Advertisement

Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ

02:11 AM Dec 29, 2024 | Team Udayavani |

ಬೆಂಗಳೂರು: ಹವ್ಯಕ ಸಮಾಜವು ಅಡಿಕೆಯಲ್ಲಿ ವಿವಿಧ ಪ್ರಯೋಗಗಳನ್ನು ಮಾಡುತ್ತ ಬರುತ್ತಿದೆ. ಅಡಿಕೆಯ ಬಣ್ಣ ಹೆಚ್ಚಾಗಲು ರೆಡ್‌ಆಕ್ಸೆ„ಡ್‌ ಹಾಗೂ ವಿವಿಧ ಕಲಬೆರಕೆ ಬಳಸುತ್ತಾರೆಂಬ ಕೆಟ್ಟ ಹೆಸರು ಅಂಟಿಕೊಂಡಿದೆ. ಆದ್ದರಿಂದ ಕೇಂದ್ರ ಸರಕಾರ ಅಡಿಕೆ ಕೃಷಿಕರ ಪರವಾಗಿದ್ದು, ಅಡಿಕೆಯ ಹಿತ ಕಾಯಲು ಬದ್ಧವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭರವಸೆ ನೀಡಿದರು.

Advertisement

ಅಖೀಲ ಹವ್ಯಕ ಮಹಾಸಭಾದಿಂದ ಅರಮನೆ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ “ಸಾಕ್ಷಾತ್ಕಾರ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಗುಟ್ಕಾದಲ್ಲಿ ವಿಷದ ಅಂಶ ಇರುತ್ತದೆಯೇ ಹೊರತು ಪೂರ್ಣ ಅಡಿಕೆಯಲ್ಲಿ ಅಲ್ಲ. ಈ ಬಗ್ಗೆ ಅಡಿಕೆಗೆ ಅಂಟಿರುವ ಕಳಂಕವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಬೆಂಬಲಕ್ಕೆ ನಿಲ್ಲಲಿದೆ ಎಂದು ಸ್ಪಷ್ಟಪಡಿಸಿದರು.

ಹವ್ಯಕ ಸಮಾಜ ಚಿಕ್ಕ ಸಮಾಜವಾದರೂ ದೇಶವೇ ಮೊದಲು ಎಂದು ಯೋಚಿಸುವ, ಬುದ್ಧಿವಂತ, ವಿದ್ಯಾವಂತ, ಜಾಗೃತವಾಗಿ ಮುಂದುವರಿದ ಸಮಾಜ ಎಂದು ಹೇಳಿದ ಅವರು, ರಾಮಚಂದ್ರಾಪುರ ಮಠ, ಸ್ವರ್ಣವಲ್ಲೀ ಮಠ, ನೆಲಮಾವು ಮಠಗಳ ಮಾರ್ಗದರ್ಶನದಲ್ಲಿ ಹವ್ಯಕ ಸಮುದಾಯ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ. ಈ ಮೂರು ಪೀಠಗಳು ದೇಶಾದ್ಯಂತ ಗೋರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ದೇಶಿ ತಳಿಗಳನ್ನು ಉಳಿಸಿ-ಬೆಳೆಸುವ ಕೆಲಸ ಮಾಡುತ್ತಿವೆ ಎಂದರು. ಈ ಸಂದರ್ಭದಲ್ಲಿ 81ವೈದಿಕ ವಿದ್ವಾಂಸರಿಗೆ ಹವ್ಯಕ ವೇದರತ್ನ, 81 ಆದರ್ಶ ಶಿಕ್ಷಕರಿಗೆ ಹವ್ಯಕ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next