Advertisement

Govt Quota; ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯ

01:25 AM Jun 16, 2024 | Team Udayavani |

ಬೆಂಗಳೂರು: ಸರಕಾರಿ ಕೋಟಾದಡಿ ವೈದ್ಯಕೀಯ ಶಿಕ್ಷಣ ಪಡೆದವರಿಗೆ ಒಂದು ವರ್ಷದ ಗ್ರಾಮೀಣ ಸೇವೆ ಕಡ್ಡಾಯಗೊಳಿಸಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ. ಮೆರಿಟ್‌ ಮತ್ತು ಆನ್‌ಲೈನ್‌ ಕೌನ್ಸೆಲಿಂಗ್‌ ಮೂಲಕ ಗ್ರಾಮೀಣ ಸೇವೆಯ ಆಯ್ಕೆಯನ್ನು ಮಾಡಿಕೊಳ್ಳಲು ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಹಿಂದೆ ನಿರ್ದಿಷ್ಟ ವೈದ್ಯ ಗ್ರಾಮೀಣ ಸೇವೆ ಸಲ್ಲಿಸದಿದ್ದರೆ ಕರ್ನಾಟಕ ವೈದ್ಯಕೀಯ ಮಂಡಳಿಯಿಂದ ಪ್ರಮಾಣಪತ್ರ ಕೊಡುತ್ತಿರಲಿಲ್ಲ. ಈಗ ದುಬಾರಿ ದಂಡ ಪಾವತಿಸಿ ಪ್ರಮಾಣಪತ್ರ ಪಡೆಯಲು ಅವಕಾಶ ನೀಡಿದೆ.

Advertisement

ಈ ಹಿಂದೆ ರಾಜ್ಯದಲ್ಲಿ ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯವಿತ್ತು. ಕಳೆದ ವರ್ಷ ರಾಜ್ಯ ಸರಕಾರ ಸೇವೆ ಕಡ್ಡಾಯವಲ್ಲ ಎಂಬ ಕಾಯಿದೆ ತಂದಿತ್ತು. ಇದನ್ನು ವಿರೋಧಿಸಿ ಕೆಲವರು ಹೈಕೋರ್ಟ್‌ಗೆ ಅರ್ಜಿ ಹಾಕಿದ್ದರು. ಹೈಕೋರ್ಟ್‌ ಗ್ರಾಮೀಣ ಸೇವೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಸರಕಾರ ಹೊಸ ಅಧಿಸೂಚನೆ ಹೊರಡಿಸಿದೆ.

ಪ್ರತೀ ಖಾಸಗಿ, ಡೀಮ್ಡ್ ಮತ್ತು ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕೋರ್ಸ್‌ ಮುಗಿಸಿದ ವಿದ್ಯಾರ್ಥಿಗಳ ವಿವರವನ್ನು ಸಕ್ಷಮ ಪ್ರಾ ಧಿಕಾರಕ್ಕೆ ನೀಡಬೇಕು. ಅಭ್ಯರ್ಥಿಗಳ ಕುಂದು ಕೊರತೆ ಆಲಿಸಲು ಮತ್ತು ಪೋಸ್ಟಿಂಗ್‌ನ ವಿವಿಧ ಸ್ಥಳಗಳನ್ನು ಶಿಫಾರಸು ಮಾಡಲು ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ನಿರ್ದೇಶಕರ ಅಧ್ಯಕ್ಷತೆಯಲ್ಲಿ, ಒಟ್ಟು ಏಳು ಅ ಧಿಕಾರಿಗಳನ್ನೊಳಗೊಂಡ ಸಕ್ಷಮ ಪ್ರಾ ಧಿಕಾರನ್ನು ರಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next