Advertisement

ಗುರುಕುಲ ಶಿಕ್ಷಣ ಪದ್ಧತಿ ಸಾರ್ವತ್ರಿಕವಾಗಲಿ

06:12 PM Oct 03, 2019 | Naveen |

ಹಾವೇರಿ: ಇಂದು ಗುರುಕುಲ ಶಿಕ್ಷಣ ಪದ್ಧತಿ ಸಾರ್ವತ್ರಿಕವಾಗಬೇಕು. ಅದಕ್ಕಾಗಿ ನಾವೆಲ್ಲರೂ ಗುರುಕುಲ ವಸತಿ ಶಾಲೆಗೆ ಸಹಕಾರ ನೀಡಬೇಕು ಎಂದು ಕರ್ನಾಟಕ ವಿಶ್ವ ವಿದ್ಯಾಲಯ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ| ವಿ. ಶಾರದಾ ಹೇಳಿದರು.

Advertisement

ತಾಲೂಕಿನ ಹೊಸರಿತ್ತಿಯಲ್ಲಿ ಮಹಾತ್ಮ ಗಾಂಧಿ  ಜಯಂತ್ಯುತ್ಸವ ಹಾಗೂ ಗಾಂಧಿ  ಗ್ರಾಮೀಣ ಗುರುಕುಲ ವಸತಿ ಶಾಲೆಯ 36ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಗುರುಕುಲ ಶಾಲೆಯು ವಿದ್ಯಾರ್ಥಿಗಳಿಗೆ ಅಕ್ಷರ ಕಲಿಸುವ ಜತೆಗೆ ಸ್ವಾವಲಂಬಿ ಜೀವನ ನಡೆಸುವ ಕಲೆ ಕಲಿಸುತ್ತಿದೆ. ಮಹಾತ್ಮ ಗಾಂಧೀಜಿ ಆದರ್ಶ, ತತ್ವಗಳನ್ನು ದೇಶದುದ್ದಗಲಕ್ಕೂ ವಿದ್ಯಾರ್ಥಿಗಳ ಮೂಲಕ ಪ್ರಸ್ತುತಪಡಿಸುತ್ತಿರುವುದು ಕರ್ನಾಟಕದ ಹೆಮ್ಮೆಯ ವಿಚಾರ ಎಂದರು.

ಪರಿಸರ ತಜ್ಞ ಶಂಕರ ಕುಂಬಿ ಮಾತನಾಡಿ, ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಯು ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಪಾಲಿಸುವ ಜತೆಗೆ ಸ್ವಚ್ಛ ಭಾರತ, ಹಸಿರು ಭಾರತಕ್ಕೆ ಮುನ್ನುಡಿ ಬರೆದು ಪ್ರಧಾನಿ ಮೋದಿಜಿಯವರ ಆಶಯಗಳನ್ನು ಕಾರ್ಯರೂಪಕ್ಕೆ ತರುತ್ತಿರುವುದು ಶ್ಲಾಘನೀಯ ಎಂದರು.

ವಯೋನಿವೃತ್ತಿ ಹೊಂದಿದ ಗುರುಕುಲದ ಮುಖ್ಯಾಧ್ಯಾಪಕ ಆರ್‌.ಎಸ್‌. ಪಾಟೀಲ ಸಂಸ್ಥೆಯಿಂದ ಸನ್ಮಾನ ಸ್ವೀಕರಿಸಿ, ಶಿಕ್ಷಕರು ಕ್ರಿಯಾಶೀಲತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ವಿದ್ಯಾರ್ಥಿಗಳೊಂದಿಗೆ ಕಾಲ ಕಳೆದು ನಿರಂತರ ಮೌಲ್ಯ ಮಾಪನ ಮಾಡಬೇಕು ಅಂದಾಗ ಮಾತ್ರ ಗ್ರಾಮೀಣ ಭಾಗದ ಮಕ್ಕಳನ್ನು ಭೂಮಿಯ ಮೇಲಿನ ನಕ್ಷತ್ರಗಳನ್ನಾಗಿ ಮಾಡಬಹುದಾಗಿದೆ ಎಂದರು.

Advertisement

ನಿವೃತ್ತಿ ಹೊಂದಿದ ಪ್ರ.ದ.ಸ. ಶಂಕರಪ್ಪಗೌಡ ಅವರನ್ನು ಸನ್ಮಾನಿಸಲಾಯಿತು. ಗುರುಕುಲದಲ್ಲಿ ವ್ಯಾಸಂಗ ಮಾಡಿ ಪ್ರಸ್ತುತ ವಿವಿಧ ಹುದ್ದೆ ಅಲಂಕರಿಸಿದ್ದ ಹಳೆಯ ವಿದ್ಯಾರ್ಥಿಗಳಾದ ಮಹೇಶ ಅರಳಿ, ರವೀಂದ್ರ ಮುದ್ದಿ, ನಾಗರಾಜ ನೀಲಣ್ಣನವರ, ಜಗದೀಶ ಬಶೆಟ್ಟಿಯವರ, ಕುಮಾರ ಬೋಗೋಜಿ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಪ್ರಧಾನ ಧರ್ಮದರ್ಶಿ ಡಾ| ದೀನಬಂಧು ಹಳ್ಳಿಕೇರಿ ಮಾತನಾಡಿ, ಕರ್ನಾಟಕದ ಉಕ್ಕಿನ ಮನುಷ್ಯ, ಸ್ವಾತಂತ್ರ ಹೋರಾಟಗಾರ ಗುದ್ಲೆಪ್ಪ ಹಳ್ಳಿಕೇರಿಯವರ ಆಶೋತ್ತರಗಳು ಈಡೇರಬೇಕೆಂದರೆ ಈ ಸಂಸ್ಥೆ ಇನ್ನಷ್ಟು ಬಲಿಷ್ಠಗೊಳ್ಳಬೇಕು. ಈ ನಿಟ್ಟಿನಲ್ಲಿ ಸರಕಾರ, ಸಮಾಜ ಕೈಜೋಡಿಸುವ ಅವಶ್ಯಕತೆ ಇದೆ ಎಂದರು.

ರಾಜೇಂದ್ರ ಹಳ್ಳಿಕೇರಿ, ಡಾ| ಅರುಣಾ ಹಳ್ಳಿಕೇರಿ, ಸಿ.ಸಿ. ಕಲಕೋಟಿ, ಬಿ.ಜಿ. ಗೌರಿಮನಿ, ಗೋಪಣ್ಣ ಕುಲಕರ್ಣಿ, ರಮೇಶ ಏಕಬೋಟೆ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಸಂಜೀವರಡ್ಡಿ ಮಾಗಡಿ, ರುದ್ರಪ್ಪ ಕೋಡಿಹಳ್ಳಿ, ಚಂದ್ರು ಅರಳಿಹಳ್ಳಿ ಇದ್ದರು. ಸಂಸ್ಥೆಯ ಸದಸ್ಯ ಧರ್ಮದರ್ಶಿ ವಿ.ಯು. ಚೆಕ್ಕಿ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯೋಪಾಧ್ಯಾಯ ಎಸ್‌. ಎಂ. ಚಳಗೇರಿ ಸ್ವಾಗತಿಸಿದರು. ಬಿ.ಎಸ್‌. ಯಾವಗಲ್‌ ನಿರ್ವಹಿಸಿದರು. ಎಂ.ಎಂ. ವಗ್ಗಣ್ಣನವರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next