Advertisement

ಶಾಲಾ, ಕಾಲೇಜಿನಲ್ಲಿ ತಮಾಷೆ ಹದ್ದು ಮೀರದಿರಲಿ

03:58 PM Dec 03, 2018 | |

ಸವಣೂರು: ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮಧ್ಯೆ ತಮಾಷೆ, ತರಲೆ ಸಾಮಾನ್ಯವಾಗಿರುತ್ತವೆ. ಆರೋಗ್ಯಕರವಾದ ತರಲೆ ತಮಾಷೆಗಳನ್ನು ಒಂದು ಮಟ್ಟಕ್ಕೆ ಸಹಿಸಬಹುದು. ಆದರೆ, ಅದು ಮಿತಿ ಮೀರಿದಾಗ ಕ್ರಮ ಕೈಗೊಳ್ಳುವುದು ಪೊಲೀಸ್‌ ಇಲಾಖೆಗೆ ಅನಿವಾರ್ಯವಾಗುತ್ತದೆ ಎಂದು ಡಿವೈಎಸ್‌ಪಿ  ಎಲ್‌.ವೈ. ಶಿರೋಳಕರ ಹೇಳಿದರು.

Advertisement

ಸ್ಥಳೀಯ ಸರ್ಕಾರಿ ಮಜೀದ್‌ ಪಪೂ ಕಾಲೇಜಿನಲ್ಲಿ ಹಾವೇರಿ ಜಿಲ್ಲಾ ಪೊಲೀಸ್‌ ಇಲಾಖೆ ಹಾಗೂ ಶಿಗ್ಗಾವಿ ಉಪವಿಭಾಗದ ಸವಣೂರು ಪೊಲೀಸ್‌ ಠಾಣೆಯ ಆಶ್ರಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಸ್ವಯಂ ರಕ್ಷಣೆ ಪ್ರಾತ್ಯಕ್ಷಿಕೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸ್ವಯಂ ಸಂರಕ್ಷಣೆಗೆ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ಸಮಗ್ರವಾಗಿ ವಿವರಣೆಗಳನ್ನು ನೀಡಿದ ಅವರು, ಪೊಲೀಸ್‌ ಇಲಾಖೆ ಮಹಿಳೆ ಮತ್ತು ವಿದ್ಯಾರ್ಥಿನಿಯರ ಸುರಕ್ಷತೆ ಮತ್ತು ರಕ್ಷಣೆಗೆ ಮೊದಲ ಆದ್ಯತೆ ನೀಡಿ ಕೆಲಸ ಮಾಡುತ್ತದೆ. ದೌರ್ಜನ್ಯಗಳನ್ನು ತಡೆಯಲು ಪೊಲೀಸ್‌ ಇಲಾಖೆಯೊಂದಿಗೆ ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದರು.

ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ನಡೆಸಲು ಯತ್ನಿಸಿದರೆ, ಹೆದರದೆ ಮೆಟ್ಟಿ ನಿಲ್ಲುವ ಪ್ರಯತ್ನ ಮಾಡಬೇಕು. ಕೂಡಲೇ ಕಾಲೇಜಿನ ಪ್ರಾಚಾರ್ಯರಿಗೆ, ಉಪನ್ಯಾಸಕರಿಗೆ ಅಥವಾ ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು. ಕಾಲೇಜುಗಳಿಗೆ ಹೋಗಿ ಬರುವ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಗೆಳತಿಯರೊಟ್ಟಿಗೆ ಬಂದು ಹೋಗುವುದು ಒಳ್ಳೆಯದು. ಯಾವುದೇ ಕಾರಣಕ್ಕೂ ವಿದ್ಯಾರ್ಥಿನಿಯರು ಧೈರ್ಯ ಕಳೆದುಕೊಳ್ಳಬಾರದು. ಸ್ವಯಂ ರಕ್ಷಣೆ ಪ್ರಾತ್ಯಕ್ಷಿಕೆ ಕಾರ್ಯಾಗಾರವನ್ನು ವಿದ್ಯಾರ್ಥಿನಿಯರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ (ಪ್ರಭಾರಿ) ಟಿ.ಎ. ಚಲವಾದಿ ಮಾತನಾಡಿ, ವಿದ್ಯಾರ್ಥಿನಿಯರು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಅನುಸರಿಸಲು ವಿವಿಧ ಸಾಹಸ ಕಲೆಗಳನ್ನು ಕಲಿಯಬೇಕು. ಆ ನಿಟ್ಟಿನಲ್ಲಿ ಜಾಗೃತರಾಗಲು ಪೊಲೀಸ್‌ ಇಲಾಖೆ ವತಿಯಿಂದ ಕೈಗೊಂಡ ಸ್ವಯಂ ರಕ್ಷಣೆ ಪ್ರಾತ್ಯಕ್ಷಿಕೆ ಕಾರ್ಯಾಗಾರ ವಿದ್ಯಾರ್ಥಿನಿಯರಿಗೆ ತುಂಬಾ ಸಹಕಾರಿ ಎಂದರು.

ನಂತರ ನಿರ್ಭಯ ವಿಶೇಷ ಮಹಿಳಾ ಪಡೆಯಿಂದಅನಿರೀಕ್ಷಿತವಾಗಿ ಮಹಿಳೆ, ವಿದ್ಯಾರ್ಥಿನಿಯರ ಮೇಲೆ ನಡೆಯುವ ಘಟನೆ ಸಂದರ್ಭದಲ್ಲಿ ಹೇಗೆ ಪಾರಾಗಬೇಕು. ತಮ್ಮನ್ನು ತಾವು ಹೇಗೆ ರಕ್ಷಣೆ ಮಾಡಿಕೊಳ್ಳುವುದು ಎನ್ನುವ ಕುರಿತು ಸ್ವಯಂ ರಕ್ಷಣೆ ಕೌಶಲ ಪ್ರಾತ್ಯಕ್ಷಿಕೆ ನೀಡಲಾಯಿತು.

Advertisement

ಪಿಐ ಎಂ.ಆರ್‌. ಪೂಜಾರ, ಉಪನ್ಯಾಸಕರಾದ ಹೊನ್ನತ್ತಿ, ಹೂಗಾರ ಸೇರಿದಂತೆ ಉಪನ್ಯಾಸಕರು, ಪೊಲೀಸ್‌ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿದ್ದರು. ಸವಣೂರು ಪೊಲೀಸ್‌ ಠಾಣಾಧಿಕಾರಿ ಎನ್‌.ಎಚ್‌. ಮೈಲಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಎಸ್‌. ಟಿ.ಮುದಿಗೌಡ್ರ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next