Advertisement
– ಉಪ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಜೆಡಿಎಸ್‌ನಲ್ಲಿ ಶುರುವಾಗಲಿದೆ ಎನ್ನಲಾದ ರಾಜೀನಾಮೆ ಪರ್ವದ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ಇದು.
Related Articles
Advertisement
“ಪಕ್ಷಕ್ಕೆ ಡ್ಯಾಮೇಜ್ ಮಾಡ್ಬೇಡಿ’ಈ ಪಕ್ಷದಿಂದ ಸಾಕಷ್ಟು ಪಡೆದುಕೊಂಡಿದ್ದೀರಿ. ದುಡಿಮೆ ಮಾಡಿಕೊಂಡಿದ್ದೀರಾ. ಹಾಗಾಗಿ, ಪಕ್ಷಕ್ಕೆ ಡ್ಯಾಮೇಜ್ ಮಾತ್ರ ಮಾಡಬೇಡಿ ಎಂದು ಇದೇ ವೇಳೆ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು. “ಕೆಲ ಭಾಗಗಳನ್ನು ಕಡೆಗಣಿಸಿದ್ದೇನೆ ಎಂಬ ಆರೋಪ ಕೆಲವರು ಮಾಡುತ್ತಾರೆ. ಆದ್ದರಿಂದ ನೀವೇ ಯಾರಾದರೂ ರಾಜ್ಯ ಘಟಕದ ಅಧ್ಯಕ್ಷರಾಗಬಹುದು. ಮುಂದೆ ಒಂದು ವೇಳೆ ಪಕ್ಷವೇನಾದರೂ ಅಧಿಕಾರಕ್ಕೆ ಬಂದರೆ, ಮುಖ್ಯಮಂತ್ರಿಯೂ ನಿಮ್ಮಲ್ಲಿಯೇ ಯಾರಾದರೂ ಆಗಲಿ. ನನ್ನದೇನೂ ಅಭ್ಯಂತರವಿಲ್ಲ. ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ. ನೀವೂ (ಮುಖಂಡರು) ಈ ಪಕ್ಷದ ಕಾರ್ಯಕರ್ತರಿದ್ದೀರಿ ಹಾಗೂ ಸಾಕಷ್ಟು ಪಡೆದುಕೊಂಡಿದ್ದೀರಿ. ಪಕ್ಷಕ್ಕೆ ಹಾನಿ ಮಾತ್ರ ಮಾಡಬೇಡಿ’ ಎಂದರು. ಅನುದಾನ ಕೊಡುವಾಗ ಪ್ರಾಮುಖ್ಯತೆಯನ್ನು ನೋಡಿ ಕೊಡಬೇಕು. ನಾನು ಮಂಡಿಸಿದ ಬಜೆಟ್‌ಗೆ ಇದೇ ಸರ್ಕಾರವು ಸದನದಲ್ಲಿ ಅನುಮತಿ ಪಡೆದಿದೆ. ಈಗ ಅದರಲ್ಲಿನ ಕಾರ್ಯಕ್ರಮಗಳನ್ನು ರದ್ದು ಮಾಡಿ, ಬೇರೆ ಕಡೆ ಕೊಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯೇ? ಬಜೆಟ್‌ನಲ್ಲಿ ನೀಡಿದ ಅನುದಾನ ಆ ಕ್ಷೇತ್ರಕ್ಕೆ ಹೊರತು, ಅಲ್ಲಿನ ಶಾಸಕರಿಗಲ್ಲ. ಅಷ್ಟಕ್ಕೂ ಬಿಜೆಪಿ ಸರ್ಕಾರವು ತನ್ನ ಪಕ್ಷದಿಂದ ಅನುದಾನ ನೀಡುತ್ತಿಲ್ಲ. ಜನರ ತೆರಿಗೆ ಹಣವನ್ನು ಹಂಚಿಕೆ ಮಾಡುತ್ತಿದೆ ಎಂಬುದು ನೆನಪಿರಲಿ ಎಂದು ಸೂಚ್ಯವಾಗಿ ಹೇಳಿದರು. “ಮಂಡ್ಯದಲ್ಲಿ ಅರಳಿದ ಕಮಲ ಮುಂದೆ ಮುದುಡಲೂಬಹುದು’ ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು. ಮಂಡ್ಯದಲ್ಲಿ ಹಲವು ವರ್ಷಗಳ ಹಿಂದೆ ಕಾಂಗ್ರೆಸ್ ಗೆದ್ದಿತ್ತು. ನಂತರ ಅಲ್ಲಿ ಜೆಡಿಎಸ್ ಗೆಲುವು ಸಾಧಿಸುತ್ತಾ ಬಂದಿತು. ಅಷ್ಟೇ ಯಾಕೆ, ನಂಜನಗೂಡ, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೂ ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಲಿಲ್ಲವೇ. ಹಾಗಾಗಿ, ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಈಗ ಮೊದಲ ಬಾರಿ ಮಂಡ್ಯದಲ್ಲಿ ಕಮಲ ಅರಳಿರಬಹುದು. ಹಾಗೆ ಅರಳಿದ್ದು ಮುದುಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.