Advertisement

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲಿ ನೋಡೋಣ

06:45 AM Apr 08, 2018 | |

ಹುಬ್ಬಳ್ಳಿ: “ನಿಮ್ಮಪ್ಪನಾಣೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅದ್ಹೇಗೆ ಗೆಲ್ಲುತ್ತಿರೋ ನಾವೂ ನೋಡುತ್ತೇವೆ’

Advertisement

ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೀಗೆಂದು ಸವಾಲು ಹಾಕಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರದಲ್ಲಿದ್ದ ದುರಹಂಕಾರ ಹಾಗೂ ಮುಂದೆ ನಾವೇ ಗೆಲ್ಲೋದು ಎನ್ನುವ ಮದ ಸಿಎಂ ಅವರಲ್ಲಿದ್ದಂತಿದೆ. ಚಾಮುಂಡೇಶ್ವರಿಯಲ್ಲಿ ಅವರ ದುರಹಂಕಾರಕ್ಕೆ ತಕ್ಕ ಪಾಠ ಕಲಿಸಲು ವೇದಿಕೆ ಸಜ್ಜಗೊಂಡಿದೆ ಎಂದರು.

ಚಾಮುಂಡೇಶ್ವರಿಯಲ್ಲಿ ಗೆಲ್ಲುವುದಿಲ್ಲ ಎಂಬ ಸುಳಿವು ಮುಖ್ಯಮಂತ್ರಿಗೆ ದೊರೆತಿದೆ. ಈ ಕಾರಣಕ್ಕಾಗಿಯೇ ಗುಪ್ತದಳ ವರದಿ, ತಮ್ಮದೇ ಆಂತರಿಕ ವರದಿ ತರಿಸಿಕೊಳ್ಳುವ ಮೂಲಕ ಇನ್ನೊಂದು ಕ್ಷೇತ್ರಕ್ಕೆ ಲಗ್ಗೆಯಿಡಲು ಮುಂದಾಗಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಸುರಕ್ಷಿತವಲ್ಲ ಎಂದು ಹೇಳಿ ವರುಣಾ, ಬಸವಕಲ್ಯಾಣ, ಗಂಗಾವತಿ, ಶಾಂತಿನಗರ ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಗುಪ್ತದಳ ಇಲಾಖೆ ತಿಳಿಸಿದ ವರದಿ ಮುಖ್ಯಮಂತ್ರಿ ಹಾಗೂ ಗೃಹ ಕಚೇರಿಗೆ ಹೋಗಿದೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಅಧಿಕಾರದ ದುರುಪಯೋಗ ಇದಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದರು.

ಮೋದಿ ಹೆಸರಲ್ಲಿ ಮತ ಕೇಳ್ಳೋ ಸ್ಥಿತಿ: ಸೋಲಿನ ಭೀತಿಯಿಂದ ನಾನು ಎರಡು ಕಡೆ ಸ್ಪರ್ಧೆ ಮಾಡುತ್ತಿರುವುದಾಗಿ ಜಗದೀಶ ಶೆಟ್ಟರ್‌ ಆರೋಪಿಸಿದ್ದಾರೆ. ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವಂತೆ ಕಾರ್ಯಕರ್ತರ ಒತ್ತಡ ಇತ್ತು. ನಮ್ಮ ಕುಟುಂಬದಲ್ಲಿ ಇಬ್ಬರು ಮಾತ್ರ ಸ್ಪರ್ಧಿಸುವ ನಿರ್ಧಾರದ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಚನ್ನಪಟ್ಟಣದಲ್ಲಿ ಸ್ಪರ್ಧೆಗಿಳಿಯಬೇಕಿದೆ ಎಂದರು.

Advertisement

ಶೆಟ್ಟರ್‌ ಅವರು ಮುಖ್ಯಮಂತ್ರಿ ಸೇರಿದಂತೆ ಅನೇಕ ಹುದ್ದೆ ನಿಭಾಯಿಸಿದ್ದಾರೆ. ಐದು ಬಾರಿ ಗೆಲುವು ಸಾಧಿಸಿದ್ದಾರೆ. ಆದರೂ ಇಂದು ಕ್ಷೇತ್ರದಲ್ಲಿ ಮೋದಿ ಹೆಸರು ಹೇಳಿ ಮತಯಾಚಿಸುವ ಸ್ಥಿತಿ ಅವರಿಗೆ ಬಂದಿದೆ. ಹುಬ್ಬಳ್ಳಿ-ಧಾರವಾಡ ಸುತ್ತಮುತ್ತ ಅವರು ಏನೆಲ್ಲಾ ಮಾಡಿದ್ದಾರೆ ಗೊತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಮೋದಿಯವರು ಎರಡು ಕಡೆ ಸ್ಪರ್ಧೆ ಮಾಡಿದ್ದರಲ್ಲ, ಸೋಲಿನ ಭೀತಿಯಿಂದಲೇ ಎಂಬುದನ್ನು ಸ್ಪಷ್ಟಪಡಿಸಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next