Advertisement
– ಪೆನ್‌ಡ್ರೈವ್ ಪ್ರಕರಣದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ಬಳಿಕ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಪ್ರತಿಕ್ರಿಯೆ ಇದು.
Related Articles
ಇದಕ್ಕೆ ಮುನ್ನ ರೇವಣ್ಣ ಅವರು ಜೆ.ಪಿ. ನಗರದ ಶ್ರೀಲಕ್ಷ್ಮೀ ವೇಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಅಲ್ಲಿಂದ ಬಸವನಗುಡಿಯ ಕಾರಂಜಿ ಆಂಜನೇಯ ದೇವಸ್ಥಾನಕ್ಕೆ ತೆರಳಿ ದೇವರಿಗೆ ನಿಂಬೆಹಣ್ಣಿನ ಆರತಿ ಬೆಳಗಿದರು.
Advertisement
ಭಾವುಕರಾದ ಕುಟುಂಬಸ್ಥರು, ಕಾರ್ಯಕರ್ತರುಇದಕ್ಕೆ ಮುನ್ನ ದೇವೇಗೌಡರ ನಿವಾಸಕ್ಕೆ ರೇವಣ್ಣ ಆಗಮಿಸಿದಾಗ ಇಡೀ ಮನೆಯಲ್ಲಿ ಭಾವುಕತೆ ಆವರಿಸಿತ್ತು. ಎಲ್ಲರ ಕಣ್ಣಾಲಿಗಳಲ್ಲೂ ನೀರು ಜಿನುಗುತ್ತಿತ್ತು. ಕುಟುಂಬದವರೊಂದಿಗೆ ಸ್ವಲ್ಪ ಕಾಲ ಆತ್ಮೀಯ ಕ್ಷಣಗಳನ್ನು ಕಳೆದ ರೇವಣ್ಣ ಜತೆಯಾಗಿ ಊಟ ಮಾಡಿದರು. ತಮ್ಮ ಭೇಟಿಗೆ ಆಗಮಿಸಿದ ಪಕ್ಷದ ಶಾಸಕರು, ಮುಖಂಡರ ಜತೆಗೆ ಸ್ವಲ್ಪ ಕಾಲ ಮಾತುಕತೆ ನಡೆಸಿದ ಅನಂತರ ಮನೆಯಿಂದ ಹೊರಬಂದರು. ಹೊರಗೆ ನೆರೆದಿದ್ದ ಕಾರ್ಯಕರ್ತರನ್ನು ಕಂಡು ಭಾವುಕರಾದರು. ಕಣ್ಣೀರಿಟ್ಟ ರೇವಣ್ಣ ಅವರಿಗೆ ಧೈರ್ಯ ಹೇಳಿದ ಕಾರ್ಯಕರ್ತರು, ರೇವಣ್ಣ ಪರ ಘೋಷಣೆಗಳನ್ನು ಕೂಗಿದರಲ್ಲದೆ ರಾಜ್ಯ ಸರಕಾರ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಧಿಕ್ಕಾರ ಕೂಗಿದರು.