Advertisement
ನೂರು ಸಿದ್ದರಾಮಯ್ಯ ಬಂದರೂ ಏನೂ ಮಾಡಲಾಗದು ಎಂದು ಕುಮಾರಸ್ವಾಮಿ ಹೇಳುತ್ತಾರೆ; ಅವರು ಒಬ್ಬ ಜಮೀರ್‌ನನ್ನು ಎದುರಿಸಲಿ ಸಾಕು ಎಂದು ಸವಾಲು ಹಾಕಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ನಾನು ಎರಡು ಬಸ್‌ಗಳಿಗೆ ಒಂದೇ ನಂಬರ್ ಪ್ಲೇಟ್ ಹಾಕಿ ಓಡಿಸುತ್ತಿದ್ದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಹಾಗಿದ್ದರೆ ನನ್ನನ್ನು ನಿಮ್ಮ ಜತೆ ಹೇಗೆ ಇಟ್ಟುಕೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
Related Articles
ಹಾವೇರಿ: ಕುಮಾರಸ್ವಾಮಿ ಕೇಂದ್ರ ಸಚಿವರು. ಅವರ ಹುದ್ದೆಗೆ ತಕ್ಕಂತೆ ಯಾರಾದರೂ ಐಪಿಎಸ್ ಅಧಿ ಕಾರಿ ಹೋಗಿ ಪ್ರಶ್ನೆ ಮಾಡುತ್ತಾರೆ. ಕಾನ್‌ಸ್ಟೆಬಲ್ ಹೋಗಿ ಬಂಧಿಸಲಾಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಯಾರೂ ಯಾರನ್ನೂ ಹೆದರಿಸಲು ಆಗುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ಹೇಳಿದರು.
Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಡಾ ಪ್ರಕರಣದ ಕುರಿತು ಆರೋಪ, ಪ್ರತ್ಯಾರೋಪ ಆಗುತ್ತಿವೆ. ಈ ಬಗ್ಗೆ ದೇಸಾಯಿ ಆಯೋಗ ನೇಮಕವಾಗಿದೆ. ಆಯೋಗ ವರದಿ ಕೊಟ್ಟ ಅನಂತರ ವೈಟ್ನರ್ ಹಚ್ಚಿದ್ದಾರಾ? ಶಾಯಿ ಹಾಕಿದ್ದಾರಾ? ಎಂಬುದು ಗೊತ್ತಾಗುತ್ತದೆ ಎಂದರು. ರಾಜ್ಯಪಾಲರನ್ನು ನಾವು ಅವಮಾನಿಸಿಲ್ಲ, ರಾಜ್ಯಪಾಲರು ಸಂವಿಧಾನಕ್ಕೆ ಅವಮಾನ ಆಗುವ ರೀತಿ ನಡೆದು ಕೊಂಡರೆ ಸಂವಿಧಾನದ ಚೌಕಟ್ಟಿನಲ್ಲಿ ಪ್ರತಿಭಟನೆ ನಮ್ಮ ಹಕ್ಕು ಎಂದರು.