Advertisement

ಭಾರತ್‌ ರಾಷ್ಟ್ರೀಯ ಮಂಚ್‌ ಒಕ್ಕೂಟ; ಕೆಸಿಆರ್‌ ಒಕ್ಕೂಟಕ್ಕೆ ಎಚ್‌ಡಿಕೆ ನಾಯಕ

01:02 AM Sep 13, 2022 | Team Udayavani |

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ತೃತೀಯರಂಗದ ಬದಲು ಪರ್ಯಾಯ ಒಕ್ಕೂಟ ರಚನೆಗೆ ತೆಲಂಗಾಣ ಸಿಎಂ ಚಂದ್ರಶೇಖರ್‌ರಾವ್‌ ಮುಂದಾಗಿದ್ದು, ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅದರ ನೇತೃತ್ವ ವಹಿಸುವರು.

Advertisement

ರೈತರು, ದಲಿತರು ಹಾಗೂ ಅಲ್ಪಸಂಖ್ಯಾಕರನ್ನು ಒಟ್ಟುಗೂಡಿಸಿ “ಭಾರತ್‌ ರಾಷ್ಟ್ರೀಯ ಮಂಚ್‌’ ಹೆಸರಿನಲ್ಲಿ ಪ್ರತೀ ವಿಧಾನಸಭೆ ಕ್ಷೇತ್ರದಲ್ಲೂ ಸಂಘಟನೆ ಮಾಡಲು ತೀರ್ಮಾನಿಸಲಾಗಿದೆ. ಇತ್ತೀ ಚೆಗೆ ಹೊಸದಿಲ್ಲಿ ಯಲ್ಲಿ ಬಿಹಾರ ಸಿಎಂ ನಿತೀಶ್‌ಕುಮಾರ್‌ ಹಾಗೂ ಹೈದರಾ ಬಾದ್‌ನಲ್ಲಿ ಕೆ. ಚಂದ್ರಶೇಖರ್‌ರಾವ್‌ ಜತೆಗಿನ ಮಾತುಕತೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ.

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದ ವಿಧಾನಸಭೆ ಹಾಗೂ 2024ರ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಈ ಹೊಸ ಸಂಘಟನೆ ಮೂಲಕ ಒಕ್ಕೂಟ ರಚನೆಗೆ ಪ್ರಾದೇಶಿಕ ಪಕ್ಷಗಳ ನಾಯಕರು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯಾರು ಯಾರು?
ಆಂಧ್ರಪ್ರದೇಶ ಸಿಎಂ ಜಗನ್‌, ತಮಿಳು ನಾಡು ಸಿಎಂ ಸ್ಟಾಲಿನ್‌, ಕೇರಳ ಸಿಎಂ ಪಿಣರಾಯಿ ವಿಜಯನ್‌, ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌, ಪಂಜಾಬ್‌ ಸಿಎಂ ಭಗವಂತ ಸಿಂಗ್‌ ಮಾನ್‌, ಎಸ್‌ಪಿ ಅಧ್ಯಕ್ಷ ಅಖೀಲೇಶ್‌ ಯಾದವ್‌, ಝಾರ್ಖಂಡ್‌ ಸಿಎಂ ಹೇಮಂತ್‌ ಸೊರೇನ್‌, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಆರ್‌ಜೆಡಿಯ ತೇಜಸ್ವಿ ಯಾದವ್‌, ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ ಹೀಗೆ ಪ್ರಾದೇಶಿಕ ಪಕ್ಷಗಳ ನಾಯಕ ರನ್ನು ಒಂದೆಡೆ ತರುವ ಪ್ರಯತ್ನ ಇದು ಎಂದು ಹೇಳಲಾಗಿದೆ.

ಕೆ.ಸಿ.ಚಂದ್ರಶೇಖರ್‌ ರಾವ್‌ ಹಾಗೂ ಎಚ್‌.ಡಿ.ಕುಮಾರಸ್ವಾಮಿಯವರು ಮಂಚ್‌ನ ನೇತೃತ್ವ ವಹಿಸುವರು. ವಿಧಾನಮಂಡಲ ಅಧಿ ವೇಶನದ ಅನಂತರ ಎಚ್‌.ಡಿ. ಕುಮಾರಸ್ವಾಮಿ ತಮಿಳುನಾಡು ಸಿಎಂ ಸ್ಟಾಲಿನ್‌ ಅವರನ್ನು ಭೇಟಿ ಮಾಡು ವರು. ಒಕ್ಕೂಟದ ಬಗ್ಗೆ ಅಕ್ಟೋಬರ್‌-ನವೆಂಬರ್‌ ವೇಳೆಗೆ ಸ್ಪಷ್ಟ ರೂಪ ತಾಳಲಿದೆ. ದಿಲ್ಲಿ ಯಲ್ಲಿ ಮುಂದಿನ ತಿಂಗಳು ಈ ಕುರಿತು ಮಹತ್ವದ ಸಭೆ ನಡೆಯಲಿದ್ದು, ಪ್ರಾದೇಶಿಕ ಪಕ್ಷಗಳ ಮುಖ್ಯಮಂತ್ರಿ ಗಳು ಹಾಗೂ ಮುಖಂಡರು ಭಾಗ ವಹಿಸುವರು. ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡರು ಪಾಲ್ಗೊಳ್ಳುವರು ಎಂದು ತಿಳಿದು ಬಂದಿದೆ.

Advertisement

ಕೆಸಿಆರ್‌ ಸಾಥ್‌
ಮುಂದಿನ ವಿಧಾನಸಭೆ ಚುನಾ ವಣೆಯಲ್ಲಿ ಜೆಡಿಎಸ್‌ಗೆ ಕೆ.ಸಿ. ಚಂದ್ರಶೇಖರ್‌ ರಾವ್‌ ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆ ಗಳಲ್ಲಿ ಸಾಥ್‌ ನೀಡಲಿದ್ದು, ಜೆಡಿಎಸ್‌ ಅಭ್ಯರ್ಥಿಗಳ ಗೆಲುವಿಗೆ ಪ್ರತಿ ಕ್ಷೇತ್ರಕ್ಕೆ ಒಬ್ಬೊಬ್ಬ ಶಾಸಕ ಹಾಗೂ ಮುಖಂಡ ರನ್ನು ವೀಕ್ಷಕರನ್ನಾಗಿ ನೇಮಿಸುವ ಭರವಸೆ ನೀಡಿದ್ದಾರೆ. ಕೆಸಿಆರ್‌ ಸಲಹೆ ಮೇರೆಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪ್ರಶಾಂತ್‌ ಕಿಶೋರ್‌ ಬಳಿ ಸಲಹೆ ಪಡೆದು ಪ್ರತಿ ಕ್ಷೇತ್ರದ ಸಮೀಕ್ಷೆ ನಡೆಸಲು ಜೆಡಿಎಸ್‌ ತೀರ್ಮಾನಿಸಿದೆ.

ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಮಾಡಿರುವ ಆಂತರಿಕ ಸಮೀಕ್ಷೆಯಲ್ಲಿ 75 ರಿಂದ 80 ಸ್ಥಾನದ ಗೆಲುವಿನ ಸಾಧ್ಯತೆ ಕಂಡುಬರುತ್ತಿರುವ ಹಿನ್ನೆಲೆ ಯಲ್ಲಿ ಜೆಡಿಎಸ್‌ ಸಹ ಪ್ರತ್ಯೇಕವಾಗಿ ಸಮೀಕ್ಷೆಗೆ ಮುಂದಾಗಿದೆ ಎನ್ನ ಲಾಗಿದೆ.

ರಾಷ್ಟ್ರ ರಾಜಕಾರಣದತ್ತ ಹೋಗುತ್ತಾರಾ ಎಚ್‌ಡಿಕೆ?
2023ರ ವಿಧಾನಸಭೆ ಚುನಾವಣೆ ಬಗ್ಗೆ ತುಂಬಾ ನಿರೀಕ್ಷೆ ಇಟ್ಟು ಕೊಂಡಿ ರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆ ಫ‌ಲಿತಾಂಶವನ್ನು ಆಧರಿಸಿ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುವ ಸಂಭವವಿದೆ. ಭವಿಷ್ಯದ ದೃಷ್ಟಿಯಿಂದ ರಾಷ್ಟ್ರ ರಾಜಕಾರಣದತ್ತ ಬರುವಂತೆ ಪ್ರಾದೇಶಿಕ ಪಕ್ಷಗಳ ನಾಯಕರು ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ ಕುಮಾರಸ್ವಾಮಿಯವರು ವಿಧಾನಸಭೆ ಚುನಾ ವಣೆ ಅನಂತರ ತೀರ್ಮಾನಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

-ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next