Advertisement

HD Revanna ನನ್ನನ್ನು ಅಪಹರಿಸಿಲ್ಲ, ಸಂಬಂಧಿಕರ ಮನೆಯಲ್ಲಿದ್ದೇನೆ

11:55 PM May 12, 2024 | Team Udayavani |

ಮೈಸೂರು: ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅಪಹರಣ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿರುವ ಪ್ರಕರಣದ ಸಂತ್ರಸ್ತೆ ಎನ್ನಲಾಗಿರುವ ಮಹಿಳೆ, “ನನ್ನನ್ನು ಯಾರೂ ಅಪಹರಣ ಮಾಡಿಲ್ಲ. ಯಾರಿಂದಲೂ ನನಗೆ ತೊಂದರೆ ಆಗಿಲ್ಲ’ ಎಂದು ವೀಡಿಯೋ ಮೂಲಕ ಹೇಳಿಕೆ ನೀಡಿದ್ದು, ಇದರಿಂದಾಗಿ ಪ್ರಕರಣ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.

Advertisement

ಸಂಸ್ರಸ್ತೆ ಹೇಳಿರುವುದಿಷ್ಟು
ನನ್ನನ್ನು ಯಾರೂ ಅಪಹರಣ ಮಾಡಿಲ್ಲ. ನನ್ನ ಮಗ ತಪ್ಪು ತಿಳಿದು ದೂರು ಕೊಟ್ಟಿದ್ದಾನೆ. ನಾನು ಎಲ್ಲಿಯೂ ಹೋಗಿಲ್ಲ. ನನ್ನ ಸಂಬಂಧಿಕರ ಮನೆಯಲ್ಲಿದ್ದೇನೆ. ರೇವಣ್ಣ, ಪ್ರಜ್ವಲ್‌, ಭವಾನಿ ಅಕ್ಕ ಅಥವಾ ಸತೀಶ್‌ ಬಾಬಣ್ಣ ಆಗಲಿ ಯಾರಿಂದಲೂ ತೊಂದರೆ ಆಗಿಲ್ಲ. ನನ್ನನ್ನು ಚೆನ್ನಾಗಿ ನೋಡಿಕೊಂಡು ಕಳಿಸಿಕೊಟ್ಟಿದ್ದಾರೆ. ನಾನು ಆರಾಮವಾಗಿದ್ದೇನೆ. ಸಂಬಂಧಿಕರ ಮನೆಯಲ್ಲಿ ಟಿವಿ ನೋಡುವಾಗ ವಿಚಾರ ಗೊತ್ತಾಯಿತು. ಮೊಬೈಲ್‌ನಲ್ಲಿ ಬಂದಿ ರುವ ವೀಡಿಯೋಗೂ ನನಗೂ ಸಂಬಂಧ ಇಲ್ಲ. ಯಾರೂ ಗಾಬರಿ ಆಗುವುದು ಬೇಡ. ನಾನು ಸುರಕ್ಷಿತವಾಗಿದ್ದೇನೆ. ವಾಪಸ್‌ ಬರುತ್ತೇನೆ. ಎಲ್ಲಿ ಯಾರಿಗೆ ಮಾಹಿತಿ ಕೊಡಬೇಕೋ ಕೊಡುತ್ತೇನೆ. ಯಾರೂ ಮನೆ ಹತ್ತಿರ ಹೋಗಬೇಡಿ, ಪೊಲೀಸ್‌ನವರು ಟಾರ್ಚರ್‌ ಕೊಡಬೇಡಿ. ನಾವು ಕೂಲಿ ಮಾಡಿಕೊಂಡು ಇರುವವರು. ಹೊಟ್ಟೆ ಮೇಲೆ ಹೊಡಿಯಬೇಡಿ. ಏನಾದರೂ ತೊಂದರೆಯಾದರೆ ನಾನೇ ಬಂದು ಹೇಳಿಕೆ ಕೊಡುತ್ತೇನೆ. ನನಗಾಗಲಿ, ಕುಟುಂಬದವರಿ ಗಾಗಲಿ ತೊಂದರೆಯಾದರೆ ನೀವೇ ಜವಾಬ್ದಾರರು ಎಂದಿದ್ದಾರೆ.

ರಕ್ಷಣೆಗೂ ಪೂರ್ವದಲ್ಲೇ ವೀಡಿಯೋ ಚಿತ್ರೀಕರಣ?
ವೀಡಿಯೋವನ್ನು ಯಾವಾಗ, ಎಲ್ಲಿ ಚಿತ್ರೀಕರಣ ಮಾಡಲಾಯಿತು ಎನ್ನುವುದು ಸ್ಪಷ್ಟವಾಗಿಲ್ಲ. ಅಲ್ಲದೇ ವೀಡಿಯೋದಲ್ಲಿ ಹೇಳಿಕೆ ನೀಡುತ್ತಿರುವ ಸಂತ್ರಸ್ತೆ ಎನ್ನಲಾದ ಮಹಿಳೆಯು ಎಸ್‌ಐಟಿಯವರು ರಕ್ಷಣೆ ಮಾಡಿ, ಕರೆದುಕೊಂಡು ಹೋದ ಮಹಿಳೆಯೇ ಎನ್ನುವುದೂ ಗೊತ್ತಾಗಿಲ್ಲ. ಮಹಿಳೆಯ ಮಾತುಗಳನ್ನು ಕೇಳಿಸಿಕೊಂಡರೆ, ಅದು ಎಸ್‌ಐಟಿಯವರು ರಕ್ಷಣೆ ಮಾಡುವ ಮೊದಲು ಮಾಡಿಕೊಂಡಿರುವ ವೀಡಿಯೋ ಎಂಬ ಶಂಕೆ ಮೂಡುತ್ತದೆ. ಪೊಲೀಸರು ಮನೆ ಬಳಿ ಹೋಗಿ ಟಾರ್ಚರ್‌ ಕೊಡಬೇಡಿ. ತೊಂದರೆ ಆದರೆ ನಾನೇ ಬಂದು ಹೇಳಿಕೆ ಕೊಡುತ್ತೇನೆ ಎಂಬ ಮಹಿಳೆ ಹೇಳಿಕೆ ಗಮನಿಸಿದರೆ ರಕ್ಷಣೆಗೂ ಪೂರ್ವದಲ್ಲೇ ಈ ವೀಡಿಯೋ ಚಿತ್ರೀಕರಣವಾಗಿರಬಹುದು. ಆದರೆ ಈಗ ಅದನ್ನು ಬಹಿರಂಗಕ್ಕೆ ತಂದಿರುವುದು ಮಾತ್ರ ಹಲವು ಪ್ರಶ್ನೆಗಳನ್ನು ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next