Advertisement

ಕ್ಯಾನ್ಸರ್‌ ಟ್ಯೂಮರ್‌ ಆದ ಚುಚ್ಚು ಮದ್ದು :ತ.ನಾ. ಸರಕಾರಕ್ಕೆ ನೊಟೀಸ್

03:34 PM Mar 21, 2017 | Team Udayavani |

ಚೆನ್ನೈ : ಈರೋಡ್‌ ಜಿಲ್ಲೆಯಲ್ಲಿ, ಈಗ ಐದು ವರ್ಷದವನಾಗಿರುವ ಬಾಲಕನು ಒಂದು ವರ್ಷದ ಮಗುವಿದ್ದಾಗ ಆತನಿಗೆ ಕೊಡಲಾಗಿದ್ದ ಚುಚ್ಚು ಮದ್ದಿನ ಪರಿಣಾಮವಾಗಿ ಕ್ಯಾನ್ಸರ್‌ ಟ್ಯೂಮರ್‌ ಉಂಟಾದ ಬಗ್ಗೆ ಮಾಧ್ಯಮದಲ್ಲಿ ಪ್ರಕಟಗೊಂಡ ವರದಿಯನ್ನು ಆಧರಿಸಿಕೊಂಡು ಮದ್ರಾಸ್‌ ಹೈಕೋರ್ಟ್‌ ಸ್ವಯಂಪ್ರೇರಣೆಯಿಂದ ತಮಿಳು ನಾಡು ಸರಕಾರಕ್ಕೆ ನೊಟೀಸ್‌ ಜಾರಿ ಮಾಡಿದೆ.

Advertisement

ಈರೋಡ್‌ ಜಿಲ್ಲೆಯ ಕುಮಾರಪಾಳ್ಯಂ ಎಂಬಲ್ಲಿನ ಅನ್‌ಬರಸು ಎಂಬ ಬಾಲಕನಿಗೆ ಆತ ಒಂದು ವರ್ಷದವನಿದ್ದಾಗ ಕೊಡಲಾಗಿದ್ದ ಚುಚ್ಚು ಮದ್ದು ಅನಂತರದಲ್ಲಿ ಕ್ಯಾನ್ಸರ್‌ ಟ್ಯೂಮರ್‌ ಆಗಿ ಬೆಳದಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. 

ಈ ವರದಿಯ ಆಧಾರದಲ್ಲಿ  ಜಸ್ಟಿಸ್‌ ಎಸ್‌ ನಾಗಮುತ್ತು ಮತ್ತು ಜಸ್ಟಿಸ್‌ ಅನಿತಾ ಸುಮಂತ್‌ ಅವರನ್ನು ಒಳಗೊಂಡ ಮದ್ರಾಸ್‌ ಹೈಕೋರ್ಟ್‌ ನ ವಿಭಾಗೀಯ ಪೀಠ, ಈ ಬಗ್ಗೆ ಮಾರ್ಚ್‌ 27 ಅಥವಾ ಅದಕ್ಕೆ ಮುನ್ನ ಉತ್ತರಿಸುವಂತೆ ತಮಿಳು ನಾಡು ಸರಕಾರದ ಆರೋಗ್ಯ ಕಾರ್ಯದರ್ಶಿಗೆ ನೊಟೀಸ್‌ ಜಾರಿ ಮಾಡಿತು. 

Advertisement

Udayavani is now on Telegram. Click here to join our channel and stay updated with the latest news.

Next