ಹಾವೇರಿ: 40 ಸಾವಿರ ರೂ. ಲಂಚ ಪಡೆಯುತ್ತಿದ್ದ ಸಮಯದಲ್ಲಿ ಪೊಲೀಸರಿಬ್ಬರು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಘಟನೆ ನಡಿದಿದೆ.
Advertisement
ರಾಣೆಬೆನ್ನೂರ ಶಹರ ಠಾಣೆ ಪಿಎಸ್ಐ ಸುನೀಲ ತೇಲಿ ಮತ್ತು ವಾಹನದ ಚಾಲಕ ಸಚಿನ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪ್ರಕರಣವೊಂದರಲ್ಲಿ ದಸ್ತಗಿರಿ ಮಾಡುವುದನ್ನು ತಪ್ಪಿಸಲು ಅಥವಾ ಮುಂದೂಡಲು ಪಿಎಸ್ ಐ ಒಂದು ಲಕ್ಷ ರೂ.ಗೆ ಡಿಮಾಂಡ್ ಮಾಡಿದ್ದರು. ಅದರಲ್ಲಿ 40 ಸಾವಿರ ರೂ ಪಡೆಯುತ್ತಿದ್ದ ಸಮಯದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹಾವೇರಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.