Advertisement
ಶನಿವಾರ ಜಿಲ್ಲೆಯ ಆಲಮಟ್ಟಿಯ ಕೃಷ್ಣಾ ತೀರದಲ್ಲಿ ಜೆಡಿಎಸ್ ಪಕ್ಷ ಹಮ್ಮಿಕೊಂಡಿದ್ದ ಜನತಾ ಜಲಧಾರೆ ಸಂಕಲ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ರಾಜೀನಾಮೆ ಆಯ್ತು, ಈಗ ಬಂಧನ ಮಾಡುವಂತೆ ಆಗ್ರಹಿಸಿ ಕಾಂಗ್ರೆಸ್ ರಾಜಕೀಯ ಪ್ರೇರಿತ ಹೋರಾಟಕ್ಕೆ ಇಳಿದಿದೆ. ರಾಜಕೀಯವಾಗಿ ವಿಷಯವೇ ಇಲ್ಲದೆ ಈಶ್ವರಪ್ಪ ಅವರನ್ನು ಗುರಿಯಾಗಿಸಿಕೊಂಡು ಬೀದಿಗೆ ಇಳಿದಿದ್ದಾರೆ ಎಂದು ಟೀಕಿಸಿದರು.
Related Articles
Advertisement
ರಾಜ್ಯದಲ್ಲಿ ಮತೀಯ ಗಲಭೇ ಆದಾಗ ಮನೆ ಸೇರಿಕೊಂಡಿದ್ದ ಕಾಂಗ್ರೆಸ್ ನಾಯಕರು, ಈಶ್ವರಪ್ಪ ಅವರ ಭ್ರಷ್ಟಾಚಾರದ ವಿಷಯವನ್ನು ಮುಂದಿಟ್ಟುಕೊಂಡು ರಾಜೀನಾಮೆ ಆಯ್ತು, ಈಗ ಬಂಧನ ಎಂದು ಪಟ್ಟು ಹಿಡಿದಿರುವುದು ಕಾಂಗ್ರೆಸ್ ಮತ ಪ್ರಹಸನ ಎಂದು ಟೀಕಿಸಿದರು.
ಧರ್ಮಗಳ ಮಧ್ಯೆ ಒಡಕಿನ ಬೆಳವಣಿಗೆ ನಡೆದಾಗ ಮೌನವಾಗಿದ್ದು, ಮನೆ ಸೇರಿಕೊಂಡಿದ್ದ ಕಾಂಗ್ರೆಸ್ ನಾಯಕರು, ರಾಜ್ಯದಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾಗಿದ್ದಾಗ ಕಾಂಗ್ರೆಸ್ ನಾಯಕರ ಒಬ್ಬರ ಉಸಿರೂ ಇರಲಿಲ್ಲ, ಅಂದೇಕೆ ಕಾಂಗ್ರೆಸ್ ನಾಯಕರು ಮೌನವಾಗಿದ್ದೇಕೆ, ರಾಜ್ಯದ ಜನರ ಬಗ್ಗೆ ಕಾಳಜಿ ಇದ್ದವರು ಆಗೇಕೆ ಬೀದಿಗೆ ಇಳಿಯಲಿಲ್ಲ. ಜನತೆಯ ಸಮಸ್ಯೆ ಬಗ್ಗೆ ಇವರಿಗೆ ಕಾಳಜಿ ಇಲ್ಲ. ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್, ಬಿಜೆಪಿ ಎರಡೂ ರಾಜಕೀಯ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಜನತೆ ಎಷ್ಟು ದಿನ ಇದನ್ನು ಸಹಿಸುವುದು. ಅಂತಿಮವಾದ ತೀರ್ಮಾನ ಮಾಡಲು ಜನತೆಯೂ ನಿರ್ಧರಿಸಿದ್ದಾರೆ ಎಂದರು.