Advertisement
ದಿಲ್ಲಿಯಲ್ಲಿ ಮಾತನಾಡಿದ ಅವರು, ಇಬ್ಬರು ಮಾಜಿ ಮುಖ್ಯಮಂತ್ರಿಗಳ ನಡುವೆ ಏನೆಲ್ಲಾ ನಡೆಯುತ್ತಿದೆ ಎಂಬುದು ನಮಗೆ ಗೊತ್ತಿದೆ. ಇಬ್ಬರೂ ಒಂದು ಒಪ್ಪಂದಕ್ಕೆ ಬಂದಿದ್ದಾರೆ. ನಮಗೆ ಎರಡೂ ರಾಷ್ಟ್ರೀಯ ಪಕ್ಷಗಳ ಸಹವಾಸ ಬೇಡ’ ಎಂದಿರುವುದು ರಾಜ್ಯ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.ಹಾಸನ ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಲ್ಲಿ ಏನೂ ಸಮಸ್ಯೆ ಇಲ್ಲ. ಅದು ನನ್ನ ಸ್ವಂತ ಜಿಲ್ಲೆ, ಬೇರೆಯವರು ತಲೆಬಿಸಿ ಮಾಡಿಕೊಳ್ಳಬೇಕಿಲ್ಲ. ನಾನು ಬಗೆಹರಿಸುವೆ ಎಂದರು.
ದೇವೇಗೌಡರ ದಿಢೀರ್ ದಿಲ್ಲಿ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಗೌಡರು ಇತ್ತೀಚೆಗಷ್ಟೇ ದಿಲ್ಲಿಗೆ ಹೋಗಿ ಹಲವು ಮುಖಂಡರ ಜತೆ ಸಮಾಲೋಚನೆ ನಡೆಸಿದ್ದರು. ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಇಬ್ಬರಿಗೂ ತಮ್ಮ ಜೀವನ ಕಥೆಯ ಪುಸ್ತಕ ಸಹ ನೀಡಿದರು. ಆತ್ಮಕಥೆ ಪುಸ್ತಕವನ್ನು ಸಂಸದರಿಗೆ ಕೊಡಬೇಕಿತ್ತು. ಶೇ. 90ರಷ್ಟು ಮಂದಿಗೆ ಕೊಟ್ಟಿದ್ದೇನೆ. ರಾಷ್ಟ್ರಪತಿ, ಸ್ಪೀಕರ್‌ಗೂ ಕೊಟ್ಟಿದ್ದೇನೆ. ಪ್ರಧಾನಿಯವರಿಗೆ ಕೊಡಲು ಸಾಧ್ಯವಾಗಲಿಲ್ಲ. ಚುನಾವಣೆ ಮುಗಿದ ಮೇಲೆ ಕೊಡುತ್ತೇನೆ. ಕೇಂದ್ರ ಸಚಿವರ ಸಹಿತ ಎಲ್ಲರಿಗೂ ನಾನೇ ಸಹಿ ಮಾಡಿ ಕೊಟ್ಟಿದ್ದೇನೆ. ನಾನು ಯಾವ ಮೈತ್ರಿ ಬಗ್ಗೆಯೂ ಯಾರ ಜತೆಯೂ ಚರ್ಚಿಸಿಲ್ಲ.
– ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ