀಲ್‌ ಮತ್ತು ಪ್ರಜ್ವಲ್‌ ಮೂಲಕ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಸವಾಲು ಹಾಕಿದರು.

ಇದನ್ನೂ ಓದಿ:ಕುರಿ ರೀತಿ ಜನರ ತುಂಬಿದ್ದ ವಾಹನ ಪಲ್ಟಿ: ಇಬ್ಬರಿಗೆ ಗಂಭೀರ ಗಾಯ, ಹಲವರಿಗೆ ಸಣ್ಣಪುಟ್ಟ ಗಾಯ

ತಿಂಗಳು ಸರ್ಕಾರ ನಮ್ಮದು: ರಾಜ್ಯದ ಜನತೆ ನಮಗೆ ಸಂಪೂರ್ಣ ಅವಕಾಶ ನೀಡುತ್ತಿಲ್ಲ. ಹಾಗಾಗಿ 20 ತಿಂಗಳು, 14 ತಿಂಗಳು ಅಧಿಕಾರ ಮಾಡುವಂತಾಯಿತು. ಈ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿಸಿದ್ದೇನೆ,ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡು ಕೆಲಸಮಾಡಿಸಿದ್ದು, ಮರು ಹುಟ್ಟು ಕಾಣುವಂತಾಯಿತು. ಡಿಕೆಶಿ ನೀರಾವರಿ ಮಂತ್ರಿಯಾಗಿದ್ದರು. ನಾವು
ತುಮಕೂರಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದೇವೆ ಎಂದುಹೇಳಿದರು.

Advertisement

ನಾಲ್ಕು ಪಟ್ಟು ದರ ಏರಿಕೆ: ತಾನು ಇಂಧನ ಮಂತ್ರಿ ಆಗಿದ್ದ ವೇಳೆ ವಿದ್ಯುತ್‌ ಶುಲ್ಕ ಏರಿಕೆ ಮಾಡಿರಲಿಲ್ಲ. ಆದರೆ, ಬಿಜೆಪಿ ಹಾಗೂ
ಕಾಂಗ್ರೆಸ್‌ ಸರ್ಕಾರ 10 ಬಾರಿ ದರ ಏರಿಕೆ ಮಾಡಿದ್ದು, ನಾಲ್ಕು ಪಟ್ಟು ದುಬಾರಿ ಹಣ ಕಟ್ಟುವಂತಾಗಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಬಳಕೆದಾರರು ಹೈರಾಣಾಗುವಂತಾಗಿದೆ. ರೈತರಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ರೈತರಿಗೆ ಹೊರೆ ಹೊರಿಸುತ್ತಿದ್ದಾರೆ
ಎಂದು ಆಪಾದನೆ ಮಾಡಿದರು.

ಶ್ರೀಕಂಠಯ್ಯ ದೇಷ ರಾಜಕಾರಣಿ ಅಲ್ಲ: ಜಿಲ್ಲೆಯಲ್ಲಿ ಶ್ರೀಕಂಠಯ್ಯ ಎಂದಿಗೂ ದ್ವೇಷರಾಜಕೀಯ ಮಾಡಿಲ್ಲ. ಅವರು ಹಲವು ಬಾರಿ ದೇವೇಗೌಡರಿಗೆ ರಾಜಕೀಯ ಸಲಹೆ ನೀಡಿದ್ದರು. ಶ್ರೀಕಂಠಯ್ಯ ಅವರನ್ನು ನಿಂಧನೆ ಮಾಡಿದವರುಇಂದುಅವರಪಕ್ಷಕ್ಕೆ ಸೇರಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಪುಟ್ಟೇಗೌಡ ಹೆಸರು ಹೇಳದೆ ತಿರುಗೇಟು ನೀಡಿದರು.

ಶಾಸಕ ಬಾಲಕೃಷ್ಣ, ತಾಲೂಕು ಅಧ್ಯಕ್ಷ ದೇವರಾಜೇಗೌಡ, ಜಿಪಂ ಸದಸ್ಯ ಪುಟ್ಟಸ್ವಾಮಿಗೌಡ, ಮುಖಂಡ ರಾದಕೃಷ್ಣೇಗೌಡ, ರಾಮಕೃಷ್ಣ, ತಿಮ್ಮೇಗೌಡ, ನವೀನ್‌, ವಿರೇಶ್‌, ಶಿವಣ್ಣ,ಲೋಕೇಶ್‌,ವೆಂಕಟೇಶ್‌, ಶಿವರಾಜ್‌ ಮೊದಲಾದವರು ಉಪಸ್ಥಿತರಿದ್ದರು.

ನಿಂಬೇಹಣ್ಣಿನ ಶಕ್ತಿ ತಿಳಿಯಲಿ
ಎಚ್‌.ಡಿ.ರೇವಣ್ಣ ನಿಂಬೇಹಣ್ಣು ಇಟ್ಟುಕೊಂಡಿರುವ ಬಗ್ಗೆ ಇತ್ತೀಚೆಗೆ ನಡೆದ ಗ್ರಾಮ ಸ್ವಾರಜ್‌ಕಾರ್ಯಕ್ರಮದಲ್ಲಿ ಸಹಕಾರ
ಮಂತ್ರಿ ಸೋಮಶೇಖರ್‌ ವ್ಯಂಗ್ಯವಾಡಿದ್ದರು. ಮೊದಲು ಅವರು ನಿಂಬೇಹಣ್ಣಿನ ಶಕ್ತಿ ತಿಳಿದು ನಂತರ ಮಾತನಾಡುವುದು
ಒಳಿತು, ವಿರೋಧಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ಮಾಠ ಮಂತ್ರಗಳು ನನಗೆ ತಟ್ಟದಿರಲೆಂದು ದೇವಾಲಯದ ಅರ್ಚಕರು ನಿಂಬೇಹಣ್ಣು ನೀಡುತ್ತಾರೆ ಎಂದು ಮಾಜಿ ಸಚಿವ ರೇವಣ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next