Advertisement

Rakhi Sawant ಅವರಿಗೆ ಬಲವಂತವಾಗಿ ಕಿಸ್ ; ಮಿಕಾ ಸಿಂಗ್ ವಿರುದ್ಧದ ಕೇಸ್ ರದ್ದು

05:05 PM Jun 15, 2023 | Team Udayavani |

ಮುಂಬಯಿ: ನಟ ರಾಖಿ ಸಾವಂತ್ ಅವರನ್ನು ಬಲವಂತವಾಗಿ ಚುಂಬಿಸಿದ ಆರೋಪದ ಮೇಲೆ ಗಾಯಕ ಮಿಕಾ ಸಿಂಗ್ ವಿರುದ್ಧ 2006ರಲ್ಲಿ ದಾಖಲಾಗಿದ್ದ ಪ್ರಕರಣವನ್ನು ಬಾಂಬೆ ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ.

Advertisement

ನ್ಯಾಯಮೂರ್ತಿಗಳಾದ ಎ.ಎಸ್.ಗಡ್ಕರಿ ಮತ್ತು ಎಸ್. ಜಿ.ಧಿಗೆ ಅವರ ವಿಭಾಗೀಯ ಪೀಠವು ಸೌಹಾರ್ದಯುತವಾಗಿ ಸಮಸ್ಯೆಯನ್ನು ಪರಿಹರಿಸಲು ರಾಖಿ ಸಾವಂತ್ ಅವರು ಒಪ್ಪಿಗೆ ನೀಡಿದ ಅಫಿಡವಿಟ್ ಅನ್ನು ಗಣನೆಗೆ ತೆಗೆದುಕೊಂಡು ಪ್ರಕರಣದಲ್ಲಿ ಸಲ್ಲಿಸಲಾದ ಎಫ್‌ಐಆರ್ ಮತ್ತು ಆರೋಪಪಟ್ಟಿಯನ್ನು ರದ್ದುಗೊಳಿಸಿದ್ದಾರೆ.

2006 ಜೂನ್ 11 ರಂದು ಮುಂಬೈನ ರೆಸ್ಟೋರೆಂಟ್‌ನಲ್ಲಿ ಸಾವಂತ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಿಂಗ್ ಬಲವಂತವಾಗಿ ಚುಂಬಿಸಿದ ನಂತರ ಎಫ್‌ಐಆರ್ ದಾಖಲಿಸಲಾಗಿತ್ತು. ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 354 (ದೌರ್ಜನ್ಯ) ಮತ್ತು 323 (ಹಲ್ಲೆ) ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು.

ಸಿಂಗ್, ಈ ವರ್ಷದ ಎಪ್ರಿಲ್‌ನಲ್ಲಿ, ಪೊಲೀಸರು ಸಲ್ಲಿಸಿದ ಎಫ್‌ಐಆರ್ ಮತ್ತು ನಂತರದ ಆರೋಪಪಟ್ಟಿಯನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದರು. ರಾಖಿ ಸಾವಂತ್ ಅವರು ಸಲ್ಲಿಸಿದ ಅಫಿಡವಿಟ್ ಅನ್ನು ಹೈಕೋರ್ಟ್ ಗುರುವಾರ ಪರಿಶೀಲಿಸಿ, ಅದರಲ್ಲಿ ಅವರು “ನಮ್ಮ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಂಡಿದ್ದೇವೆ ಮತ್ತು ನಮ್ಮ ಕಡೆಯಿಂದ ತಪ್ಪು ತಿಳುವಳಿಕೆ ಮತ್ತು ತಪ್ಪುಗ್ರಹಿಕೆಯಿಂದ ಇಡೀ ವಿವಾದ ಉದ್ಭವಿಸಿದೆ ಎಂದು ಅರಿತುಕೊಂಡಿದ್ದೇವೆ” ಎಂದು ಹೇಳಿದ್ದಾರೆ. ಎಫ್‌ಐಆರ್ ಮತ್ತು ಚಾರ್ಜ್‌ಶೀಟ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next