Advertisement

ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ

04:25 PM Nov 08, 2024 | Team Udayavani |

ಉದಯವಾಣಿ ಸಮಾಚಾರ
ಹಾವೇರಿ/ಶಿಗ್ಗಾವಿ: ಮುಡಾ ಹಗರಣದಲ್ಲಿ ಸಿಲುಕಿಕೊಂಡಿರುವ ಸಿಎಂ ಸಿದ್ದರಾಮಯ್ಯಗೆ ತಾನು ತಪ್ಪು ಮಾಡಿದ್ದೇನೆ ಎಂಬ ಭಾವನೆಯೇ ಇಲ್ಲವಾಗಿದ್ದು, ಇಂತಹ ಕ್ಕಿಷ್ಟಕರ ಪರಿಸ್ಥಿತಿಗೆ ತಾನೇ ಕಾರಣ ಎಂಬ ಮನವರಿಕೆಯೂ ಇಲ್ಲ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

Advertisement

ಶಿಗ್ಗಾವಿ ಉಪಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ವಿವಿಧ ಮಠಗಳಿಗೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದ ಇತಿಹಾಸದಲ್ಲಿ ಸಿಎಂ ಕಾನೂನಿನ ವಿಚಾರಣೆ ನಡೆಸಿಲ್ಲ. ತಮ್ಮ ತಪ್ಪೇನೆಂಬುದು ಅವರಿಗೆ ಅರಿವೇ ಆಗಿಲ್ಲ. ಹೀಗಾಗಿ ಸಿದ್ದರಾಮಯ್ಯ ಒಬ್ಬ ಪಂಜರದ ಗಿಳಿ ಎಂದು ಹೇಳಿರುವುದಾಗಿ ಸೋಮಣ್ಣ ತಮ್ಮ ಹೇಳಿಕೆ ಸಮರ್ಥಿಸಿಕೊಂಡರು.

ಬಿಜೆಪಿ ನಾಯಕರು ಬೇಲ್‌ ಮೇಲಿದ್ದಾರೆ ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸಿಎಂಗೆ ಆತ್ಮಸಾಕ್ಷಿ ಇರುವುದೇ ಆಗಿದ್ದರೆ ಸರಿಯಾದ ರಾಜಕಾರಣಿಯಾಗಿದ್ದಲ್ಲಿ ತಾನು ಮಾಡಿದ ಪಾಪದ ಕೆಲಸ ಏನು ಎಂದು ಹೇಳಲೀ? ಸಿದ್ದರಾಮಯ್ಯ ಮಾಡಿದ ಪಾಪದ ಕೆಲಸಕ್ಕೆ ನಾವು ಹೊಣೆಯೇ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ , ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಬೇಲ್‌ ಮೇಲೆ ಇದ್ದಾರೆ. ಅದರಂತೆಯೇ ಈಗ ಸಿದ್ದರಾಮಯ್ಯಗೆ ಆಗುತ್ತಿದೆ ಎಂದು ಹೇಳಿದರು. ಮುಸಲ್ಮಾನರ ಓಲೈಕೆ ಕೆಲಸ ಇಲ್ಲಿಯ ತನಕ ನಿಂತಿಲ್ಲ. ಇದಕ್ಕೆ ಅಂಕಿತ ಹಾಡೋದಕ್ಕೆ, ಪ್ರಧಾನಿ ನರೇಂದ್ರ ಮೋದಿ ದೊಡ್ಡ ಕೆಲಸ ಮಾಡುತ್ತಿದ್ದಾರೆ. ಇನ್ನೂ ಒಂದು ತಿಂಗಳಲ್ಲಿ ಇವೆಲ್ಲದಕ್ಕೂ ಸುಖಾಂತ್ಯ
ಸಿಗಲಿದೆ. ಕೇಂದ್ರದಲ್ಲಿ ಈ ಸಂಬಂಧ ಬಿಲ್‌ ಜಾರಿಯಾಗಲಿದೆ.

ಲಕ್ಷಾಂತರ ಜನಕ್ಕೆ ಇದರಿಂದ ಅನುಕೂಲವಾಗಲಿದೆ. ವಕ್ಫ್ ಆಸ್ತಿ ವಿವಾದ ಬಿಜೆಪಿ ಆಹಾರವನ್ನಾಗಿ ಮಾಡಿಕೊಂಡಿಲ್ಲ. ಈ ಪಾಪದ ಕೆಲಸಕ್ಕೆ ಸಿದ್ದರಾಮಯ್ಯನೇ ಹೊಣೆಯಾಗಿದ್ದು, ಇದನ್ನು ಇದ್ದಕ್ಕಿದ್ದ ಹಾಗೇ ಸೃಷ್ಟಿ ಮಾಡಿದ್ದೂ ಅವರೇ ಆಗಿದ್ದಾರೆ ಎಂದರು.

Advertisement

ಹುಬ್ಬಳ್ಳಿಯಲ್ಲಿ ತಮಗೆ ಜಮೀರ್‌ ಅಹ್ಮದ್‌ ಸಿಕ್ಕಿದ್ದರು. ಆಗ ಅವರಿಗೆ ವಿಜಯಪುರಕ್ಕೆ ಹೋಗಿ ಜನರ ನೆಮ್ಮದಿ ಹಾಳು ಮಾಡಿದ್ದೀಯಾ, ಜನ ನಿನಗೆ ಬುದ್ಧಿ ಕಲಿಸುತ್ತಾರೆ ಎಂದು ಹೇಳಿರುವುದಾಗಿ ತಿಳಿಸಿದರು. ತನ್ನ ಬಳಿ ತಗ್ಗಿ ಬಗ್ಗಿ ನಡೆಯಬೇಕು ಎಂದು ಡಿ.ಕೆ. ಶಿವಕುಮಾರ್‌ ಸಂಸದ ತೇಜಸ್ವಿ ಸೂರ್ಯಗೆ ಹೇಳಿರುವ ವಿಚಾರವಾಗಿ, ಯಾರು ಈ ರೀತಿ ಮಾತನಾಡುತ್ತಾರೆಯೋ ಅದು ಅವರ ವ್ಯಕ್ತಿತ್ವ ತೋರಿಸುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next