ಆಲೂರು : ಜನಸಾಮಾನ್ಯರ ಅಗತ್ಯ ವಸ್ತುಗಳ ಬೆಲೆ ಏರಿಸಿದ್ದೆ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ ಎಂದು ಮಾಜಿ ಸಚಿವ ಹಾಗೂ ಶಾಸಕ ಹೆಚ್.ಡಿ.ರೇವಣ್ಣ ಅಕ್ರೋಶ ವ್ಯಕ್ತಪಡಿಸಿದರು.
ಅವರು ಆಲೂರು ಪಟ್ಟಣದ ವಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಜೆಡಿಎಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ ತಿಂಗಳಿಂದ ಸುರಿಯುತ್ತಿರುವ ಬಾರಿ ಮಳೆಗೆ ಬೆಳೆದ ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು ರೈತರು ಸಂಕಷ್ಟದ ಲ್ಲಿದ್ದಾರೆ ಕೂಡಲೆ ನೆರವಿಗೆ ದಾವಿಸಬೇಕು ತಾಲ್ಲೂಕಿನ ಅಭಿವೃದ್ಧಿಗೆ ನಮ್ಮ ಕುಟುಂಬ ಸಾಕಷ್ಟು ಶ್ರಮಿಸಿದೆ ಜನಸಾಮಾನ್ಯರು ಇದನ್ನು ಮರೆಯಬಾರದು ತಾಲ್ಲೂಕಿನಲ್ಲಿ ಕಾಡಾನೆ ಉಪಟಳ ಹೆಚ್ಚಿದೆ ಕೂಲಿ ಕಾರ್ಮಿಕರು ದಿನ ದುಡಿದು ಬದುಕು ಸಾಗಿಸಬೇಕು. ಹೊರಗೆ ಬಂದರೆ ಜೀವದ ಭಯ, ಮನೆಯಲ್ಲಿ ಕೂತರೆ ಜೀವನದ ಭಯ. ಬದುಕು ಕೆಲಸವಿಲ್ಲದೆ ಶ್ರಮಿಕವರ್ಗಕ್ಕೆ ಜೀವನವೇ ಬೇಡ ಎನ್ನುವ ಸ್ಥಿತಿ ಇದೆ ಇನ್ನೂ ದಿನನಿತ್ಯದ ಅಗತ್ಯ ವಸ್ತುಗಳು ದುಬಾರಿಯಾಗುತ್ತದೆ ಪೆಟ್ರೋಲ್ ಧರವನ್ನು 112 ರೂ ಗೆ ಏರಿಸಿ 15 ಕಡಿಮೆ ಮಾಡುವುದು ಇದು ಜನಸಾಮಾನ್ಯರು ಆರ್ಥ ಮಾಡಿಕೊಳ್ಳಬೇಕು ಮುಂದೆ ಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು ಯಾವುದೇ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇದ್ದರು ಜೆಡಿಎಸ್ ಬೆಂಬಲಿಬೇಕು ಎಂದು ಮನವಿ ಮಾಡಿದರು.
ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ ಅಕಾಲಿಕ ಮಳೆ ಸುರಿಯುತ್ತಿರುವುದರಿಂದ ಕೂಯ್ಲಿಗೆ ಬಂದ ಕಾಫಿ ಕಟಾವು ಮಾಡಲಾಗದೇ ಗಿಡದಲ್ಲಿಯೇ ಉದುರುತ್ತಿದೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ರೈತರ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಬೇಕು ಈ ಭಾಗದಲ್ಲಿ ಕಾಡಾನೆ ಸಮಸ್ಯೆ ಮಿತಿಮೀರಿದದು ಈ ಬಗ್ಗೆ ಹಿಂದೆ ಅರಣ್ಯ ಸಚಿವರಾಗಿದ್ದ ಅರವಿಂದ ಲಿಂಬಾವಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯುವಂತೆ ಮನವಿ ಮಾಡಲಾಗಿತ್ತು ಅದರೆ ಇದುವರೆವಿಗೂ ಸಮಸ್ಯೆ ಬಗೆ ಹರಿದಿಲ್ಲ ಹಾಸನದಿಂದ ಸಕಲೇಶಪುರ ಮಾರ್ಗವಾಗಿ ಹೋಗುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು ಜನಸಾಮಾನ್ಯರು ಹೈರಾಣಾಗಿದ್ದಾರೆ ಅಪಾರ ಸಾವು ನೋವುಗಳಾಗುತ್ತಿವೆ ಈ ಬಗ್ಗೆ ಮುಂದಿನ ದಿನಗಳಲ್ಲಿ ಸರ್ಕಾರದ ಗಮನ ಸೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಮುಂದೆ ಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಿದರು ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು ಎಂದರು.
ಜೆಡಿಎಸ್ ರಾಜ್ಯಾದ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಮಾತನಾಡಿ ಮಲೆನಾಡು ಭಾಗದಲ್ಲಿ ಕಾಡಾನೆ ಸಮಸ್ಯೆ ಸೇರಿ ಆನೇಕ ಸಮಸ್ಯೆಗಳಿವೆ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ 25 ಜನ ಬಿಜೆಪಿ ಸಂಸದರು ಮಲ್ನಾಡು ಭಾಗದಿಂದ ಆರಿಸಿ ಬಂದಿದ್ದಾರೆ ಅದರೂ ಈ ಭಾಗದ ಸಮಸ್ಯೆ ಬಗ್ಗೆ ಪ್ರಜ್ವಲ್ ರೇವಣ್ಣ ಒಬ್ಬರೆ ಮಾತನಾಡುತ್ತಾರೆ ಅದ್ದರಿಂದ ಮುಂದಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಿದರು ಅವರಿಗೆ ನಿಮ್ಮ ಬೆಂಬಲ ಇರಲಿ ಎಂದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕೆ.ಎಸ್.ಮಂಜೇಗೌಡ,ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವೇದಾ ಸುರೇಶ್,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲೋಕೇಶ್,ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಟರಾಜ್ ನಾಕಲಗೋಡು,ಸಿ.ವಿ.ಲಿಂಗರಾಜ್,ಜೆಡಿಎಸ್ ಮುಖಂಡರಾದ ಬಿ.ಸಿ.ಶಂಕರಚಾರ್ಯು,ಕದಾಳು ರಾಜಪ್ಪಗೌಡ,ಹಾಗೂ ಇತರರು ಉಪಸ್ಥಿತರಿದ್ದರು.