Advertisement
ತಾಲೂಕಿನ ಮಂಚೇಗೌಡನಹಳ್ಳಿ ಹಾಡಿಯ ಹಾಡಿಯ ಶಿವಮ್ಮ (45) ಮತ್ತು ವಿದ್ಯಾರ್ಥಿನಿ ರೀನಾ (21) ತೀವ್ರವಾಗಿ ಗಾಯಗೊಂಡವರು. ನೆರೆಯ ಹುಣಸೂರು ತಾಲೂಕಿನ ಶುಂಠಿ ಕೆಲಸಕ್ಕಾಗಿು 4 ಮಂದಿ ಪ್ರಯಾಣಿಕರಿಗೆ ಪರವಾನಗಿ ಇರುವ ಆಟೋ ರಿಕ್ಷಾದಲ್ಲಿ 12 ಮಂದಿ ಕೂಲಿ ಕಾರ್ಮಿಕ ಮಹಿಳೆಯರು ಮತ್ತು ಅದೇ ಹಾಡಿಯ ಮತ್ತೂಬ್ಬ ಪದವಿ ವಿದ್ಯಾರ್ಥಿನಿ ರೀನಾ ಇದ್ದಳು. ತಾರಕ ಸೇತುವೆ ಬಳಿ ಆಟೋ ಸಂಚರಿಸುತ್ತಿದ್ದಾಗ ರಾಸು ಅಡ್ಡ ಬಂದಾಗ ಅವಘಡ ಸಂಭವಿಸಿದೆ.
Related Articles
Advertisement
ತಾಲೂಕಿನಲ್ಲಿ ಬಹುಸಂಖ್ಯೆಯಲ್ಲಿ ಕೂಲಿ ಕಾರ್ಮಿಕರಿದ್ದು, ಪ್ರತಿದಿನ ಕೂಲಿ ಕೆಲಸಕ್ಕಾಗಿ ನೆರೆಯಕೊಡಗು,ಕೇರಳ ಸೇರಿದಂತೆ ಜಿಲ್ಲೆಯ ವಿವಿಧೆಡೆ ತೆರಳುತ್ತಾರೆ. ಒಂದು ದಿನಕ್ಕೆ 200 ರೂ. ಕೂಲಿ ನೀಡಲಾಗುತ್ತಿದೆ. ಪ್ರತಿದಿನ ಕೂಲಿ ಕಾರ್ಮಿಕರಿರುವ ಸ್ಥಳಕ್ಕೇ ಆಟೋರಿಕ್ಷಾ, ಗೂಡ್ಸ್ ಆಟೋ, ವಿಂಗರ್, ತೂಫಾನ್ ವಾಹನಗಳು ಬಂದು ಅವರನ್ನು ಬೆಳಗ್ಗೆ ತುಂಬಿಕೊಂಡು ಹೋಗಿ ಕೆಲಸ ಮುಗಿದ ನಂತರ ಸಂಜೆ ಮನೆಗೆ ವಾಪಸ್ ತಲುಪಿಸುತ್ತಿವೆ. ಆದರೆ, ಯಾವುದೇ ಸುರಕ್ಷತಾ ಕ್ರಮಗಳಿಲ್ಲದೇ ಕುರಿ ತುಂಬಿದಂತೆ ಮಹಿಳೆಯನ್ನು ತುಂಬಿಕೊಂಡು ಸಂಚರಿಸಲಾಗುತ್ತಿದೆ. ಐದಾರು ಮಂದಿ ಮಾತ್ರ ಸಂಚರಿಸಬಹುದಾದ ವಾಹನಗಳಲ್ಲಿ 25 ರಿಂದ 30 ಮಂದಿ ಪ್ರಯಾಣಿ ಕರನ್ನೂ ಸಾಗಿಸುತ್ತಿರುವುದು ಈ ಭಾಗದಲ್ಲಿ ಸಾಮಾನ್ಯವಾಗಿದೆ. ಕಿಕ್ಕಿರಿದು ಜನರನ್ನು ವಾಹನಗಳಲ್ಲಿ ತುಂಬಿ ಸಾಗಿಸುತ್ತಿದ್ದರೂ ಯಾವುದೇ ಕ್ರಮವಿಲ್ಲ ಎಚ್.ಡಿ.ಕೋಟೆ ಪಟ್ಟಣದ ಮಾರ್ಗವಾಗಿ ಪ್ರತಿದಿನ ಮುಂಜಾನೆ ಮತ್ತು ಸಂಜೆಕಿಕ್ಕಿರಿದುಕಾರ್ಮಿಕರನ್ನು ತುಂಬಿಕೊಂಡಿರುವ ವಾಹನಗಳು ಸಂಚರಿಸುತ್ತಲೇ ಇರುತ್ತವೆ. ಜೀವನೋಪಾಯಕ್ಕಾಗಿ ಕೂಲಿ ಕೆಲಸ ಅನಿವಾರ್ಯ ಇರುವುದರಿಂದಕಾರ್ಮಿಕರುಕೂಡ ಹೀಗೆ ಸಂಚರಿಸುವುದು ಸಾಮಾನ್ಯವಾಗಿದೆ. ಈ ರೀತಿ ಮನಬಂದಂತೆ ಜನರನ್ನು ತಂಬುವ ವಾಹನಗಳನ್ನುಕಟ್ಟುನಿಟ್ಟಾಗಿ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿಲ್ಲ. ನೆಪ ಮಾತ್ರಕ್ಕೆ ಆಗಾಗ ಒಂದೆರಡು ವಾಹನಗಳನ್ನು ಹಿಡಿದು ದಂಡ ವಿಧಿಸಲಾಗುತ್ತಿದೆ. ಹೀಗಾಗಿ ವಾಹನಗಳ ಮಾಲೀಕರು ಜನರನ್ನುಕುರಿಯಂತೆ ತುಂಬಿಸಿಕೊಂಡು ದೂರದಊರುಗಳಿಗೆ ಸಾಗಿಸುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು, ಈ ಕುರಿತು ಗಂಭೀರವಾಗಿ ಚಿಂತಿಸಿ ಈ ರೀತಿಯ ವಾಹನಗಳ ವಿರುದ್ಧಕ್ರಮಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಕೂಲಿ ಕಾರ್ಮಿಕರನ್ನು ಮಿತಿ ಮೀರಿ ತುಂಬುತ್ತಿರುವಕುರಿತು ಅಕ್ಟೋಬರ್27ರಂದು ಉದಯವಾಣಿಯಲ್ಲಿ “ಕುರಿಯಂತೆಕೂಲಿಯಾಳುಗಳ ತುಂಬಿ ಸಾಗಣೆ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ಆ ಸಂದರ್ಭದಲ್ಲಿ3-4 ವಾಹನಗಳಿಗೆ ನೆಪಮಾತ್ರಕ್ಕೆ ದಂಡ ವಿಧಿಸಿದ್ದ ಪೊಲೀಸರು ಮತ್ತೆ ವಾಹನಗಳುಕಂಡರೂ ಕಾಣದಂತೆ ಮೌನಕ್ಕೆ ಶರಣಾಗಿದ್ದರು. ಹೀಗಾಗಿ ವಾಹನಗಳ ಮಾಲೀಕರುಕೂಲಿ ಕಾರ್ಮಿಕರನ್ನು ಮಿತಿ ಮೀರಿದ ಸಂಖ್ಯೆಯಲ್ಲಿ ತುಂಬಿಕೊಂಡು ಸಾಗಿಸುತ್ತಿರುವುದು ಸಾಮಾನ್ಯವಾಗಿದೆ.