ವಿಜಯಪುರ : ಒಂದು ಬಾರಿ ಸಿದ್ದರಾಮಯ್ಯ ಸಿಎಂ ಆಗದಂತೆ ನಾನೆ ತಡೆದೆ. ದೇವೇಗೌಡರು ಪ್ರಧಾನಿಯಾದ ಬಳಿಕ ಅಂದು ಸಿದ್ದರಾಮಯ್ಯ ಒಂದು ಸಭೆ ಮಾಡಿ ಜೆ.ಹೆಚ್.ಪಟೇಲ್ ಅವರನ್ನು ರಾಜ್ಯಪಾಲರಾಗಿ ರಾಜಕೀಯದಿಂದ ದೂರ ಕಳಿಸುವ ಹುನ್ನಾರ ನಡೆಸಿದ್ದರು. ಆದರೆ ಆಗ ಮಧ್ಯ ಪ್ರವೇಶಿಸಿದ ನಾನು ಅದನ್ನು ತಡೆದೆ. ಇದನ್ನು ವಿಧಾನಸಭೆಯಲ್ಲೇ ಹೇಳಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜಕೀಯದ ಹಳೆಯ ಇತಿಹಾಸ ಕೆದಕಿದರು.
ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 1994 ರಲ್ಲಿ ಜನತಾದಳ ಅಧಿಕಾರಕ್ಕೆ ಬರುವಲ್ಲಿ ಸಿದ್ದರಾಮಯ್ಯ ಅವರಿಗಿಂತ ನನ್ನ ಕೊಡುಗೆಯೇ ಹೆಚ್ಚು. ನಾನು ರಾಜಕಾರಣದಿಂದ ದೂರ ಇದ್ದರೂ ಸಹ ನನ್ನದೇ ಆದ ರೀತಿಯಲ್ಲಿ ಕೆಲಸ ಮಾಡಿದ್ದೆ. ಹೀಗಾಗಿ ಅಂದು ಜನತಾದಳ ಅಧಿಕಾರಕ್ಕೆ ತರುವಲ್ಲಿ ಸಿದ್ದರಾಮಯ್ಯಗಿಂತ ನನ್ನ ಕೊಡುಗೆ ಹೆಚ್ಚಿದೆ ಎಂದು ತಮ್ಮನ್ನು ಸಮರ್ಥಿಸಿಕೊಂಡರು.
ಬಳಿಕ ಸಿದ್ದರಾಮಯ್ಯ ಅವರಂಥವರು ಬೆನ್ನಿಗೆ ಚೂರಿಹಾಕಿ, ನಮಗೆ ಟೋಪಿ ಹಾಕಿ ಹೋದರೂ ಜೆಡಿಎಸ್ ಉಳಿದಿದ್ದು ನಾನು ಸಿಎಂ ಆಗಿ ಮಾಡಿರೋ ಕೆಲಸಗಳಿಂದ. ಕಾಂಗ್ರೆಸ್ ಜೊತೆಗಿನ ನನ್ನ ಮೈತ್ರಿ ಸರ್ಕಾರ ಪತನವಾದಾಗ ನಾನು ಅಮೆರಿಕಾದಲ್ಲಿದ್ದೆ. ಜಾರ್ಜ್ ಹಾಗೂ ಭೈರತಿ ಬಸವರಾಜ್ ನಡುವಿನ ವೈಮನಸ್ಸಿನ ಜಗಳ ಬಗೆಹರಿಸಲು ಸಾಧ್ಯವಿದ್ದರೂ ಸಿದ್ಧರಾಮಯ್ಯ ಈ ಬಗ್ಗೆ ಮನಸ್ಸು ಮಾಡದೇ ನನ್ನ ಸರ್ಕಾರದ ಪತನಕ್ಕೆ ಕಾರಣವಾದರು ಎಂದರು ಆರೋಪಿಸಿದರು.
ಇದನ್ನೂ ಓದಿ :ಸಬ್ ಮರೈನ್ ಮಾಹಿತಿ ಸೋರಿಕೆ; ನೌಕಾಪಡೆ ಕಮಾಂಡರ್ ಹಾಗೂ ಇಬ್ಬರು ನಿವೃತ್ತ ಅಧಿಕಾರಿಗಳ ಸೆರೆ
ಶಾಸಕರ ಅಸಮಾಧಾನ ತನೀಸಲು ಸಂಪುಟ ಸಂಪೂರ್ಣ ಪುನರ್ ರಚನೆ ಕುರಿತು ನಾನು ಪ್ರಸ್ತಾಪಿಸಿದಾಗ ಇದೇ ಸಿದ್ದರಾಮಯ್ಯ ಟವಲ್ ಕೊಡವಿ ಎದ್ದು ಹೋದರು. ಇಂದು ಸಿದ್ದರಾಮಯ್ಯ ನನ್ನ ರಾಜಕೀಯ ಗುರುಗಳು ಎನ್ನುವ ವ್ಯಕ್ತಿಯೇ ಅಂದು ನನಗೆ ಫೆÇೀನ್ ಮಾಡಿ ಗೋಪಲಯ್ಯನ ನಾನೇ ಕಳುಹಿಸಿದ್ದೇನೆ ಅಂತ ತೊಂದರೆ ನೀಡಿದರು ಎಂದು ಹೆಸರು ಹೇಳದೇ ಜಮೀರ ಅಹ್ಮದ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ದೇವೇಗೌಡರು ಮುಖ್ಯಮಂತ್ರಿ ಆಗುವ ವೇಳೆ ಸಿದ್ದರಾಮಯ್ಯ ಜನತಾದಳದ ಕಚೇರಿಗೆ ಬಂದಿರಲಿಲ್ಲ. ಅಂದು ಅವರು ಯಾವುದೇ ಖಾಸಗಿ ಹೊಟೇಲ್ ನಲ್ಲಿ ಹೋಗಿ ಕುಳಿತಿದ್ರು. ದೇವೇಗೌಡರ ನಾನೇ ಸಿಎಂ ಮಾಡಿದ್ದು ಅಂತ ಸಿದ್ದರಾಮಯ್ಯ ಹೇಳೋದಾದರೆ ದೇವೇಗೌಡರು ಪ್ರಧಾನಿಯಾಗಿ ಹೋದಾಗ ಇವರೇಕೆ ಸಿಎಂ ಆಗಲು ಸಾಧ್ಯವಾಗಲಿಲ್ಲ. ಅವರ ಜೊತೆ ಎಷ್ಟು ಶಾಸಕರಿದ್ರು ನಾನು ಅಂದು ಮಾಡಿದ ಪ್ರಯತ್ನದಿಂದ ಪಕ್ಷ ಅಧಿಕಾರಕ್ಕೆ ಬಂತು. ದೇವೇಗೌಡರ ಮುಖ್ಯಮಂತ್ರಿ ಮಾಡಿದ್ದೇ ನಾವು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.