ಬೆಳಗಾವಿ: ಚಡ್ಡಿ ಬಿಚ್ಚಿದರೆ ಕಾಂಗ್ರೆಸ್ ನವರಿಗೆ ಏನೂ ಸಿಗುತ್ತದೆ. ಕಾಂಗ್ರೆಸ್ ನವರು ಚಡ್ಡಿ ಸುಟ್ಟರೂ, ಆರಗ ಜ್ಞಾನೇಂದ್ರ ಕಾಂಗ್ರೆಸ್ ಚಡ್ಡಿ ಉದುರಿಸಿದ್ದೇವೆ ಅಂತಾರೆ ನಿಮ್ಮ ನಿಮ್ಮ ಚಡ್ಡಿ ಉದುರಿಸಿಕೊಳ್ಳಿ ಆದರೆ ದಯವಿಟ್ಟು ರಾಜ್ಯದ ಜನತೆಯ ಚಡ್ಡಿ ಉದುರಿಸಬೇಡಿ ಎಂದು ಮಾಜಿ ಸಿಎಂ ಹೆಚ್. ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.
ನಗರದಲ್ಲಿ ಮಾತಾನಾಡಿದ ಅವರು, ಚಡ್ಡಿ ಸುಡುತ್ತೇವೆ ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯದ ಜನತೆಯ ಚಡ್ಡಿ ಉದುರಿಸಬೇಡಿ. ರಾಜ್ಯದ ಜನತೆ ಗೌರವವಾಗಿ ಬದುಕುವ ವಾತಾವರಣ ನಿರ್ಮಾಣ ಮಾಡಿ. ನಿಮ್ಮ ನಿಮ್ಮ ಚಡ್ಡಿ ಬಿಚ್ಚಿಕೊಳ್ಳಿ ತೊಂದರೆ ಇಲ್ಲಾ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರ ಬೀಳಿಸಿ ಅಭಿವೃದ್ಧಿ ಮಾಡುತ್ತೇವೆ ಅಂತಾ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 2018ರ ಚುನಾವಣೆ ಅತಂತ್ರ ಪರಿಸ್ಥಿತಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಯಿತು. ಆ ಸರ್ಕಾರ ತೆಗೆಯಲೇಬೇಕು ಅಂತಾ ಹಲವಾರು ತಿಂಗಳುಗಳ ಕಾಲ ಪ್ರೋಸೆಸ್ ನಡೆಯಿತು. ಹಣಕಾಸಿನ ಆಮಿಷದ ಬಗ್ಗೆ ಜನರ ಮುಂದೆ ಅಂದು ಇಟ್ಟಿದ್ದೇವು. ಇದಾದ ಬಳಿಕವೂ ಮೈತ್ರಿ ಸರ್ಕಾರ ತೆಗೆಯಲು ದೊಡ್ಡ ಮಟ್ಟದ ಕಸರತ್ತು ನಡೆದಿದ್ದವು. ಅವೆಲ್ಲವೂ ಈಗ ಮುಗಿದು ಹೋದ ಅಧ್ಯಾಯ ಎಂದರು.
ಶಿಕ್ಷಣ ಸಚಿವರು ನಾವೆಲ್ಲಾ ಮೂಲತಃ ಆರ್‌ಎಸ್‌ಎಸ್ ನವರು ಅಂತಾ ಹೇಳಿದ್ದಾರೆ. ಆರ್‌ಎಸ್‌ಎಸ್ ರಾಷ್ಟ್ರ ಭಕ್ತಿ, ಹಿಂದುತ್ವ ಹೆಸರಿನ ಹೈಜಾಕ್ ಪಡೆದು ಹೊರಟ್ಟಿದ್ದಾರೆ ಎಂದರು.
ಹೊಸ ಬದಲಾವಣೆ ತರಲು ಹಲವಾರು ಕುತಂತ್ರದ ಮೂಲಕ ಮೈತ್ರಿ ಸರ್ಕಾರ ಯಾರ್ಯಾರು ಸೇರಿ ತೆಗೆದರೋ ನನಗೆ ಆ ಸರ್ಕಾರ ಹೋಗಲಿ ಅಂತಾ ಆಗ ನಾನೇ ತೀರ್ಮಾನಕ್ಕೆ ಬಂದಿದ್ದೆ. ಅದರಿಂದಲೇ ನಾನು ಆಗ ಅಮೇರಿಕಾಕ್ಕೆ ಹೋಗಿದ್ದು. ನನಗೆ ಕೊಡುತ್ತಿದ್ದ ಹಿಂಸೆಗಳನ್ನು ನೋಡಿದ್ದೆ. ರೈತರ ಸಾಲಾ ಮನ್ನಾ ಮಾಡುವ ಟಾಸ್ಕ್ ನನ್ನ ಮೇಲಿತ್ತು, ಜನತೆಗೆ ಮಾತುಕೊಟ್ಟಿದೆ. ಆ ಕಾರ್ಯಕ್ರಮ ಪೂರೈಸಿದ ನಂತರ ನನಗೆ ಅದರಲ್ಲಿ ಆಸಕ್ತಿ ಉಳಿದಿರಲಿಲ್ಲ. ಕಾರಣ ಅವತ್ತು ಇದ್ದಂತ ಆ ಮೈತ್ರಿ ಸರ್ಕಾರದ ನಡುವಳಿಕೆಗಳು ಮನಸ್ಸಿನಲ್ಲಿ ಬೇಸರ ಇತ್ತು ಅದರಿಂದ ನಾನು ನಿರಾಸಕ್ತನಾಗಿದ್ದೆ. ಹೋದರೆ ಹೋಗಲಿ ಯಾಕೆ ಪ್ರತಿನಿತ್ಯ ಇಂತಹ ಒಂದು ಘಟನೆಗಳು ನಡೆಯಬೇಕು. ನಾನು ಯಾಕೆ ಇಷ್ಟೊಂದು ವ್ಯರ್ಥ ಕಸರತ್ತು ಮಾಡಬೇಕು ರಾಜ್ಯಕ್ಕೆ ಒಳ್ಳೆಯದು ಮಾಡೋದಾದ್ರೇ ಮಾಡಿಕೊಳ್ಳಲಿ ಅಂತಾ ನಾನು ನಿರ್ಧಾರಕ್ಕೆ ಬಂದು ಬಿಟ್ಟು ಬಿಟ್ಟೆ ಮತ್ತೆ ಪ್ರಯತ್ನ ಮಾಡಲು ನಾನು ಹೋಗಲಿಲ್ಲ. ಅದ್ರಲ್ಲಿ ಯಾರ ಯಾರ ಪಾತ್ರ ಎನೂ ಅದೆಲ್ಲಾ ಈಗ ಬೇಕಿಲ್ಲ ಎಂದರು.
ಬಿಜೆಪಿ ಪಕ್ಷ ಇಷ್ಟೆಲ್ಲಾ ಕುತಂತ್ರದ ಮುಖಾಂತರ ಬೆಟ್ಟಿಂಗ್ ದಂಧೆ ನಡೆಸುವವರ, ಬಡವರ ರಕ್ತ ಹೀರಿದಂತವರ ಪಾಪದ ಹಣದಿಂದ ಮೈತ್ರಿ ಸರ್ಕಾರ ತೆಗೆಯಲು ಉಪಯೋಗ ಮಾಡಿಕೊಂಡು ಸರ್ಕಾರ ರಚನೆ ಮಾಡಿಕೊಂಡರು. ನಾನು ಯಡಿಯೂರಪ್ಪ ಅವರಿಗೆ ಎಂದು ಆಕ್ರೋಶ ಭರಿತ ಮಾತುಗಳನ್ನು ಹೇಳಲಿಲ್ಲ ಸಲಹೆ ಕೊಟ್ಟೆ. ನಾಲ್ಕನೇ ಬಾರಿ ಮುಖ್ಯಮಂತ್ರಿ ಆಗಿದ್ದೀರಿ, ರಾಜಕಾರಣದಲ್ಲಿ ಕೊನೆ ಭಾಗದಲ್ಲಿದೀರಿ. ಒಳ್ಳೆಯ ಕೆಲಸ ಮಾಡಿ ಜನರ ಹತ್ತಿರ ಹೆಸರು ಮಾಡಿಕೊಳ್ಳಿ ಅಂದಿದ್ದೆ ಆದರೆ ನಡೆದ ಘಟನೆಗಳು ಪ್ರತಿಯೊಂದು ನಿಮ್ಮ ಗಮನಕ್ಕಿದೆ. ಇವತ್ತು ಪರ್ಸಂಟೇಜ್ ಬಗ್ಗೆ ಚರ್ಚೆ ಮಾಡ್ತಾರೆ ಎಂದರು.
ಬೆಳಗಾವಿಯಲ್ಲೇ ಒಂದು ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣ ನಡೆದು ಹೋಯಿತು. ಕಾಂಗ್ರೆಸ್ ನವರು ಒಂದು ರೀತಿ ಬಿಜೆಪಿಯವರು ಒಂದು ರೀತಿ ಅದನ್ನು ಬಳಕೆ ಮಾಡಿಕೊಂಡರು. ನಾನು ಅದಕ್ಕೆ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆ ಕೊಡಲಿಲ್ಲ. ಕಾಂಗ್ರೆಸ್ ನವರಿಗೆ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡುವ ನೈತಿಕತೆ ಇಲ್ಲಾ. ಅವರು ಗಾಜಿನ ಮನೆಯಲ್ಲಿ ಕುಳಿತುಕೊಂಡೇ ರಾಜ್ಯ ಆಳಿದವರು. ಬಿಜೆಪಿಯವರು ಅದನ್ನು ಮುಂದುವರಿಸಿಕೊಂಡು ಸ್ವಲ್ಪ ರೈಸ್ ಮಾಡಿಕೊಂಡರು. ಮೈತ್ರಿ ಸರ್ಕಾರ ತೆಗೆದು ಬಿಜೆಪಿಯವರು ಪರಿವರ್ತನೆ ಇದೇ ತಂದಿದ್ದು. ಗುತ್ತಿಗೆದಾರ ಪರಿಸ್ಥಿತಿ ಏನಾಗಿದೆ, ಸರ್ಕಾರದ ಹಣ ಯಾವ ರೀತಿ ಲೂಟಿ ಆಗುತ್ತಿದೆ ಎಂದು ಹೇಳಿದರು.