ಮುಂಬಯಿ, ಆ. 15: ಪದವಿ, ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ಕೋರ್ಸ್‌ಗಳ ಅಂತಿಮ ವರ್ಷದ ಪರೀಕ್ಷೆಗಳನ್ನು ಮುಂದೂಡುವ ನಿರ್ಧಾರವನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ನಿರಾಕರಿಸಿದ್ದು, ಪರೀಕ್ಷೆಗಳು ಕ್ರಮವಾಗಿ ಆಗಸ್ಟ್ 17 ಮತ್ತು ಆಗಸ್ಟ್ 25ರಿಂದ ಪ್ರಾರಂಭವಾಗಲಿಈಎ ಎಂದಿದೆ.
ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಸುರೇಂದ್ರ ತವಾಡೆ ಅವರ ನ್ಯಾಯಪೀಠ ಪರೀಕ್ಷೆಗಳನ್ನು ಮುಂದೂಡುವುದು ಸೂಕ್ತವೆಂದು ನಾವು ಭಾವಿಸುವುದಿಲ್ಲ ಎಂದು ಹೇಳಿದೆ. ದೈಹಿಕ ಪರೀಕ್ಷೆಗೆ ಹಾಜರಾಗಲು ಸಿದ್ಧರಿರುವ ಅರ್ಜಿದಾರರನ್ನು ಹೊರತುಪಡಿಸಿ ವಿದ್ಯಾರ್ಥಿಗಳು ಇರಬಹುದು. ಅಲ್ಲದೆ ವಿದ್ಯಾರ್ಥಿಗಳು ಅದಕ್ಕಾಗಿ ಸಿದ್ಧರಾಗಿರಬಹುದು. ಅದನ್ನು ಬಿಟ್ಟು ಪರೀಕ್ಷೆಗಳಿಂದ ಹಿಂದು ಸರಿಯುವುದ ಸೂಕ್ತವಲ್ಲ ಎಂದು ಹೇಳಿದೆ.
ಮಹಾರಾಷ್ಟ್ರ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (ಎಂಯುಎಚ್‌ಎಸ್) ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದ್ದನ್ನು ಪ್ರಶ್ನಿಸಿ ರಾಜ್ಯದ ವಿವಿಧ ಜಿಲ್ಲೆಗಳ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ (ಬಿಡಿಎಸ್) ಮತ್ತು ಮಾಸ್ಟರ್ ಆಫ್ ಡೆಂಟಲ್ ಸರ್ಜರಿ (ಎಂಡಿಎಸ್) ಕೋರ್ಸ್‌ಗಳ 24 ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ವಿಚಾರಣೆ ನಡೆಸಿತು. ಕೋರ್ಸ್‌ಗಳ ಪರೀಕ್ಷೆಗಳು,ಪ್ರಾಯೋಗಿಕಕ್ಕೆ ವಿದ್ಯಾರ್ಥಿಗಳ ದೈಹಿಕ ಉಪಸ್ಥಿತಿ ಅಗತ್ಯವಿರುತ್ತದೆ ಎಂದು ನ್ಯಾಯಪೀಠ ಹೇಳಿದೆ.
ವಿದ್ಯಾರ್ಥಿಗಳ ಪರ ಸಲಹೆಗಾರ, ವಕೀಲ ಕುಲದೀಪ್ ನಿಕಮ್ ಮಾತನಾಡಿ, ರಾಜ್ಯದ ಕೋವಿಡ್ ಸನ್ನಿವೇಷದಿಂದ ವಿದ್ಯಾರ್ಥಿಗಳು ದೈಹಿಕವಾಗಿ ಪರೀಕ್ಷೆಗಳಿಗೆ ಹಾಜರಾಗಲು ಕಷ್ಟವಾಗುತ್ತದೆ ಎಂದು ವಾದಿಸಿದ್ದರು. ಯುಜಿಸಿ ಸೂಚಿಸಿರುವಂತೆ ಅರ್ಜಿದಾರರು ಮತ್ತು ಇತರ ವಿದ್ಯಾರ್ಥಿಗಳು ಆನ್‌ಲೈನ್ ಪರೀಕ್ಷೆಗಳಿಗೆ ಹಾಜರಾಗಲು ಹಿಂಜರಿಯುವುದಿಲ್ಲ ಎಂದು ಅವರು ಹೇಳಿದರು. ನಿನ್ನೆ ಸ್ವತಃ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸೋಂಕಿಗೆ ಒಳಗಾಗಿದ್ದಾರೆ ಎಂದು ನಿಕಮ್ ತಿಳಿಸಿ ನ್ಯಾಯಾಲಯದ ಗಮನಸೆಳೆದರು.
ನೀವು ವೈದ್ಯರು. ಈ ಪರೀಕ್ಷೆಗಳಿಗೆ ದೈಹಿಕವಾಗಿ ಹಾಜರಾಗಲು ನೀವು ಸಿದ್ಧರಿಲ್ಲದಿದ್ದರೆ, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ನೀವು ಹೇಗೆ ಚಿಕಿತ್ಸೆ ನೀಡುತ್ತೀರಿ ಎಂದು ನ್ಯಾಯಾಧೀಶರು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು. ಯಾವುದೇ ಅರ್ಜಿದಾರರು ಆಗಸ್ಟ್ 17 ಮತ್ತು ಆಗಸ್ಟ್ 25ರಿಂದ ಪ್ರಾರಂಭವಾಗುವ ಪರೀಕ್ಷೆಗಳಿಗೆ ಹಾಜರಾಗದಿದ್ದರೆ ಬಳಿಕ ದೈಹಿಕ ಪರೀಕ್ಷೆಗಳಿಗೆ ಹಾಜರಾಗಲು ನಿರಾಕರಿಸಿದರಲ್ಲಿ ಪ್ರತ್ಯೇಕ ಪರೀಕ್ಷೆಗಳನ್ನು ನಡೆಸಲು ಎಂಯುಎಚ್‌ಎಸ್ ಗೆ ಆದೇಶಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಮಹಾರಾಷ್ಟ್ರದ ಎಲ್ಲ ಡೀಮ್ಡ್ ವಿಶ್ವವಿದ್ಯಾಲಯಗಳು ಈಗಾಗಲೇ ತಮ್ಮ ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸಿವೆ. ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಪರೀಕ್ಷೆಗಳಿಗೆ ಹಾಜರಾಗದಿದ್ದರೆ, ಅವರು ಸೂಪರ್ -ಸ್ಪೆಷಾಲಿಟಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ ಎಂದು ಎಂಯುಎಚ್ ಎಸ್ ಸಲಹೆಗಾರ, ವಕೀಲ ರಾಜಶೇಖರ್ ಗೋವಿಲ್ಕರ್ ಗಮನಸೆಳೆದರು.