ಚನ್ನರಾಯಪಟ್ಟಣ/ದಂಡಿಗನಹಳ್ಳಿ: ರಾಜ್ಯಾದ್ಯಂತ ನ.17ರಿಂದ ಕಾಲೇಜು ಪ್ರಾರಂಭಿಸಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಆದರೆ, ವಿದ್ಯಾರ್ಥಿಗಳ ಆರೋಗ್ಯದ ಮೇಲೆ ನಿಗಾವಹಿಸಬೇಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಸಲಹೆ ನೀಡಿದರು.
ತಾಲೂಕಿನ ದಂಡಿಗನಹಳ್ಳಿ ಹೋಬಳಿ ಉದಯಪುರ ಗ್ರಾಮದಲ್ಲಿ ನಬಾರ್ಡ್‌ನಿಂದ5ಕೋಟಿ ರೂ. ವೆಚದಲ್ಲಿ c ನಿರ್ಮಾಣಗೊಂಡಿದ್ದ ಐಟಿಐಕಾಲೇಜಿನಹೆಚ್ಚುವರಿಕಟ್ಟಡಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರಸಕ್ತ ವರ್ಷ ಶಿಕ್ಷಣದಲ್ಲಿ ಹಿನ್ನಡೆಯಾಗಿದೆ. ಈ ತಿಂಗಳಲ್ಲಿಕಾಲೇಜು ತೆರೆದು ವಿದ್ಯಾರ್ಥಿಗಳ ಜ್ಞಾನಾರ್ಜ ನೆಗೆ ಸರ್ಕಾರ ಮುಂದಾಗುತ್ತಿರುವುದಕ್ಕೆಯಾರೂ ವಿರೋಧ ಮಾಡುವುದು ಬೇಡ ಎಂದು ಸಲಹೆ ನೀಡಿದರು.
ಉತ್ತಮ ನಿರ್ಧಾರ: ಮೊದಲ ಹಂತದಲ್ಲಿ ಕಾಲೇಜುಗಳ ಬಾಗಿಲು ತೆರೆದು ಶಿಕ್ಷಣ ನೀಡಲಿ, ಸರ್ಕಾರ ಯಾವ ರೀತಿಯಲ್ಲಿ ವಿದ್ಯಾರ್ಥಿಗಳ ಆರೋಗ್ಯ ಬಗ್ಗೆ ಜಾಗೃತಿ ವಹಿಸುತ್ತದೆ ಹಾಗೂ ಕೋವಿಡ್ ಎಷ್ಟು ಪ್ರಮಾಣದಲ್ಲಿ ಕಡಿಮೆ ಆಗುತ್ತದೆ ಎನ್ನುವುದು ನೋಡಿಕೊಂಡು ನಂತರದ ದಿನಗಳಲ್ಲಿ ಪ್ರೌಢಶಾಲೆ ಮೇಲ್ಪಟ್ಟವುಗಳನ್ನು ತೆರೆದು ಶಿಕ್ಷಣ ನೀಡಲು ಸಚಿವರು ಆಲೋಚನೆ ಮಾಡಲಿ, ಶಿಕ್ಷಣದಿಂದ ವಂಚಿತರಾಗುವವರ ಸಂಖ್ಯೆ ಹೆಚ್ಚುವುದನ್ನು ತಡೆಯಲು ಸರ್ಕಾರ ಉತ್ತಮ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು.
ಸ್ಥಳಾಂತರ ಸರಿಯಲ್ಲ: ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದರು, ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಕೊಡುವ ಉದ್ದೇಶದಿಂದ ಉತ್ತಮ ಶಿಕ್ಷಣದ ಕಾಲೇಜು ತೆರೆಯುವ ಮೂಲಕ ರೈತ ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ಸಹಕಾರಿಯಾಗಿದ್ದರು. ಆದರೆ, ಹಲವು ಭಾಗದಲ್ಲಿ ಉನ್ನತ ಶಿಕ್ಷಣ ನೀಡುವ ಕಾಲೇಜುಗಳ ಸ್ಥಳಾಂತರ ಮಾಡಲು ಸರ್ಕಾರ ಮುಂದಾಗಿದ್ದು ಸರಿಯಲ್ಲ ಎಂದು ತಿಳಿಸಿದರು.
ಬಹುತೇಕ ಪೂರ್ಣ: ತಾಲೂಕಿನಲ್ಲಿ ಕಳೆದ 30 ವರ್ಷದಿಂದ ಕುಂಟುತ್ತಾ ಸಾಗಿರುವ ಕಾಚೇನಹಳ್ಳಿ ಏತ ನೀರಾವರಿ ಯೋಜನೆಗೆ ಯಾವ ಸರ್ಕಾರ 200 ಕೋಟಿ ರೂ. ಹಣ ಬಿಡುಗಡೆ ಮಾಡುವ ಮೂಲಕ ಯೋಜನೆಗೆ ಮರುಜೀವ ನೀಡಿತು ಎನ್ನುವುದುದಂಡಿಗಹಳ್ಳಿ ಹೋಬಳಿಜನತೆಗೆಗೊತ್ತಿದೆ,ಆಲಗೊಂಡನಹಳ್ಳಿ ಹಾಗೂ ಕಾಚೇನಹಳ್ಳಿ ಏತನೀರಾವರಿ ಯೋಜನೆಯಮೂರನೇಹಂತದಕಾಮಗಾರಿ ಈಗಾಗಲೇ ಬಹುತೇಕ ಮುಗಿದಿದೆ ಎಂದು ತಿಳಿಸಿದರು.
ದಂಡಿಗನಹಳ್ಳಿ ಹೋಬಳಿಯ ಆಲಗೊಂಡನಹಳ್ಳಿ ಹಾಗೂ ಕಾಚೇನಹಳ್ಳಿ ಏತನೀರಾವರಿ ಯೋಜನೆಗೆ ದೇವೇಗೌಡರ ಕುಟುಂಬ ವಿರೋಧ ಇದೆ ಎಂದು ಕೆಲವರು ಬಿಂಬಿಸುತ್ತಿದ್ದಾರೆ, ನಾವು ಎಂದಿಗೂ ಏತನೀರಾವರಿ ವಿಷಯದಲ್ಲಿ ರಾಜಕೀಯ ಮಾಡಿಲ್ಲ. ಹಾಗಾಗಿ ಏತನೀರಾವರಿ ಯೋಜನೆ ಕಾಮಗಾರಿಗಳು ನಡೆಯುತ್ತಿವೆ,ಏತನೀರಾವರಿ ಯೋಜನೆ ಆದಷ್ಟು ಬೇಗ ಮುಗಿಯಲಿ ಎನ್ನುವುದು ನಮ್ಮ ಕುಟುಂಬದ ಸಂಕಲ್ಪ ಎಂದು ಹೇಳಿದರು.
ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ.ಸೂರಜ್‌ರೇವಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಣ್ಣ, ಬಳದರೆ ಗ್ರಾಪಂ ಮಾಜಿ ಉಪಾಧ್ಯಕ್ಷ ರವೀಶ್, ಮಾಜಿ ಸದಸ್ಯರಾದ
ರೇವಣ್ಣ, ಪ್ರಕಾಶ್, ಮುಖಂಡರಾದ ಅಜ್ಜೇಗೌಡ, ಅಶೋಕ, ಪಟೇಲ್ ಹಿರಿಯಣ್ಣ, ಐಟಿಐಕಾಲೇಜಿನಪ್ರಾಂಶುಪಾಲ ಮಲ್ಲೇಗೌಡ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಲ್.ಶಿವಕುಮಾರ್ ಉಪಸ್ಥಿತರಿದ್ದರು.