ವಾಷಿಂಗ್ಟನ್ : ಬಾರಿ ಮಳೆಯಿಂದಾಗಿ ಪ್ರವಾಹ, ಭೂಕುಸಿತ ಮತ್ತು ಅಣೆಕಟ್ಟು ತುಂಬಿ ಹರಿದ ಕಾರಣ ಮುನ್ನೆಚ್ಚರಿಕ ಕ್ರಮವಾಗಿ ಹವಾಯಿ ಗವರ್ನರ್ ಡೇವಿಡ್ ಇಗೆ ಯು.ಎಸ್. ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಹೆಚ್ಚುತ್ತಿರುವ ನೀರಿನಿಂದ ಮಟ್ಟದ ಕಾರಣದಿಂದ ಅಪಾಯದ ಭೀತಿಯಲ್ಲಿರುವವರನ್ನು ಜನರನ್ನು ಸ್ಥಳಾಂತರಿಸಲು ಅಧಿಕಾರಿಗಳು ಆದೇಶಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಓದಿ : ನನ್ನ ಹತ್ಯೆ ಮಾಡಿ, ಆದರೆ ಮಕ್ಕಳನ್ನ ಕೊಲ್ಲದಿರಿ : ಯೋಧರ ಎದುರು ಗೋಗರೆದ ಕ್ರೈಸ್ತ ಸನ್ಯಾಸಿನಿ
ಮಾಯಿ ದ್ವೀಪದಲ್ಲಿ ಅಣೆಕಟ್ಟು ಉಕ್ಕಿ ಹರಿದ ಪರಿಣಾಮ ಅಪಾರ ಆಸ್ತಿ ಪಾಸ್ತಿಗಳಿಗೆ ನಾಶ ಉಂಟಾಗಿದೆ. ಅಣೆಕಟ್ಟಿನ ಸ್ಥಿತಿಯು ಅಪಾಯದಲ್ಲಿರುವುದರಿಂದ ಈ ವರ್ಷ ಅದನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ ಎಂದು ಭೂ ಇಲಾಖೆ ಮಾಹಿತಿ ನೀಡಿದೆ.
ಈ ಸ್ಥಿತಿ ಶುಕ್ರವಾರದವರೆಗೆ ಮುಂದುವರಿಯುವ ಸಾಧ್ಯತೆಯಿದ್ದು, ಈಗಾಗಲೇ ಈ ಪ್ರವಾಹಕ್ಕೆ ಒಳಗಾದವರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಡೇವಿಡ್ ಇಗೆ ತಿಳಿಸಿದ್ದಾರೆ.
ಹವಾಯಿ, ಮಾಯಿ, ಕಲಾವಾವೊ, ಒವಾಹು ಮತ್ತು ಕೌವಾಯಿ ಕೌಂಟಿಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಲಾಗಿದೆ ಗವರ್ನರ್ ಕಚೇರಿ ತಿಳಿಸಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಓದಿ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 254 ಅಂಕ ಏರಿಕೆ, ಐಟಿ ಷೇರುಗಳಿಗೆ ಲಾಭ