Advertisement

ಲಾಕ್‌ಡೌನ್‌ ಪಾಲಿಸಲು ಡಿಸಿಎಂ ಸವದಿ ಸಲಹೆ

02:47 PM Apr 08, 2020 | Naveen |

ಕುಷ್ಟಗಿ: ಎಲ್ಲಿಯವರೆಗೆ ಲಾಕ್‌ಡೌನ್‌ ಆಗುವುದಿಲ್ಲವೋ ಅಲ್ಲಿಯವರೆಗೂ ಕೊರೊನಾ ವೈರಸ್‌ ತಡೆಯುವುದು ಕಷ್ಟ. ಹೀಗಾಗಿ ಜನತೆ ಸ್ವಯಂ ಪ್ರೇರಿತರಾಗಿ ಕಟ್ಟುನಿಟ್ಟಿನಿಂದ ಲಾಕ್‌ಡೌನ್‌ ಪಾಲಿಸಬೇಕು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

Advertisement

ಉತ್ತರ ಭಾರತದ ಕಾರ್ಮಿಕರಿಗೆ ವಸತಿ ಕಲ್ಪಿಸಿರುವ ಎಸ್‌ಸಿ ಮೆಟ್ರಿಕ್‌ ಪೂರ್ವ ವಸತಿ ನಿಲಯಕ್ಕೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಲಾಕ್‌ಡೌನ್‌ನಿಂದ ಜನರಿಗೆ ತೊಂದರೆಯಾಗುತ್ತಿದೆ ನಿಜ, ಆದರೆ ಏ.14ರವರೆಗೆ ಲಾಕ್‌ಡೌನ್‌ ಡೆಡ್‌ಲೈನ್‌ ನೀಡಲಾಗಿತ್ತು. ನಮ್ಮ ದೇಶ ಹಾಗೂ ರಾಜ್ಯದಲ್ಲಿ ವೈರಸ್‌ ಅವನತಿ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಮುಂದುವರಿಸುವ ಸಂದರ್ಭ ಬಂದರೂ ಬರಬಹುದು ಎಂದರು.

ರಾಷ್ಟ್ರಮಟ್ಟದ ತನಿಖೆ: ದೆಹಲಿಯ ನಿಜಾಮುದ್ದೀನ್‌ ಧರ್ಮಸಭೆಯಲ್ಲಿ ಭಾಗವಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರಮಟ್ಟದ ತನಿಖೆ ನಡೆಸುವ ಆಲೋಚನೆ ಇದ್ದು, ಇದರ ಬಗ್ಗೆ ಉನ್ನತ ತನಿಖೆಯಾಗುವ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚಿಂತನೆ ನಡೆದಿದೆ. ನಿಜಾಮುದ್ದೀನ್‌ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದವರು, ಕೊರೊನಾ ತಪಾಸಣೆಗೆ ಹಿಂದೇಟು ಹಾಕುತ್ತಿರುವ ಬಗ್ಗೆ ನಿಖರವಾಗಿ ಹೇಳಲು ಅಸಾಧ್ಯವಾಗಿದೆ. ಜಮಾತ್‌ಗೆ ಹೋಗಿರುವವರು ಅಲ್ಲಿನ ಮೊಬೈಲ್‌ ಟಾವರ್‌ ಆಧರಿಸಿ, ಪತ್ತೆ ಹಚ್ಚಿ ಅವರನ್ನು ತಪಾಸಣೆಗೊಳಿಸುವ ಪ್ರಕ್ರಿಯೆ ರಾಜ್ಯಾದ್ಯಂತ ನಡೆದಿದೆ. ಈ ವಿಚಾರದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರ ಹೇಳಿಕೆ ವೈಯಕ್ತಿಕ ಎಂದರು. ಅಭಿನಂದನಾರ್ಹರು: ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ, ಪೊಲೀಸರು ತಮ್ಮ ಜೀವ ಪಣಕ್ಕಿಟ್ಟು ಜನರ ಜೀವ ಉಳಿಸಲು ಶ್ರಮಿಸುತ್ತಿದ್ದಾರೆ. ಅವರಿಗೆ ಎಷ್ಟು ಅಭಿನಂದನೆ ಹೇಳಿದರೂ ಕಡಿಮೆಯೇ ಎಂದರು.

ಸುದೈವ: ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ಪ್ರಕರಣವಿಲ್ಲ ಎನ್ನುವುದು ಜಿಲ್ಲೆಯ ಸುದೈವ. ಕೊಪ್ಪಳ, ವಿಜಯಪುರದಲ್ಲಿ ಒಂದೂ ಪ್ರಕರಣಗಳು ಕಂಡು ಬಂದಿಲ್ಲ.
ಕೊರೊನಾ ವೈರಸ್‌ ನಿಯಂತ್ರಿಸುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಪ್ರಮುಖವಾಗಿದೆ ಎಂದರು. ಇದಕ್ಕೂ ಮುನ್ನ ನಿರಾಶ್ರಿತರು ತಮ್ಮನ್ನು ಇಲ್ಲಿಂದ ಬಿಡುಗಡೆಗೊಳಿಸಿ ಎಂದಿದ್ದಕ್ಕೆ ಡಿಸಿಎಂ ಲಕ್ಷ್ಮಣ ಸವದಿ ಏ. 14ರವರೆಗೆ ಇಲ್ಲೆ ಆರಾಮವಾಗಿರಿ ಎಂದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next