Advertisement

ರಾಜ್ಯೋತ್ಸವ ಹತ್ತಿರಕ್ಕೆ ಬಂದ ವೇಳೆ ಎಂಇಎಸ್ ಪುಂಡಾಟಿಕೆ ಶುರು ಮಾಡಿದೆ : HDK

07:59 AM Oct 27, 2021 | Team Udayavani |

ಬೆಂಗಳೂರು : ಕಳೆದ ಹಲವು ಚುನಾವಣೆಗಳಲ್ಲಿ ರಾಜಕೀಯವಾಗಿ ಮುಖಭಂಗ ಅನುಭವಿಸಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ- ಎಂಇಎಸ್, ಈಗ ಕನ್ನಡ ರಾಜ್ಯೋತ್ಸವ ಹತ್ತಿರಕ್ಕೆ ಬಂದ ಸಂದರ್ಭದಲ್ಲೇ ಪುಂಡಾಟಿಕೆ ಶುರು ಮಾಡಿದೆ. ಕನ್ನಡ ಅಸ್ಮಿತೆಯನ್ನೇ ಕೆಣಕುವ, ಕನ್ನಡಿಗರನ್ನು ಅಪಮಾನಿಸುವ ಹೇಯ ಕೆಲಸಕ್ಕೆ ಮುಂದಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ.

Advertisement

ಕೆಲ ದಿನಗಳಿಂದ ಬೆಳಗಾವಿಯಲ್ಲಿ ಕನ್ನಡಿಗರನ್ನು ಎಂಇಎಸ್ ವಿನಾಕಾರಣ ಕೆಣಕುತ್ತಿದೆ. ಪ್ರತಿಭಟನೆಯ ವೇಳೆ ಕರ್ನಾಟಕ ಸರಕಾರವನ್ನು ಎಂಇಎಸ್ ಪುಂಡರು ಗೇಲಿ ಮಾಡಿದ್ದಾರೆ.

ಅಲ್ಲಿನ ಸರಕಾರಿ ಕಚೇರಿಗಳಲ್ಲಿ ದಾಖಲೆಗಳನ್ನು ಮರಾಠಿ ಭಾಷೆಯಲ್ಲೇ ಕೊಡಬೇಕು ಎಂದು ಒತ್ತಾಯಿಸುವ ಭರದಲ್ಲಿ ಕರ್ನಾಟಕ ಸರಕಾರವನ್ನು ʼನಾಲಾಯಕ್ʼ ಎಂದು ಕರೆದು ʼಜೈ ಮಹಾರಾಷ್ಟ್ರʼ ಎಂದು ಘೋಷಣೆ ಕೂಗಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಖಂಡನೀಯ ಎಂದರು.

ರಾಜಕೀಯವಾಗಿ ಮೂಲೆಗುಂಪಾಗಿರುವ ಎಂಇಎಸ್ , ತಮ್ಮ ಅಸ್ತಿತ್ವಕ್ಕಾಗಿ ಬೆಳಗಾವಿಯಲ್ಲಿ ಗೊಂದಲ, ಗದ್ದಲ ಉಂಟು ಮಾಡುತ್ತಿದೆ. ಭಾಷಾ ಭ್ರಾತೃತ್ವ, ಸ್ನೇಹಶೀಲತೆ ಹಾಗೂ ಶಾಂತಿ ಸಹನೆಗೆ ಹೆಸರಾಗಿರುವ ಕುಂದಾ ನಗರಿಯ ಪ್ರತಿಷ್ಠೆಯನ್ನು ಹಾಳು ಮಾಡುವ ದುರುದ್ದೇಶ ಇವರಿಗಿದೆ.

ನಾಡು ನುಡಿಯ ವಿಷಯದಲ್ಲಿ ರಾಜ್ಯ ಸರಕಾರ ಅಲಕ್ಷ್ಯ ಮಾಡಲೇಬಾರದು. ಕನ್ನಡವನ್ನು ಅಪಮಾನಿಸುವ ಈ ಪುಂಡರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ನಾನು ಸರಕಾರವನ್ನು ಒತ್ತಾಯ ಮಾಡುತ್ತೇನೆ ಎಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next