ಹೊಸದಿಲ್ಲಿ : ಸಾರ್ವಜನಿಕರಿಗೆ ಅನನುಕೂಲ ಉಂಟು ಮಾಡುವ ರೀತಿಯಲ್ಲಿ ಮೆಟ್ರೋ ರೈಲು ಸೇವೆಯನ್ನು ತಡೆಯುವ, ರಸ್ತೆಗಳಲ್ಲಿ ತ್ಯಾಜ್ಯವನ್ನು ತಂದು ಸುರಿಯುವ ಪ್ರತಿಭಟನಕಾರರ ವಿರುದ್ದ ಕಠಿನ ಕ್ರಮ ತೆಗೆದುಕೊಳ್ಳಬೇಕು ಎಂದು ದಿಲ್ಲಿ ಹೈಕೋರ್ಟ್ ಕಟ್ಟಪ್ಪಣೆ ಮಾಡಿದೆ.
ಜನರಿಗೆ ತೊಂದರೆ ಉಂಟು ಮಾಡುವ ಈ ರೀತಿಯ ಬೇಜವಾಬ್ದಾರಿಯ ಪ್ರತಿಭಟನಕಾರರನ್ನು ಜೈಲಿಗೆ ಅಟ್ಟಬೇಕು ಎಂದು ಪ್ರಭಾರ ಮುಖ್ಯ ನ್ಯಾಯಾಧೀಶೆ ಗೀತಾ ಮಿತ್ತಲ್ ಮತ್ತು ಜಸ್ಟಿಸ್ ಸಿ ಹರಿ ಶಂಕರ್ ಅವರನ್ನು ಒಳಗೊಂಡ ಪೀಠವಾಗಿ ಖಂಡತುಂಡವಾಗಿ ಹೇಳಿತು.
ಕಳೆದ ಮೇ 31ರಂದು ದಿಲ್ಲಿಯಲ್ಲಿ ಮೆಟ್ರೋ ರೈಲು ಸೇವೆಯನ್ನು ತಡೆದ ಪ್ರತಿಭಟನಕಾರರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಸಲ್ಲಿಸಲಾಗಿದ್ದ ಪಿಐಎಲ್ ವಿಚಾರಣೆಗೆ ಎತ್ತಿಕೊಂಡ ದಿಲ್ಲಿ ಹೈಕೋರ್ಟ್, ಈ ಬಗ್ಗೆ ಕೇಂದ್ರ ಸರಕಾರ, ದಿಲ್ಲಿ ಮೆಟ್ರೋ ರೈಲು ನಿಗಮ, ಸಿಐಎಸ್‌ಎಫ್ ಮತ್ತು ಪೊಲೀಸ್ ಪಡೆಗೆ ನೊಟೀಸ್ ಜಾರಿ ಮಾಡಿತು.