Advertisement

ಹಾವೇರಿ: ಮೌನಾನುಷ್ಠಾನ ಮಂಗಲ-ಗುರುವಂದನೆ

06:23 PM Jul 04, 2023 | Team Udayavani |

ಹಾವೇರಿ: ಮೌನ ಅನುಷ್ಠಾನದ ಬಲದಿಂದ ಗಳಿಸುವ ಶಕ್ತಿಯನ್ನು ಭಕ್ತರ ಉದ್ಧಾರಕ್ಕಾಗಿ ಬಳಸಿ, ಸಮಾಜದ ಉದ್ಧಾರವೇ ಮಹಾತ್ಮರ ಜೀವನದ ಪರಮ ಗುರಿ ಎಂದು ಭಾವಿಸುವ ಪರಂಪರೆಯು ಹಾವೇರಿಯ ಹುಕ್ಕೇರಿಮಠದ ಆಧ್ಯಾತ್ಮಿಕ ಸಂಪತ್ತು ಆಗಿದೆ ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಜಗದ್ಗುರು ಡಾ| ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

Advertisement

ಸ್ಥಳೀಯ ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸದಾಶಿವ ಶ್ರೀಗಳ ಜೇಷ್ಠ ಮಾಸದ ಒಂದು ತಿಂಗಳ ಪರ್ಯಂತ ಕೈಗೊಂಡ ಮೌನ ಅನುಷ್ಠಾನ ಮಂಗಲ ಹಾಗೂ ಗುರುವಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಸಾಧು ಸಂತರ ಅನುಷ್ಠಾನ, ತಪಃ ಶಕ್ತಿ ಲೋಕಕಲ್ಯಾಣಕ್ಕೆ ಬಳಕೆಯಾಗುತ್ತದೆ.
ಅನುಷ್ಠಾನದಂತಹ ಕಾರ್ಯ ಮಾಡಿದಾಗ ಶರೀರವೇ ಮಂತ್ರ ಶರೀರವಾಗಿ, ತಪಸ್ಸಿನ ಪುಣ್ಯ ಫಲವು ಭಕ್ತನಿಗೆ ದೊರೆತಾಗ ಆತನ ಸಕಲ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಸದಾಶಿವ ಸ್ವಾಮೀಜಿ ತಮ್ಮ ಗುರುಗಳಾದ ಜಗದ್ಗುರು ಡಾ| ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳ ಪಾದ ಪೂಜೆ ನೆರವೇರಿಸಿದರು. ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು. ನಿವೃತ್ತ ಶಿಕ್ಷಕರಾದ ಬಿ.ಸಿ. ಹಿರೇಮಠ, ಎ.ಎಚ್‌. ಕೋಳಿವಾಡ ಮತ್ತು ಲಕ್ಷ್ಮೀ ಗಾಮನಗಟ್ಟಿ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಸ್ವಾಮೀಜಿ, ಕೂಡಲ ಗುರು ನಂಜೇಶ್ವರಮಠದ ಗುರು ಮಹೇಶ್ವರ ಸ್ವಾಮೀಜಿ, ಹಾವನೂರು ದಳವಾಯಿಮಠದ ಶಿವಕುಮಾರ ಸ್ವಾಮೀಜಿ, ಆಸಂಗಿಯ ವೀರಬಸವ ದೇವರು, ಜಗದೀಶ ತುಪ್ಪದ, ಗಣೇಶಪ್ಪ ಹೂಗಾರ, ಶಿವಯೋಗಿ ವಾಲಿಶೆಟ್ಟರ, ಬಿ. ಬಸವರಾಜ, ಶಿವಯೋಗಿ ಯರೇಶೀಮಿ, ಶಿವಕುಮಾರ ಮುದಗಲ್ಲ, ಮಹಾಂತೇಶ ಮಳಿಮಠ, ಮಹೇಶ ಚಿನ್ನಿಕಟ್ಟಿ, ನಿರಂಜನ ತಾಂಡೂರ, ಚಂಪಾ ಹುಣಸಿಕಟ್ಟಿ, ಸುರೇಶ ಮುರಡಣ್ಣನವರ ಮತ್ತಿತರರು ಇದ್ದರು.

Advertisement

ಎಸ್‌.ಎಸ್‌. ಮುಷ್ಠಿ ಸ್ವಾಗತಿಸಿದರು. ವೀರಣ್ಣ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌.ಎನ್‌. ಮಳೆಪ್ಪನವರ ನಿರೂಪಿಸಿದರು. ಎಸ್‌ .ವಿ.ಹಿರೇಮಠ ವಂದಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next