Advertisement

ಯೋಧನಿಗೆ ಸಿಕ್ಕಿದ್ದು “ಅಕ್ರಮ ವಲಸಿಗ’ಪಟ್ಟ!

07:10 AM Oct 02, 2017 | Team Udayavani |

ಗುವಾಹಟಿ: ಬರೋಬ್ಬರಿ 30 ವರ್ಷಗಳ ಕಾಲ ದೇಶಕ್ಕಾಗಿ ಸೇವೆ ಸಲ್ಲಿಸಿದ ಅಸ್ಸಾಂ ಮೂಲದ ನಿವೃತ್ತ ಯೋಧರೊಬ್ಬರಿಗೆ ಸಿಕ್ಕಿದ್ದು “ಅಕ್ರಮ ಬಾಂಗ್ಲಾದೇಶಿ ವಲಸಿಗ’ ಎಂಬ ಪಟ್ಟ! ಅಷ್ಟೇ ಅಲ್ಲ, ಅವರ ವಿರುದ್ಧ ಅಸ್ಸಾಂ ಪೊಲೀಸರು ದೂರನ್ನೂ ದಾಖಲಿಸಿಕೊಂಡಿದ್ದಾರೆ.

Advertisement

ತಾನು ಬಾಂಗ್ಲಾ ವಲಸಿಗನಲ್ಲ, ಭಾರತೀಯ ನಾಗರಿಕ ಎಂದು ನಿವೃತ್ತ ಜೆಸಿಒ ಮೊಹಮ್ಮದ್‌ ಅಜ್ಮಲ್‌ ಹಖ್‌ ಅವರು ಎಷ್ಟೇ ಹೇಳಿದರೂ ಯಾರೂ ಕೇಳುತ್ತಿಲ್ಲ. ಗಾಯದ ಮೇಲೆ ಬರೆ ಎಂಬಂತೆ ವಿದೇಶಿಗರ ನ್ಯಾಯಾಧಿಕರಣವು ಇದೀಗ ಅವರಿಗೆ ನೀವು ಭಾರತೀಯ ನಾಗರಿಕ ನೆಂದು ಸಾಬೀತುಪಡಿಸಿ ಎಂದು ಸೂಚಿಸಿ ನೋಟಿಸ್‌ ಕೂಡ ಜಾರಿ ಮಾಡಿದೆ. ಹಖ್‌ ಅವರು 30 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, 2016ರ ಸೆ.30ರಂದು ನಿವೃತ್ತಿಯಾಗಿದ್ದರು. ಈ ಕುರಿತು ಮಾತನಾಡಿ ರುವ ಹಖ್‌, “ನನ್ನ ವಿರುದ್ಧ 1871ರಲ್ಲಿ ಸೂಕ್ತ ದಾಖಲೆಗಳಿಲ್ಲದೇ ಭಾರತಕ್ಕೆ ಬಂದಿರುವ ಅಕ್ರಮ ವಲಸಿಗ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ. ದೇಶ ಕ್ಕಾಗಿ 30 ವರ್ಷ ಸೇವೆ ಸಲ್ಲಿಸಿದ ನನಗೆ ಇಂತಹುದೊಂದು ಅವಮಾನವನ್ನು ತಡೆದು ಕೊಳ್ಳಲಾಗುತ್ತಿಲ್ಲ. ಈ ಎಲ್ಲ ಘಟನೆಗಳಿಂದ ನನ್ನ ಹೃದಯ ಚೂರಾಗಿದೆ. ನಾನು ಬಾಂಗ್ಲಾದೇಶಿ ಯಾಗಿದ್ದರೆ ಭಾರತೀಯ ಸೇನೆಯನ್ನೇಕೆ ಸೇರುತ್ತಿದ್ದೆ’ ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ, ಹಖ್‌ ಅವರ ಪರ ವಕೀಲರು ಈ ವಿಚಾರವನ್ನು ಟ್ವಿಟರ್‌ನಲ್ಲಿ ಪ್ರಸ್ತಾವಿಸಿದ್ದು, ಸೇನೆಯ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸೇನೆಯು, ನಿವೃತ್ತ ಯೋಧನಿಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next