Advertisement

Haveri: 20 ಸಾವಿರ ಲಂಚ ಪಡೆಯುವ ವೇಳೆ ಗ್ರಾಪಂ ಸದಸ್ಯ ಲೋಕಾಯುಕ್ತ ಬಲೆಗೆ

10:45 PM Nov 22, 2023 | Team Udayavani |

ಹಾವೇರಿ: ಮಳೆಯಿಂದ ಹಾನಿಯಾದ ಮನೆಯ ಜಿಪಿಎಸ್ ಮಾಡಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಪಂಚಾಯತಿ ಸದಸ್ಯನೋರ್ವ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Advertisement

ಜಿಲ್ಲೆಯ ಸವಣೂರು ತಾಲೂಕಿನ ಕಾರಡಗಿ ಗ್ರಾಪಂ ಸದಸ್ಯ ಜಾಫರ್ ಸಾಬ್ ಖಾದರಸಾಬ್ ಸಂಶಿ ಅವರು ಮಳೆಯಿಂದ ಹಾನಿಗಿಡಾದ ಮನೆಯ ಜಿಪಿಎಸ್ ಮಾಡಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ದಾದಾಪೀರ ಎಂಬುವರಿಂದ 20 ಸಾವಿರ ರೂ.,ಲಂಚ ಪಡೆಯುವ ವೇಳೆ ಲೊಕಾಯುಕ್ತ ಪೊಲೀಸರು ದಾಳಿ ನಡೆಸಿ ಗ್ರಾಪಂ ಸದಸ್ಯ ಜಾಫರ್ ಸಾಬ್ ಖಾದರಸಾಬ್ ಸಂಶಿ ಅವರನ್ನು ವಶಕ್ಕೆ ಪಡೆದಿದ್ದು, ಈ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next