Advertisement

ಆಪ್‌ ಸರಕಾರವನ್ನು ತರಾಟೆಗೆ ತೆಗೆದುಕೊಂಡ ದಿಲ್ಲಿ ಹೈಕೋರ್ಟ್‌

04:36 PM Jul 02, 2018 | udayavani editorial |

ಹೊಸದಿಲ್ಲಿ  : ರಾಷ್ಟ್ರ ರಾಜಧಾನಿ ದಿಲ್ಲಿಯ ಶೇ.100 ಅನುದಾನಿತ ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯದಂತಹ ಮೂಲ ಸೌಕರ್ಯಗಳೇ ಇಲ್ಲದಿರುವ ಬಗ್ಗೆ ದಿಲ್ಲಿ ಹೈಕೋರ್ಟ್‌ ಆಮ್‌ ಆದ್ಮಿ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

Advertisement

ಈ ಮೂಲ ಸೌಕರ್ಯಗಳನ್ನು ದಿಲ್ಲಿ ಸರಕಾರ ತನ್ನ ಅನುದಾನಿತ ಶಾಲೆಗಳಲ್ಲಿ  ಕೂಡಲೇ ವ್ಯವಸ್ಥೆಗೊಳಿಸಬೇಕು ಎಂದು ಪ್ರಭಾರ ಮುಖ್ಯ ನ್ಯಾಯಾಧೀಶೆ ಗೀತಾ ಮಿತ್ತಲ್‌ ಮತ್ತು ಜಸ್ಟಿಸ್‌ ಸಿ ಹರಿಶಂಕರ್‌ ಅವರನ್ನು ಒಳಗೊಂಡ ಪೀಠವು ಆದೇಶಿಸಿದೆ. 

ದಿಲ್ಲಿಯ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಈಶಾನ್ಯ ದಿಲ್ಲಿಯಲ್ಲಿನ ಆಲೋಕ್‌ ಪುಂಜ್‌ ಹಿರಿಯ ಮಾಧ್ಯಮಿಕ ಶಾಲೆಗೆ ಖುದ್ದು ಭೇಟಿ ನೀಡಿ ಅಲ್ಲಿನ ಇತರ ಮೂಲ ಸೌಕರ್ಯಗಳನ್ನು ಕೊರತೆಗಳನ್ನು ಪರಿಶೀಲಿಸಬೇಕು ಎಂದು ಪೀಠವು ಆದೇಶಿಸಿತು. 

Advertisement

Udayavani is now on Telegram. Click here to join our channel and stay updated with the latest news.

Next