Advertisement

ಹಾವೇರಿ: ಕಾರುಗಳ ನಡುವೆ ಮುಖಾಮುಖಿ; ನಾಲ್ವರ ದುರ್ಮರಣ

06:10 PM Apr 29, 2022 | Team Udayavani |

ಹಾವೇರಿ: ರಾಣೇಬೆನ್ನೂರು ನಗರದ ಹೊರವಲಯದಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರುಗಳ ನಡುವೆ ಮುಖಾ ಮುಖಿ ಢಿಕ್ಕಿ ಸಂಭವಿಸಿ ಸ್ಥಳದಲ್ಲೇ ನಾಲ್ವರು ಮೃತಪಟ್ಟ ದುರ್ಘಟನೆ ಶುಕ್ರವಾರ ಸಂಭವಿಸಿದೆ.

Advertisement

ಗುಜರಾತ್ ಮತ್ತು ಕೇರಳ ಪಾಸಿಂಗ್ ಹೊಂದಿರುವ ಕಾರ್‌ಗಳು ಅಪಘಾತಕ್ಕೀಡಾಗಿದ್ದು, ಗುಜರಾತ್ ಮೂಲದ ಕಾರ್‌ನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದು ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ರಾಣೇಬೆನ್ನೂರು ತಾಲ್ಲೂಕಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದುವರೆಗೂ ಮೃತರ ಹೆಸರು, ಯಾವ ಊರು ಎಂಬ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.

ಅಪಘಾತ ನಡೆದ ಸ್ಥಳಕ್ಕೆ ರಾಣೆಬೆನ್ನೂರು ಪೊಲೀಸರು, ಹಾಗೂ ಎಎಸ್ ಪಿ ವಿಜಯ್ ಕುಮಾರ್ ಸಂತೋಷ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next