Advertisement
ಶಿವಮೊಗ್ಗ ಹೆಲಿಪ್ಯಾಡ್ ನಲ್ಲಿ ಮಾತಾನಾಡಿದ ಅವರು, ಕರ್ನಾಟಕದಲ್ಲಿ ಶಾಂತಿಪ್ರಿಯರು. ನಾವು ಯಾವುದೇ ಗಲಭೆಗಳಿಗೆ ಆಸ್ಪದ ಕೊಡಲಿಲ್ಲ. ಸರ್ಕಾರ ಮಾಡಲೇಬೇಕು ಎಂಬ ಏಳೆಂಟು ತಿಂಗಳ ಶ್ರಮದಿಂದ ಯಶಸ್ಸು ಕಂಡಿದ್ದರು. ಇಲ್ಲಿ ಸಹ ಸರ್ಕಾರ ಬೀಳಿಸಲು ಒಂದೂವರೆ ವರ್ಷದಿಂದ ಪ್ರಯತ್ನ ಮಾಡಿದ್ದರು. ಈಗ ಯಶಸ್ಸು ಕಂಡಿದ್ದಾರೆ. ಎಲ್ಲಿಗೆ ಹೋಗುತ್ತೇ ನೋಡೋಣ. ಕರ್ನಾಟಕದ ಪರಿಸ್ಥಿತಿ ಬೇರೆ, ಮುಂಬೈನ ಪರಿಸ್ಥಿತಿ ಬೇರೆ ಎಂದರು.
Related Articles
Advertisement
ಮಹಾರಾಷ್ಟ್ರದ ಆಪರೇಷನ್ ಕಮಲಕ್ಕೆ ರಾಜ್ಯದ ಬಿಜೆಪಿ ನಾಯಕರ ಪಾತ್ರ ಇದೆ ಎಂದು ಅನಿಸಲ್ಲ. ಅಷ್ಟು ದೊಡ್ಡ ಮುಖಂಡರು ನಮ್ಮ ರಾಜ್ಯದಲ್ಲಿ ಇದ್ದಾರೆ ಅನಿಸಲ್ಲ. ಅಲ್ಲಿ ಹೋಗಿ 40 ಜನ ಶಿವಸೇನೆ ಎಂಎಲ್ಎ ಗಳನ್ನು ಮನವೊಲಿಸಿ ಕರೆದುಕೊಂಡು ಹೋಗ್ತಾರಾ..? ಹೈಕಮಾಂಡ್ ನಲ್ಲೇ ಎಕ್ಸ್‌ಪರ್ಟ್ ಇದ್ದಾರೆ. ಅಮಿತ್ ಷಾ ಗಿಂತ ದೊಡ್ಡ ಮುಖಂಡರು ಆಪರೇಷನ್ ಮಾಡಲು ಬೇಡ ಎಂದರು.
ಸ್ಪಷ್ಟ ಬಹುಮತ ಇದ್ದರೂ ಸರ್ಕಾರ ಉಳಿಯುತ್ತಾ -ಇಲ್ವಾ ಎಂಬ ಅನುಮಾನ ಪ್ರಾರಂಭವಾಗಿದೆ. ಅದರ ಬದಲು ಚುನಾವಣೆನೇ ನಡೆಸೋದು ಬೇಡ. ನೀವ್ಯಾರು ಚುನಾವಣೆಗೆ ನಿಲ್ಲಬೇಡಿ. ನಮ್ಮದು ಈ ರೀತಿ ಇದೆ. ಅಜೆಂಡಾ ಹೀಗಿದೆ. ಮನೆ ಏಕೆ ಹಾಳು ಮಾಡಿಕೊಳ್ಳುತ್ತಿರಿ ಎಂದು ರೆಸಲ್ಯೂಶನ್ ಮಾಡಿಬಿಡಿ. ದೇಶದಲ್ಲಿ ನೋ ಎಲೆಕ್ಷನ್ ಎಂದು ತೀರ್ಮಾನ ಮಾಡಿಬಿಡಿ, ಮುಗಿದು ಹೋಗುತ್ತದೆ ನಾವೆಲ್ಲ ಸುಮ್ಮನೆ ದುಡ್ಡು ಕಳೆದುಕೊಂಡು, ಆರೋಗ್ಯ ಕೆಡಿಸಿಕೊಂಡು ಯಾಕೆ ಚುನಾವಣೆ ಬೇಕು. ಹಲವು ರಾಜಕೀಯ ಪಕ್ಷಗಳು ಬೀದಿ ಪಾಲಾಗೋದು ತಪ್ಪುತ್ತದೆ ನಿಷೇಧ ಮಾಡಿ. ಬಿಜೆಪಿಯಲ್ಲಿದ್ದರೇ ಮಾತ್ರ ಉಳಿಗಾಲ. ಇನ್ನುಳಿದವರಿಗೆ ಉಳಿಗಾಲ ಇಲ್ಲ ಹೀಗೆ ಲೋಕಸಭೆಯಲ್ಲಿ ಒಂದು ಬಿಲ್ ಪಾಸ್ ಮಾಡಿಬಿಡಿ. ಸುಲಭವಾಗುತ್ತದೆ. ಬೇರೆಯವರು ನೆಮ್ಮದಿಯಿಂದ ಬದುಕಬಹುದು ಎಂದ ಮಾಜಿ ಸಿಎಂ ಕುಮಾರಸ್ವಾಮಿ.