Advertisement

Haveri ಗ್ಯಾಂಗ್ ರೇಪ್ ಪ್ರಕರಣಕ್ಕೆ ದಿನಕ್ಕೊಂದು ತಿರುವು: ಬೊಮ್ಮಾಯಿ ಆಕ್ರೋಶ

07:35 PM Jan 14, 2024 | Team Udayavani |

ಹಾವೇರಿ: ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಮೊದಲು ಪೊಲೀಸರು ಎಫ್ ಐಆರ್ ದಾಖಲು ಮಾಡಲು ತಯಾರಿರಲಿಲ್ಲ, ಮಹಿಳೆ ಹೇಳಿದ ಮೇಲೂ ಕೇಸ್ ದಾಖಲು ಮಾಡದೇ ಇರುವುದು ಪೊಲೀಸರ ಅಪರಾಧವಾಗಿದ್ದು ಸುಪ್ರಿಂ ಕೋಟ್೯ ಆದೇಶ ಉಲ್ಲಂಘನೆ ಮಾಡಿದ್ದಾರೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಮಹಿಳೆಗೆ 50 ಲಕ್ಷ ರೂ. ಹಣದ ಆಮಿಷ ತೋರಿಸಿದ್ದಾರೆ. ಮೊದಲು ಎಸ್ ಪಿ‌ ಸಹ ಸಿದ್ದರಿರಲಿಲ್ಲ. ಕೇಸ್ ಮುಚ್ಚಿ ಹಾಕುವ  ಪ್ರಯತ್ನವನ್ನು ಹಾನಗಲ್ ಪೊಲೀಸರು ಮಾಡುತ್ತಿದ್ದಾರೆ.6 ಮಂದಿ ಆರೋಪಿಗಳನ್ನು ಬಂಧನ ಮಾಡಿದ್ದಾರೆ.ಸಾಂತ್ವನ ಕೇಂದ್ರದಲ್ಲಿಟ್ಟು ದಿಢೀರ್ ಅಂತ ಶಿಫ್ಟ್ ಮಾಡಿದ್ದಾರೆ. ಸ್ಥಳ ಪರಿಶೀಲನೆ ಮಾಡುವುದಾಗಿ ಹೇಳಿದ ಬಳಿಕ ಸ್ಥಳಾಂತರ ಮಾಡಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ನಿಯೋಗ ,ನಾನು ಭೇಟಿ ಆಗುತ್ತೇನೆ ಎಂದು ಸ್ಥಳಾಂತರ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಈ ಪ್ರಕರಣದ ಬಗ್ಗೆ ಒಂದು ಶಬ್ದವನ್ನೂ ಮಾತನಾಡಿಲ್ಲ ಯಾಕೆ? ಬಾಯಿ ಮುಚ್ಚಿಕೊಂಡಿರುವುದೇಕೆ? ಯಾರ ಒತ್ತಡ ನಿಮ್ಮ ಮೇಲಿದೆ, ಪ್ರಕರಣವನ್ನು ಸರಕಾರ ಹಗುರವಾಗಿ ತೆಗೆದುಕೊಂಡಿದ್ದು,ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಪ್ರಕರಣ ಮುಚ್ಚಿ ಹಾಕಲು ಪೊಲೀಸರ ಮೇಲೆ ಒತ್ತಡ ಇದೆ ಎಂದು ಕಿಡಿ ಕಾರಿದರು.

ಬಂಧನವಾದ ಆರೋಪಿಗಳಲ್ಲಿ ಕೆಲವರು ಆರೋಪಿಗಳಲ್ಲ ಎಂದು ಸಂತ್ರಸ್ತೆ ಹೇಳಿದ್ದು, ಕೃತ್ಯ ಎಸಗಿದವರು ಹೊರಗಡೆ ಒಡಾಡುತ್ತಿದ್ದಾರೆ. ಅಮಾಯಕರನ್ನ ಒಳಗಡೆ ಹಾಕಿದ್ದು, ಪ್ರಕರಣ ಮುಚ್ಚಿ ಹಾಕುವುದಕ್ಕೆ ಇದೆ ಸಾಕ್ಷಿ. ಶಾಸಕರು ರಾತ್ರಿ‌ 11 ಗಂಟೆಗೆ ಭೇಟಿಯಾಗಿದ್ದಾರೆ. ರಾತ್ರಿ ಹೋಗಿ ಏನು ಮಾಡಿದ್ದಾರೆ ಎಂದು ಪ್ರಶ್ನೆಗಳ ಸುರಿಮಳೆಗೈದರು.

Advertisement

Udayavani is now on Telegram. Click here to join our channel and stay updated with the latest news.

Next