Advertisement
ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ವಿಷಯ ತಿಳಿಸಿರುವ ಅವರು, ಭಾರತ-ಚೀನಾ ಗಡಿ ವಿವಾದ ಶುರುವಾದಾಗ ಎಷ್ಟು ಭೂಮಿಯನ್ನು ಹೊಂದಿದ್ದೆವೋ ಈಗಲೂ ಅಷ್ಟೇ ಭೂಮಿಯನ್ನು ನಾವು ಹೊಂದಿದ್ದೇವೆ. ಪೂರ್ವ ಲಡಾಖ್‌ನಲ್ಲಿ ಚೀನಾ ಸೇನೆಯ ತೆರವು ಬಗ್ಗೆ ಈಗಾಗಲೇ ಉಭಯ ಸೇನೆಗಳ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಹಲವು ಸುತ್ತಿನ ಮಾತುಕತೆಗಳು ಸಾಗಿವೆ. ಸದ್ಯದಲ್ಲೇ ಆ ಸಮಸ್ಯೆಯೂ ನಿವಾರಣೆಯಾಗುತ್ತದೆ ಎಂದು ನರವಾಣೆ ತಿಳಿಸಿದ್ದಾರೆ.
ಇದೇ ವೇಳೆ, ಭಾರತ-ಪಾಕ್ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ, ಪಾಕಿಸ್ತಾನದೊಳಗೆ ಇರುವ ಉಗ್ರರ ಕ್ಯಾಂಪ್‌ಗಳು ಇನ್ನೂ ಜೀವಂತವಾಗಿವೆ ಎಂದು ನರವಾಣೆ ತಿಳಿಸಿದ್ದಾರೆ. ಈ ಕ್ಯಾಂಪ್‌ಗ್ಳನ್ನು ತೆರವುಗೊಳಿಸುವುದಾಗಿ ಈ ಹಿಂದೆ ಪಾಕಿಸ್ತಾನ ವಾಗ್ಧಾನ ಮಾಡಿತ್ತು. ಆದರೆ, ಅದನ್ನು ಗಂಭೀರವಾಗಿ ಕಾರ್ಯಗತಗೊಳಿಸಿಲ್ಲ. ಈಗ ಎಲ್‌ಒಸಿಯಲ್ಲಿನ ಮಂಜು ಪೂರ್ತಿ ಕರಗಿ ಹೋದ ನಂತರ ಆಚೆ ಬದಿಯಲ್ಲಿ ಎಷ್ಟು ಉಗ್ರರ ಕ್ಯಾಂಪ್‌ಗ್ಳಿವೆ ಎಂಬ ಲೆಕ್ಕ ಗೊತ್ತಾಗುತ್ತೆ ಎಂದು ಹೇಳಿದ್ದಾರೆ.